ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸದ ಆಡಳಿತ ಮಂಡಳಿ ವಿರುದ್ಧ : ರಸ್ತೆ ತಡೆದು ರೈತರಿಂದ ಪ್ರತಿಭಟನೆ
ಹನೂರು :- ತಾಲೂಕಿನ ಪ್ರಸಿದ್ದ ಯಾತ್ರ ಸ್ಥಳ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ತಿಂಗಳಿಗೆ ಕೋಟಿ ಕೋಟಿ ಭಕ್ತರ ಹಣ ಸಂಗ್ರಹ ಆಗುತ್ತಿದ್ದರು ಕೂಡ ಆಡಳಿತ ಮಂಡಳಿ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸದೆ ಇರುವ ಕಾರಣ ಸಾರ್ವಜನಿಕರು ಹಾಗು ಚಾಮರಾಜನಗರ ಜಿಲ್ಲಾ ರೈತ ಸಂಘದ ವತಿಯಿಂದ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.ಹಾಗು ಕೆಲ ತಿಂಗಳ ಹಿಂದೆ ಚುನಾವಣೆ ಪ್ರಚಾರಕ್ಕಾಗಿ ಮಹದೇಶ್ವರರ 108 ಅಡಿಯ ಪ್ರತಿಮೆ ಉದ್ಘಾಟನೆ ಮಾಡಿ ಭಕ್ತರಿಗೆ ಅವಕಾಶ ನೀಡದೆ ಇರುವುದಕ್ಕೆ ಭಕ್ತಾದಿಗಳು ಹಾಗು ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.ಹಾಗು ಪ್ರತಿಮೆ ಸುತ್ತ ತಡೆ ಗೋಡೆಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದೂ ಸುತ್ತಲು ಇರುವ ಕಲ್ಲುಗಳು ಕೆಳಗೆ ಉರುಳಿವೆ ದೊಡ್ಡ ಭ್ರಷ್ಟಾಚಾರ ಎಸಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ದೇವಸ್ಥಾನ ಸುತ್ತ ಮುತ್ತಲ ಪ್ರದೇಶದಲ್ಲಿ ಕಸ ಕಡ್ಡಿ ಎಲ್ಲಾ ತುಂಬಿ ಅನೈರ್ಮಲ್ಯದಿಂದ ಕುಡಿರುವುದು ಭಕ್ತರಿಗೆ ಮುಜುಗರ ಉಂಟು ಮಾಡಿದೆ. ದಿನ ನಿತ್ಯ ಬರುವ ಲಕ್ಷಾಂತರ ಭಕ್ತರಿಗೆ ಸರಿಯಾದ ಸೌಚಾಲಯ ವ್ಯವಸ್ಥೆ ಇಲ್ಲ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಆಡಳಿತ ಮಂಡಳಿ ಯಾವ ರೀತಿ ಕೆಲಸ ಮಾಡುತ್ತಿದೆ ನಿಮಗೆ ನಾಚಿಕೆ ಆಗಲ್ಲವೇ ಎಂದು ರೈತರು ಇಡೀ ಶಾಪ ಹಾಕಿದ್ದಾರೆ.
ಹಾಗು ದಾಶೋಹ ಭವನದಲ್ಲಿ ಭಕ್ತರಿಗೆ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಭಕ್ತರಿಂದ ಕೋಟಿ ಕೋಟಿ ದೇಣಿಗೆ ಸಂಗ್ರಹ ಆಗುತ್ತಿದ್ದರು ಭಕ್ತರಿಗೆ ಮೂಲ ಸೌಕರ್ಯ ಸೌಲಭ್ಯ ಒದಗಿಸಲು ಆಗಲ್ಲವೇ ಎಂದು ಆಡಳಿತ ಮಂಡಳಿಯ ವಿರುದ್ಧ ಕಿಡಿ ಕಾರಿದ್ದಾರೆ. ಮಾದಪ್ಪನ ಬಳಿಗೆ ಬರುವ ಭಕ್ತರಿಗೆ ಸಮರ್ಪಕವಾಗಿ ಮೂಲ ಸೌಕರ್ಯ ಒದಗಿಸಲು ರೈತ ಸಂಘದ ವತಿಯಿಂದ ಒತ್ತಾಯಸಿ ಅಗ್ರಹಿಸಿದ್ದಾರೆ.
ಇಲ್ಲದಿದ್ದರೆ ದೇವಸ್ಥಾನಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಸಂಘದವರು ಎಚ್ಚರಿಕೆ ನೀಡಿದ್ದಾರೆ. ಇನ್ನು ಇದೆ ಸಂದರ್ಭದಲ್ಲಿ ನಾಗರಾಜ್.ಮಲಿಯೂರು ಹರ್ಷ. ಉಡಿಗಾಲ ರೇವಣ್ಣ.ಮಹದೇವಸ್ವಾಮಿ. ಹಡ್ಯಾ ರವಿ ಕೆ ಕೆ ಹುಂಡಿ ರಾಜಣ್ಣ.ಹರವೆ ಶಿವಣ್ಣ.ನಂದೀಶ್. ಸೋಮ. ಗುರುಮೂರ್ತಿ. ಮಂಜು.ನಾಗೇಂದ್ರ. ನಂಜುಂಡಸ್ವಾಮಿ. ಮುಂತಾದವರು ಇದ್ದರು.
ವರದಿ :-ನಾಗೇಂದ್ರ ಪ್ರಸಾದ್