ಅಂತರ್ಜಲ ಚೇತನ ರೈತರಿಗೆ ವರದಾನ.
ಗುಬ್ಬಿ- ಕೆಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಅಂತರ್ಜಲ ಚೇತನ ಎಂಬ ಯೋಜನೆಯಿಂದ ಗ್ರಾಮೀಣ ಪ್ರದೇಶಗಳ ರೈತರ ಜಮೀನಿನಲ್ಲಿ ಅಂತರ್ಜಲ ಹೆಚ್ಚಿಸುವ ಕಾಮಗಾರಿ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಗುಬ್ಬಿ ತಾಲ್ಲೂಕಿನ ಕ್ವಾರ್ಡಿನೇಟರ್ ಜನಾರ್ಧನ್ ತಿಳಿಸಿದರು.
ಗುಬ್ಬಿ ನಗರದ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ಡಾ ಶ್ರೀ ಶ್ರೀ ರವಿಶಂಕರ್ ಗುರೂಜಿ ಯವರ ಆರ್ಟ್ ಆಫ್ ಲಿವಿಂಗ್ ಸೆಂಟರ್ ನ ಸಹಯೋಗದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂತರ್ಜಲ ಚೇತನ ಯೋಜನೆಯನ್ನು ರೂಪಿಸಲಾಗಿದೆ ಈ ಯೋಜನೆ ಸಂಪೂರ್ಣ ಕೆಂದ್ರ ಸರ್ಕಾರದ ಯೋಜನೆಯಾಗಿದ್ದು ಗುಬ್ಬಿ ತಾಲ್ಲೂಕಿನ 34 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮಗಳಿಗೆ ಒಳಪಟ್ಟಿದ್ದು ಗ್ರಾಮ ಪಂಚಾಯ್ತಿಗೆ ಒಬ್ಬರು ಆಸಕ್ತಿಯುಳ್ಳ ಯುವಕರನ್ನು C P O ಗಳನ್ನು (ಗ್ರಾಮ ಪಂಚಾಯ್ತಿ ಕ್ವಾರ್ಡಿನೇಟರ್)ಆಗಿ ಆಯ್ಕೆ ಮಾಡುವ ಮೂಲಕ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಈ ಯೋಜನೆಯ ಅಡಿಯಲ್ಲಿ ಗ್ರಾಮೀಣ ಭಾಗದ ರೈತರ ಜಮೀನಿನಲ್ಲಿ ಯಾವ ರೀತಿಯಲ್ಲಿ ಕೇಲಸ ಮಾಡಿದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂಬುದರ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುವ ಮೂಲಕ ರೈತರ ಜೊತೆಗೂಡಿ ರೈತರಿಂದಲೇ ಯಾವುದೇ ಯಂತ್ರಗಳ ಸಹಯವಿಲ್ಲದಂತೆ ಕಾಮಗಾರಿ ನೇಡೆಸುವುದರಿಂದ ರೈತರಿಗೆ ಉದ್ಯೋಗ ಖಾತರಿಯಿಂದ ಅವರ ಕೂಲಿ ದೂರಕಿಕೊಡುವುದು ಇದರ ಉದ್ದೇಶವಾಗಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ರೈತರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಲು ಮುಂದಾದರೆ 1700 ರಿಂದ 1800 ನೂರು ಅಡಿ ಆಳವಾಗಿ ಕೊರೆಸಿದರು ನೀರು ಸಿಗುವುದಿಲ್ಲ ಅಂತರ್ಜಲ ಸಂಪೂರ್ಣ ಕೆಳಮುಖವಾಗಿ ಹೋಗಿದೆ ಇದಕ್ಕೆ ಮನುಷ್ಯನ ದುರಾಸೆಯು ಕಾರಣ ನಾವುಗಳು ಪ್ರಕೃತಿಯಲ್ಲಿನ ಪರಿಸರ ಸಂರಕ್ಷಣೆ ಮಾಡದೆ ನಾಷಮಾಡುತ್ತಿರುವುದರ ಫಲವಾಗಿ ಅಂತರ್ಜಲ ಬತ್ತಿಹೋಗುತ್ತಿದೆ ಮುಂದಿನ ದಿನಗಳಲ್ಲಿ ನಾವು ನೀರಿಗಾಗಿ ಪರಿತಪಿಸುವ ಪರಿಣಾಮ ಎದುರಿಸುವ ಪರಿಸ್ಥಿಯನ್ನು ಕಾಣುವ ದಿನಗಳು ದೂರವಿಲ್ಲ ಎಂದರು.
ಈ ಯೋಜನೆಯಲ್ಲಿ ನೇರವಾಗಿ ಹಳ್ಳಿ ಜನ ಕೇಲಸ ಮಾಡುತ್ತಾರೆ ಅವರೆ ಹಣ ಪಡೆಯುತ್ತಾರೆ ನಾವುಗಳು ರೈತರ ಬಳಿ ಹೋಗಿ ಇದರಿಂದಾಗುವ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ ಒಬ್ಬ ರೈತನ ಕೊಳವೆ ಬಾವಿ ಬತ್ತಿಹೋದರೆ ಅತನು ಕನಿಷ್ಠ ಪಕ್ಷ ಐದು ಲಕ್ಷ ಮತ್ತೆ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ ಅದನ್ನು ತಡೆಗಟ್ಟಲು ನಾವು ರೈತರ ಜಮೀನಿನಲ್ಲಿ ಮಳೆ ನೀರು ಸಂಗ್ರಹವಾಗುವಂತ ಜಾಗವನ್ನು ಗುರುತಿಸಿ ಜಿ ಪಿ ಎಸ್ ಮಾಡುವ ಮೂಲಕ ರೀಚಾರ್ಜ ಬೊರ್ ವೆಲ್ ಮಾಡಿ ಅಲ್ಲಿ ಶೇಖರಣೆ ಆದಂತಹ ನೀರು ಕೊಳವೆ ಬಾವಿಗೆ ಹೋಗಿ ಅಲ್ಲಿನ ಅಂತರ್ಜಲ ಹೆಚ್ಚಿದಾಗ ರೈತರಿಗೆ ನೀರಿನ ಸಮಸ್ಯೆ ಇಲ್ಲಾದಂತಾಗಿ ಅವರು ಚಾನೆಲ್ ನೀರು ಬರುವವರೆಗೂ ಕಾಯುವಂತ ಪರಿಸ್ಥಿತಿ ಎದುರಾಗುವುದ್ದಿಲ್ಲ ಈ ಯೋಜನೆ ಸಫಲವಾಗಬೇಕೆಂದರೆ ರೈತರ ಸಹಕಾರ ತುಂಬಾ ಅಗತ್ಯವಿದೆ ಇದರ ಪ್ರಯೋಜನವನ್ನು ತಾಲ್ಲೂಕಿನ ಎಲ್ಲಾ ರೈತ ಬಂದುಗಳು ಪಡೆಯಲು ಮುಂದಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ನಿಂಗೇಗೌಡ ನಿಟ್ಟುರು ನಾಗಭೂಷಣ್ . C S ಪುರ ರವಿಗೌಡ .ಚಿಕ್ಕರಂಗೆಗೌಡ. ಚನ್ನಬಸವಯ್ಯ. ಬೈರೇಶ್. ಶಿವಕುಮಾರ್. ಶಿವರಾಜ್ .ಮುಂತಾದವರು ಭಾಗವಹಿಸಿದ್ದರು