ಸಿದ್ದರಾಮಯ್ಯ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ
ದೇವನಹಳ್ಳಿ : ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಸಭೆಯೊಂದರಲ್ಲಿ ಧಲಿತಮುಖಂಡರು ಬಿಜೆಪಿ ಸೇರಿರುವುದು ಹೊಟ್ಟೆಪಾಡಿಗಾಗಿ ಎಂಬ ಅವಹೇಳನಕಾರಿ ಮಾತುಗಳನ್ನು ಆಡಿರುವುದನ್ನು ಖಂಡಿಸಿ ಬಿಜೆಪಿ ಎಸ್ಸಿಮೋರ್ಚ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೊರ್ಚ ಕಾರ್ಯದರ್ಶಿ ಹನುಮಂತಪ್ಪ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಸಿದ್ದರಾಯಮ್ಮ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಉನ್ನತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಕನಿಷ್ಠ ಪ್ರಜ್ಞ ಇಲ್ಲದೆ ಮೈಕ್ ಸಿಕ್ಕಿದಾಕ್ಷಣ ಮಾತನಾಡುವುದನ್ನು ನಿಲ್ಲಿಸಬೇಕು. ಕಾಂಗ್ರೇಸ್ ಪಕ್ಷ ದಲಿತರಿಗೆ ಮೀಸಲಾತಿ ನೀಡಿಲ್ಲ. ಡಾ.ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಮೀಸಲಾತಿ ಸಿಕ್ಕಿದೆ ಹೊರತು ಕಾಂಗ್ರೇಸ್‌ನಿಂದಲ್ಲ. ಸಂವಿಧಾನ ರಚನೆ ಮಾಡಿದ ಸಂದರ್ಭದಲ್ಲಿ ಕೇವಲ 16 ಜಾತಿ ಮಾತ್ರ ಇತ್ತು ಅವರು ಶೋಷಣೆಗೊಳಪಟ್ಟಂತಹವರು ಅವರನ್ನು ಗುರುತಿಸಿ ಅವರನ್ನು ಮೇಲೆತ್ತುವ ಕೆಲಸ ಮಾಡಲಾಗಿದೆ ಅದಕ್ಕೆ ಎಲ್ಲರು ಸ್ವಾಗತ ಮಾಡೋಣ ಆದರೆ ಸಿದ್ದರಾಮಯ್ಯನವರು ನಾವು ಮೀಸಲಾತಿ ನೀಡಿರುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬೇರೆ ಬೇರೆ ಜಾತಿಗಳನ್ನು ಎಸ್ಸಿ ಸಮುದಾಯಕ್ಕೆ ಸೇರಿಸಿ 116 ಜಾತಿಗಳಾಗಿವೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬೇರೆ ಬೇರೆ ಜಾತಿಗಳನ್ನು ಸೇರಿಸಿ ಮೀಸಲಾತಿ ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ಮಾಡಿದ್ದಾರೆ. ಅಂಬೇಡ್ಕರ್ ಅವರು ಚುನಾವಣೆಗೆ ನಿಂತಂತಹ ಸಂದರ್ಭದಲ್ಲಿ ಕಾಂಗ್ರೇಸ್ ನೆಹರು ನೇತೃತ್ವದ ಸರಕಾರ ಅಂಬೇಡ್ಕರ್ ವಿರುದ್ಧವಾಗಿ ಒಬ್ಬ ಅನಕ್ಷರಸ್ತನನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದ ಕೀರ್ತಿ ಕಾಂಗ್ರೇಸ್ ಪಕ್ಷಕ್ಕೆ ಸಲ್ಲುತ್ತದೆ ಹೊರತು ಬಿಜೆಪಿಗಲ್ಲ. ಅಂದಿನಿಂದಿಲೂ ಡಾ.ಅಂಬೇಡ್ಕರ್ ಅವರಿಗೂ ತೊಂದರೆ ನೀಡುತ್ತಾಬಂದಿದ್ದಾರೆ. ಆಟಲ್ ಬಿಹಾರಿ ವಾಜಿಪೇಯಿ ಅವರಬೆಂಬಲದಿAದ ರಚನೆಯಾದಂತಹ ವಿ.ಪಿ ಸಿಂಗ್ ನೇತೃತ್ವದ ಸರಕಾರ ಡಾ ಡಾ.ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿದ್ದಾರೆ ಎಂದರು.
ಬಿಜೆಪಿ ರಾಜ್ಯ ಎಸ್ಸಿಮೋರ್ಚ ಖಜಾಂಚಿ ಎ.ಕೆ.ಪಿ.ನಾಗೇಶ್ ಮಾತನಾಡಿ ಹೆಚ್ಚು ಧಲಿತ ಮುಖಂಡರು ಬಿಜೆಪಿ ಪಕ್ಷದಲ್ಲಿರುವುದನ್ನು ಸಹಿಸಲಾರದೆ ಸಿದ್ದರಾಮಯ್ಯನವರು ದಲಿತರು ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದು ಹೊಟ್ಟೆಪಾಡಿಗಾಗಿ ಎಂದು ಹೇಳಿರುವುದು ಖಂಡನೀಯ ಸಿದ್ದರಾಮಯ್ಯನವರು ಜೆಡಿಎಸ್ ತೊರೆದು ಹೊಟ್ಟೆಪಾಡಿಗಾಗಿ ಅಥವ ಮಿರಸಾಧಕ ಕೆಲಸ ಮಾಡಲು ಕಾಂಗ್ರೇಸ್ ಬಂದರೊ ಗೊತ್ತಿಲ್ಲ. ಮಾಜಿಮುಖ್ಯಮಂತ್ರಿ ಹಾಗು ಉನ್ನತ ಸ್ಥಾನದಲ್ಲಿರುವವರು ಈರೀತಿ ಮತ್ತೊಬ್ಬರನ್ನು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ತಾಲ್ಲೂಕು ಎಸ್ಸಿಮೋರ್ಚ ಅಧ್ಯಕ್ಷ ಮುನಿರಾಜು, ಜಿಲ್ಲಾ ಎಸ್ಸಿಮೊರ್ಚ ಪ್ರಧಾನ ಕಾರ್ಯದರ್ಶಿ ಗಣೇಶ್ ಭಾಬು, ಎಸ್ಟಿ ಮೊರ್ಚ ತಾಲ್ಲೂಕು ಅಧ್ಯಕ್ಷ ಅಂಬರೀಶ್, ಮಹಿಳಾಮೊರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗವೇಣಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ, ಪುನೀತ ಸೈನಿಕ ಪ್ರಕೋಷ್ಠ ಸಂಚಾಲಕ ವೆಂಕಟೇಶ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಇದ್ದರು.
ಮಂಜು ಬೂದಿಗೆರೆ
9113813926