ಗುಬ್ಬಿ ಜೆಡಿಎಸ್ ಅಭ್ಯರ್ಥಿಯಾಗಿ ಜಿ ಎನ್ ಬೆಟ್ಟಸ್ವಾಮಿ ಕಣಕ್ಕೆ…???.
ತುಮಕೂರು – ರಾಜ್ಯದ್ಯಂತ ಮೂವರು ಪಕ್ಷಗಳು 2023ರ ಚುನಾವಣಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳನ್ನ ಘೋಷಿಸಿ ಬಂಡಾಯಕ್ಕೆ ಸಿಲುಕಿರುವ ಬೆನ್ನೆಲ್ಲೆ ರಾಜ್ಯಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಟಿಕೆಟ್ ಕೈತಪ್ಪಿರುವ ಆಕಾಂಕ್ಷಿಗಳು ಅನ್ಯ ಪಕ್ಷಗಳ ಕದ ತೊಟ್ಟಲು ಮುಂದಾಗಿದ್ದು ಮೂರು ಪಕ್ಷಕ್ಕೂ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಅದರಂತೆ ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನಲ್ಲು ಬಿಜೆಪಿ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟುತ್ತಿದ್ದು ಇತ್ತೀಚಿಗೆ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಗುಬ್ಬಿ ಕ್ಷೇತ್ರಕ್ಕ್ ಬಿಜೆಪಿ ಪಕ್ಷದಿಂದ ದಿಲೀಪ್ ಕುಮಾರ್ ಹೆಸರನ್ನು ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಿದ ವರಿಷ್ಠರಿಗೆ ಈಗ ಬಂಡಾಯದ ಬಿಸಿ ತಟ್ಟಿದ್ದು.
ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಜಿ.ಎನ್ ಬೆಟ್ಸ್ವಾಮಿ ರವರು ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದು ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ನೆನ್ನೆ ಆಸ್ಪತ್ರೆಗೆ ದಾಖಲಾಗಿ ಮನೆಗೆ ಮರಳಿದ್ದರ್ರು .
ಈ ಎಲ್ಲಾ ಬೆಳವಣಿಗೆಯನ್ನ ಸೂಕ್ಷ್ಮವಾಗಿ ಗಮನಿಸಿದ್ದ ಜೆಡಿಎಸ್ ಪಕ್ಷದ ವರಿಷ್ಠರು ಟಿಕೆಟ್ ವಂಚಿತ ಜಿ.ಎನ್ ಬೆಟ್ಟಸ್ವಾಮಿ ರವರನ್ನ ಜೆಡಿಎಸ್ ಪಕ್ಷಕ್ಕೆ ಕರೆ ತರಲು ಮುಂದಾಗಿದ್ದು ನಾಳೆ ಗುಬ್ಬಿ ತಾಲೂಕಿನಲ್ಲಿ ನಡೆಯಲಿರುವ ಅಭ್ಯರ್ಥಿ ಪರ ಮತಯಾಚನೆಗೆ ಆಗಮಿಸುತ್ತಿರುವ ಬೆನ್ನಲ್ಲೇ ಘೋಷಣೆಯಾಗಿರುವ ಜೆಡಿಎಸ್ ಅಭ್ಯರ್ಥಿ ಬಿ ಎಸ್ ನಾಗರಾಜು ರವರನ್ನ ಬದಲಿಸಿ, ಜಿ.ಎನ್ ಬೆಟ್ಟಸ್ವಾಮಿ ರವರಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡಲು ಮುಂದಾಗಿರುವ ಮಾತು ಸಹ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನು ನಾಳೆ ನಡೆಯಲಿರುವ ಪಕ್ಷದ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಕುಮಾರಸ್ವಾಮಿ ರವರ ನೇತೃತ್ವದಲ್ಲಿ ಟಿಕೆಟ್ ಕೈತಪ್ಪಿರುವ ಮುಖಂಡ ಜಿ.ಏನ್ ಬೆಟ್ಟಸ್ವಾಮಿ ಸೇರಿದಂತೆ ಬಿಜೆಪಿಯ ಮುಂಚೂಣಿ ನಾಯಕರು ನಾಳೆ ಜೆಡಿಎಸ್ ಪಕ್ಷಕ್ಕೆ ಸೇರಲಿದ್ದಾರೆ ಎನ್ನಲಾಗಿದ್ದು.
ಕೊನೆ ಕ್ಷಣದಲ್ಲಿ ಬೆಟ್ಟಸ್ವಾಮಿ ರವರಿಗೆ ಬಿ ಫಾರಂ ನೀಡಲು ಮುಂದಾಗಿದ್ದಾರೆ ಎನ್ನಲಾಗಿದ್ದು ಆ ಮೂಲಕ ಗುಬ್ಬಿ ಕ್ಷೇತ್ರದ ಒಕ್ಕಲಿಗ ಸಮುದಾಯದ ಮತಗಳು ಸೇರಿದಂತೆ ಗೊಲ್ಲ ಸಮುದಾಯದ ಮತಗಳನ್ನು ಸೆಳೆಯಲು ಕುಮಾರಸ್ವಾಮಿ ರಣತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ.