ಪಟ್ಟಣದ ಅತಿಥಿ ಗೃಹದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ

ಪಟ್ಟಣದ ಅತಿಥಿ ಗೃಹದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ

ಹನೂರು :- ಪಟ್ಟಣದ ಅತೀ ಗಣ್ಯ ವ್ಯಕ್ತಿಗಳ ಅತಿಥಿ ಗೃಹದ ಆವರಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಶಾಸಕ ಮಂಜುನಾಥ್ ಹಾಗೂ ತಹಸೀಲ್ದಾರ್ ಧನಂಜಯ್ ರವರು ಹಡಪದ ಅಪ್ಪಣ್ಣ ರವರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡುವುದರ ಮೂಲಕ ಶ್ರೀ ಶಿವಶರಣ ಹಡಪದ ಅಪ್ಪಣ್ಣ ರವರ 889 ನೇ ಜಯಂತಿ ಆಚರಣೆ ಮಾಡಲಾಯಿತು.

 

 

 

 

 

 

 

 

 

 

 

 

ಇದೆ ಸಂದರ್ಭದಲ್ಲಿ 22- 23 ನೇ ಸಾಲಿನಲ್ಲಿ ಎಸ್ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತಿರ್ಣರಾದ ಇಪ್ಪತ್ತುಕ್ಕೂ ಹೆಚ್ಚು ಮಕ್ಕಳಿಗೆ ಶಾಸಕ ಎಮ್ ಆರ್ ಮಂಜುನಾಥ್ ಸನ್ಮಾನಿಸಿ ಬಹುಮಾನ ವಿತರಣೆ ಮಾಡಿದರು. ಇದೆ ವೇಳೆ ಮಾತನಾಡಿದ ಎಮ್ ಆರ್ ಮಂಜುನಾಥ್ 12ನೇ ಶತಮಾನದ ಸ್ರೇಷ್ಟ ವ್ಯಕ್ತಿ ಹಡಪದ ಅಪ್ಪಣ್ಣನವರು ಜಗಜ್ಯೋತಿ ಬಸವಣ್ಣನವರ ಸಮಕಾಲಿನಲ್ಲಿ ಸಮಾನತೆಯ ಪರವಾಗಿ ಹೋರಾಡಿದ ಮಹಾ ಮೇಧಾವಿಗಳು. ಬಸವಣ್ಣ ರವರ ಜೊತೆ ಆತ್ಮೀಯ ಸಂಪರ್ಕ ಹೊಂದಿದ್ದವರು ಅಪ್ಪಣ್ಣ ರವರು ಅವರ ವಿಚಾರ ಮತ್ತು ಸಿದ್ದಂತಾಗಳನ್ನು ನಾವೆಲ್ಲರೂ ಪಾಲಿಸಬೇಕು.

 

 

 

 

 

 

 

 

 

 

 

 

 

 

ಆಗಿನ ಕಾಲದಲ್ಲಿ ಅನುಭವ ಮಂಟಪ ಅನ್ನೋದು ಇವಾಗಿನ ಕ್ಯಾಬಿನೆಟ್ ಅ ಕಾಲದಲ್ಲೇ ಆಡಳಿತ ಹೇಗೆ ನಡೆಸಬೇಕು ಎಂಬ ಕಾರ್ಯ ಕೈಗೊಂಡಿದ್ದರು ಬಸವಣ್ಣ ನವರು ಅವರ ಜೊತೆ ನೇರ ಸಂಪರ್ಕದಲ್ಲಿ ಇದ್ದುಕೊಂಡು ಸಮಾಜಕ್ಕೆ ಉತ್ತಮವಾದ ಕೊಡುಗೆ ಕೊಟ್ಟ ಹಡಪದ ಅಪ್ಪಣ್ಣ ರ ಜಯಂತಿ ಆಚರಣೆ ಮಾಡಲು ನಮಗೆ ತುಂಬಾ ಖುಷಿಯ ವಿಚಾರ. ಅದೇ ರೀತಿ ಎಲ್ಲಾ ನಮ್ಮ ದೇಶದ ಕವಿ.ಸಂತರು. ಸಾಧಕರಿಗೆ ವಿಶೇಷ ಪಠ್ಯ ಮಾಡುವ ಕೆಲಸ ಆಗಬೇಕು ಅಂತಹ ಒಂದು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ. ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಎಲ್ಲಾ ಉತ್ತಮ ಶಿಕ್ಷಣ ಪಡೆಯಿರಿ ಎಂದು ಮಂಜುನಾಥ್ ಕಿವಿ ಮಾತು ಹೇಳಿ ಮಾತನಾಡಿದರು.

 

 

 

 

 

 

 

 

 

 

 

 

 

 

ಇನ್ನು ಈ ಸಂದರ್ಭದಲ್ಲಿ ಸವಿತ ಸಮಾಜದ ಚಾಮರಾಜನಗರ ತಾಲೂಕು ಅಧ್ಯಕ್ಷರು ಬಸವರಾಜ್ ಕೊಳ್ಳೇಗಾಲ ತಾಲೂಕು ಅಧ್ಯಕ್ಷರು ಸಿದ್ದ ಶೆಟ್ಟಿ ಯಳಂದೂರು ತಾಲೂಕು ಅಧ್ಯಕ್ಷರು ಶ್ರೀಕಂಠ ರಾಮಪುರ ಒಬಳಿ ಅಧ್ಯಕ್ಷರು ಸಿದ್ದರಾಜು ಹನೂರು ಕ್ಷೆತ್ರ ಶಿಕ್ಷಣ ಅಧಿಕಾರಿಗಳು ಶಿವರಾಜ್ ಜಿಲ್ಲಾ ಗೌರವ ಅಧ್ಯಕ್ಷರು ಪಾಂಡು ಹನೂರು ತಾಲೂಕು ಅಧ್ಯಕ್ಷರು ಮಹಾದೇವ ನಿವೃತ್ತ ಶಿಕ್ಷಕರು ಶಿವಣ್ಣ ಅರಣ್ಯ ಇಲಾಖೆ ಹಾಗೂ ಹಲವಾರು ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಸಮುದಾಯದ ಮುಖಂಡರುಗಳು ಭಾಗಿಯಾಗಿದ್ದರು.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version