ಬೃಹತ್ ವ್ಯಾಕ್ಸಿನ್ ಮೇಳಕ್ಕೆ ಹರಿದುಬಂದ ಜನಸಾಗರ

 

 

ತುಮಕೂರು:ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರವನ್ನು ಕೋರೋನ ಲಸಿಕೆ ಮುಕ್ತ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ಸಕ್ರಿಯ ಆಸ್ಪತ್ರೆಯ ಸಹಯೋಗದಲ್ಲಿ ಮೇಗಾ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದ್ದಾರೆ.

ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರ ನಿವಾಸದ ಆವರಣದಲ್ಲಿ ಹಮ್ಮಿಕೊಂಡಿದ್ದ ೧೦ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಎಲ್ಲಿ ನೋಡಿದರೂ ಲಸಿಕೆಯ ಆಭಾವ ಕಂಡುಬರುತ್ತಿದೆ.ಜನರಲ್ಲಿ ಲಸಿಕೆ ಇಲ್ಲದೆ ಮೂರನೇ ಅಲೆಯನ್ನು ಎದುರಿಸುವುದು ಹೇಗೆ ಎಂಬ ಭೀತಿ ಉಂಟಾಗಿದೆ ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಬೃಹತ್ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

 

 

ಲಸಿಕೆ ನೀಡುವ ಕುರಿತು ಈಗಾಗಲೇ ವ್ಯಾಪಕ ಪ್ರಚಾರವನ್ನು ಕ್ಷೇತ್ರದಾದ್ಯಂತ ಹಮ್ಮಿಕೊಂಡ ಪರಿಣಾಮ ಬೆಳಗ್ಗೆ ೬ ಗಂಟೆಯಿAದಲೇ ಜನರು ನಮ್ಮ ಮನೆಯ ಆವರಣಕ್ಕೆ ಬಂದು,ಸರದಿ ಸಾಲಿನಲ್ಲಿ ನಿಂತಿದ್ದರು. ಅವರಿಗಾಗಿ ಬೆಳಗಿನ ತಿಂಡಿ, ಮದ್ಯಾಹ್ನದ ಊಟ, ಕುಡಿಯುವ ನೀರು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಗ್ಗೆ ೭ ಗಂಟೆಯಿAದ ಮಧ್ಯಾಹ್ನ ೩ ಗಂಟೆಯವರೆಗೂ ನಿರಂತರವಾಗಿ ನೂರಾರು ನುರಿತ ವೈದ್ಯಕೀಯ ಸಿಬ್ಬಂದಿಗಳು,ಈ ಭಾಗದ ಆಶಾ ಕಾರ್ಯಕರ್ತೆಯರು, ಜೆಡಿಎಸ್ ಸ್ವಯಂ ಸೇವಕರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದೇವೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.

 

ದೇಶದಲ್ಲಿ ಕೋವಿಡ್ ರೋಗ ಪ್ರಾರಂಭವಾದಾಗಿನಿAದಲೂ ನಾನು ಸೇರಿದಂತೆ ನಮ್ಮೆಲ್ಲಾ ಕಾರ್ಯಕರ್ತರು ಜೀವದ ಹಂಗು ತೊರೆದು ಕ್ಷೇತ್ರದ ಜನತೆಯ ಆರೋಗ್ಯ ಕಾಪಾಡಲು ಮುಂದಾಗಿದ್ದೇವೆ.ಮೊದಲನೇ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಸುಮಾರು ೯೦ ಸಾವಿರ ಕುಟುಂಬಗಳಿಗೆ ಅಕ್ಕಿ, ಬೆಳೆ, ಸಕ್ಕರೆ ಇನ್ನಿತರ ದಿನಸಿ ಪಧಾರ್ಥಗಳನ್ನು ಒಳಗೊಂಡ ಕಿಟ್‌ಗಳನ್ನು ವಿತರಿಸಲಾಗಿದೆ.ಸುಮಾರು ೫೦ ಲಕ್ಷ ರೂ ಬೆಲೆಯ ಮಾಸ್ಕ್,ಸಾನಿಟೈಜರ್,ಗ್ಲೌಸ್ ಜೊತೆಗೆ ಔಷಧಿಗಳನ್ನು ವಿತರಿಸಲಾಗಿದೆ.ಮೂರನೇ ಅಲೆ ಎದುರಿಸಲು ನಮ್ಮ ಮನೆಯ ಆವರಣದಲ್ಲಿ ೩೦ ಐಸಿಯು ಬೆಡ್,೫೦ ಅಕ್ಸಿಜನ್ ಬೆಡ್‌ಗಳನ್ನು ಒಳಗೊಂಡ ಆಸ್ಪತ್ರೆಯನ್ನು ಸಿದ್ದಪಡಿಸಲಾಗುತ್ತಿದೆ.ಕ್ಷೇತ್ರದ ಜನರು ಆತಂಕ ಪಡುವ ಅಗತ್ಯವಿಲ್ಲ.ನನ್ನಂತಹ ನೂರಾರು ಶಾಸಕರನ್ನು ಹುಟ್ಟು ಹಾಕುವ ಶಕ್ತಿ ಇರುವ ನಿಮ್ಮಗಳಲ್ಲಿ ಒಬ್ಬರನ್ನು ಕಳೆದುಕೊಳ್ಳಲು ನಾನು ಸಿದ್ದನಿಲ್ಲ ಎಂದು ಬಾವುಕರಾಗಿ ನುಡಿದರು.

 

ಕ್ಷೇತ್ರದ ಜನರ ಆರೋಗ್ಯವಲ್ಲದೆ ಅವರ ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ.ಕ್ಷೇತ್ರದಲ್ಲಿ ಯಾವುದೇ ಮಗು ೧೦ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ೯೫ಕ್ಕಿಂತ ಹೆಚ್ಚು ಅಂಕ ಪಡೆದರೆ ಆ ಮಗುವಿಗೆ ೨೫ ಸಾವಿರ ರೂ ಸಹಾಯಧನ ನೀಡುವ ಕೆಲಸ ಮಾಡಲಾಗುತ್ತಿದೆ. ಕೋವಿಡ್‌ನಿಂದ ತತ್ತರಿಸಿರುವ ಜನರು,ಮಕ್ಕಳ ಶಾಲೆಗಳ ಫೀ ಕಟ್ಟಲಾಗದೆ ತತ್ತರಿಸಿದ್ದಾರೆ.ಹಾಗಾಗಿ ಅವರ ನೆರವಿಗೆ ನಿಲ್ಲುವುದು ನನ್ನ ಜವಾಬ್ದಾರಿಯಾಗಿದೆ.ಆ ಕೆಲಸದಲ್ಲಿ ನಾನು ತಲ್ಲೀನನಾ ಗಿದ್ದೇನೆ.ಮಾನವೀಯತೆಯೆ ಜೆಡಿಎಸ್ ಪಕ್ಷದ ಉಸಿರು,ಪಕ್ಷದ ಎಲ್ಲರೂ ಇದನ್ನು ಪಾಲಿಸುತ್ತಿದ್ದೇವೆ ಎಂದರು.

ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಬೇಡ:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಉತ್ತಮವಾಗಿಯೇ ಕೆಲಸ ಮಾಡುತ್ತಿದ್ದರು.ಆದರೆ ಅವರನ್ನು ಕೆಳಗೆ ಇಳಿಸಿ, ಬಸವರಾಜು ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ನಾನು ಹೊಸ ಮುಖ್ಯಮಂತ್ರಿಯ ಬಳಿ ಕೇಳಿಕೊಳ್ಳುವುದಿಷ್ಟೇ ಅಭಿವೃದ್ದಿ ವಿಚಾರದಲ್ಲಿ, ಅನುದಾನ ಬಿಡುಗಡೆ ವಿಚಾರದಲ್ಲಿ ತಾರತಮ್ಯ ಮಾಡಬೇಡಿ, ನೀವು ಕೇವಲ ಬಿಜೆಪಿ ಪಕ್ಷಕ್ಕೆ ಮುಖ್ಯಮಂತ್ರಿಯಲ್ಲ ೨೨೪ ಕ್ಷೇತ್ರಕ್ಕೂ ಮುಖ್ಯಮಂತ್ರಿ ಹಾಗಾಗಿ ಅನುದಾನದ ವಿಚಾರದಲ್ಲಿ ತಾರತಮ್ಯ ಮಾಡಬೇಡಿ ಎಂಬುದಾಗಿದೆ. ಒಂದೆಡೆ ಪ್ರವಾಹ,ಇನ್ನೊಂದೆಡೆ ಕೋರೋನ ಮಹಾಮಾರಿ ಇದ್ದರೂ ೧೧೯ ಜನ ಶಾಸಕರ ಬಹುಮತವಿದ್ದರೂ ಬಿಜೆಪಿಯಲ್ಲಿ ಕುರ್ಚಿ ಮೇಲಾಟ ನಡೆದಿರುವುದು ದುರದೃಷ್ಟಕರ. ಜನ ಎಲ್ಲವನ್ನು ನೋಡುತ್ತಿದ್ದಾರೆ ಕೆಲವೇ ವರ್ಷಗಳಲ್ಲಿ ರಾಜ್ಯವನ್ನು ಬಿಜೆಪಿ ಮುಕ್ತ ಮಾಡಲಿದ್ದಾರೆ ಎಂದು ಡಿ.ಸಿ.ಗೌರಿಶಂಕರ್ ಭವಿಷ್ಯ ನುಡಿದರು.

ಕೇಂದ್ರ ಮತ್ತು ರಾಜ್ಯ ಎರಡು ಕಡೆ ಬಿಜೆಪಿ ಸರಕಾರವಿದೆ.ಎರಡು ಕಡೆ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಸ್ವರ್ಗ ಧರೆಗೆ ಇಳಿಯುತ್ತದೆ ಎಂದು ಹೇಳಿದ್ದ ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು.ಅಡುಗೆ ಎಣ್ಣೆ,ಅಡುಗೆ ಅನಿಲ, ಪೆಟ್ರೋಲ್,ಡಿಸೇಲ್ ಬೆಲೆ ಗಗನ ಮುಖಿಯಾಗಿದೆ.ರೈತರಿಗೆ ಬೇಕಾದ ನೀರಾವರಿ ಪೈಪ್,ಗೊಬ್ಬರದ ಬೆಲೆಯೂ ಕೈಗೆಟ್ಟುಕುತ್ತಿಲ್ಲ.ಬೆಂಗಳೂರಿನAತಹ ಮಹಾನಗರದಲ್ಲಿ ಕೆಲಸ ಕಳೆದುಕೊಂಡು ಊರಿಗೆ ವಾಪಸ್ಸಾದ ಯುವಕರು ದುಬಾರಿ ಬೆಲೆಗಳಿಂದ ಕಣ್ಣು ಬಾಯಿ ಬಿಡುತಿದ್ದಾರೆ. ಇವೆಲ್ಲಾ ಸಮಸ್ಯೆಗಳಿಗೆ ಜನರೇ ಶೀಘ್ರವೇ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಜೆಡಿಎಸ್ ಪಕ್ಷ ಸಿದ್ದವಾಗಿದೆ.ಜೀವದ ಹಂಗು ತೊರೆದು ನಾನು ಮತ್ತು ನಮ್ಮ ಕಾರ್ಯಕರ್ತರು ಜನರ ಸೇವೆ ಮಾಡಿದ್ದೇವೆ.ಕ್ಷೇತ್ರದ ಜನರು ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲಿ ನಮ್ಮ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ.ಇದಕ್ಕೆ ಪಕ್ಷದ ಮುಖಂಡರು ಸಾಥ್ ನೀಡಲಿದ್ದಾರೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ನುಡಿದರು.

ಈ ವೇಳೆ ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ರಾಮಚಂದ್ರಪ್ಪ,ಮುಖAಡರಾದ ಹರಳೂರು ಸುರೇಶ್,ಪಾಲನೇತ್ರಯ್ಯ, ನರುಗನಹಳ್ಳಿ ವಿಜಯಕುಮಾರ್,ಭೈರೇಗೌಡ,ಬೆಳ್ಳಿಲೋಕೇಶ್‌ಸಿರಾಕ್ ರವಿ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version