ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಆಡಿಯೋ ವೈರಲ್ ಹಿನ್ನಲೆ ಮಹಿಳೆಯಿಂದ ಗೋವಿಂದರಾಜು ವಿರುದ್ಧ ದೂರು ದಾಖಲು
ತುಮಕೂರು – ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಏನ್ ಗೋವಿಂದರಾಜು ಅವರದ್ದು ಎನ್ನಲದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಮಹಿಳೆಯಿಂದ ಅಭ್ಯರ್ಥಿ ಎನ್ ಗೋವಿಂದರಾಜು ವಿರುದ್ಧ ತುಮಕೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ದೂರು ದಾಖಲಿಸಿರುವ ಮಹಿಳೆ ಜೆಡಿಎಸ್ ಅಭ್ಯರ್ಥಿ ಎನ್ ಗೋವಿಂದರಾಜು ರವರು ಪ್ರಭಾವಿ ವ್ಯಕ್ತಿ ಆಗಿರುವ ಕಾರಣ ತನಗೆ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ಜೊತೆಗೆ ನ್ಯಾಯ ನೀಡುವಂತೆ ಪೊಲೀಸರ ಮೊರೆ ಹೋಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ತುಮಕೂರಿನದ್ಯಂತ ಅಭ್ಯರ್ಥಿಯನ್ನು ಗೋವಿಂದರಾಜು ಅವರದು ಏನಲಾದ ಆಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಪರ ವಿರೋಧ ಚರ್ಚೆಗೂ ಸಹ ಕಾರಣವಾಗಿದ್ದು ಚುನಾವಣಾ ಹೊತ್ತಲ್ಲಿ ಅಭ್ಯರ್ಥಿಗೆ ತೀವ್ರ ತಲೆನೋವು ತಂದು ಒಡ್ಡಿರುವ ಆಡಿಯೋ ಮುಜುಗರ ತಂದು ಒಡ್ಡಿದೆ ಎನ್ನಲಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಿರುವ ಮಹಿಳೆ ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆಂದು ಗೋವಿಂದರಾಜು ರವರನ್ನ ಸಂಪರ್ಕಿಸಿದ್ದು ಇನ್ನು ಅವರು ಫೋನ್ ಸಂಭಾಷಣೆಯಲ್ಲಿ ತನ್ನೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಾ ಬೇರೆ ಮಹಿಳೆಯರ ಕರೆ ತರಲು ಹಾಗೂ ಫೋಟೋ ಕಳುಹಿಸು ಎಂದು ದೊಂಬಾಲು ಬಿದ್ದು ಅಸಭ್ಯವಾಗಿ ಮಾತನಾಡಿದ್ದಾರೆ ಆದಕಾರಣ ನಾನು ಪೊಲೀಸರ ಮರೆಹೋಗಿದ್ದು ನನಗೆ ರವರಿಂದ ರಕ್ಷಣೆ ಬೇಕಾಗಿದ್ದು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಆಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಜೆಡಿಎಸ್ ಅಭ್ಯರ್ಥಿ ಎನ್. ಗೋವಿಂದರಾಜು ರವರು ಚುನಾವಣೆ ಸಮೀಪಿಸುತ್ತಿದ್ದಂತೆ ನನ್ನ ಮೇಲೆ ತೇಜೋವಧೆ ಮಾಡಲು ಕಾಣದ ಕೈಗಳು ಷಡ್ಯಂತ್ರ ನಡೆಸಿವೆ ಇನ್ನು ತಾನು ಅಭ್ಯರ್ಥಿ ಆದ ಕಾರಣ ಪ್ರತಿನಿತ್ಯ ನೂರಾರು ದೂರವಾಣಿ ಕರೆಗಳು ಬರುತ್ತವೆ ಅಂತೆ ನಾನು ಮಾತನಾಡಿರಬಹುದು ಕೆಲವೊಂದು ಆಡಿಯೋಗಳನ್ನ ತಿರುಚಿದ್ದು ನನ್ನನ್ನ ಪ್ರಕರಣದಲ್ಲಿ ಸಿಲುಕಿಸುವ ದೊಡ್ಡ ಹುನ್ನಾರವನ್ನ ಕೆಲವರು ಮಾಡಿದ್ದಾರೆ ಆರೋಪಿಸಿರುವ ಮಹಿಳೆಯಿಂದ ನನಗೆ ಯಾವುದೇ ಹನಿ ಟ್ರ್ಯಾಕ್ ಹಾಗೂ ದುಡ್ಡಿಗಾಗಿ ಯಾರು ಕೂಡ ಒತ್ತಾಯ ಮಾಡಿಲ್ಲ ಆದರೂ ಇದರ ಹಿಂದೆ ಯಾವುದೋ ಕಾಣದ ಕೈಗಳು ನನ್ನ ವಿರುದ್ಧ ಮಾಡಲು ಮಾನಹಾನಿ ಮಾಡಲು ಮುಂದಾಗಿದ್ದಾರೆ ಆದಕಾರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಸಹ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿ ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ತಾವು ಸಹ ದೂರು ಸಲ್ಲಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.