ತುಮಕೂರು ನಗರದ ರಿಂಗ್ ರಸ್ತೆಯ ಸ್ಟಾರ್ ಪ್ಯಾಲೇಸ್ ಎದುರು ನಗರದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಅವರು ಸ್ಥಾಪಿಸಿರುವ ಸಲಾಂ ಕೋವಿಡ್ ಕೇರ್ ಸೆಂಟರ್ ನಲ್ಲಿ ನಗರದ ಹೆಗ್ಗೆರೆಯ ಸಮೃದ್ಧಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಶಾಂತಕುಮಾರಿ ಅವರು ಕೋರೋಣ ಸೋಂಕಿತರಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಗೆ ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯ ವಿತರಣೆ ಮಾಡಿದರು
ನಗರದ ಹೆಗ್ಗೆರೆಯಲ್ಲಿ ವಾಸವಾಗಿರುವ ಶ್ರೀಮತಿ ಶಾಂತಕುಮಾರಿ ಮತ್ತು ನಂಜಪ್ಪ ದಂಪತಿಗಳು ತಮ್ಮ ತೋಟದಲ್ಲಿ ಸಾವಯವ ಕೃಷಿಯ ಪದ್ಧತಿಯಲ್ಲಿ ಸುಮಾರು 52 ರೀತಿಯ ಗಿಡಮೂಲಿಕೆಗಳನ್ನು ಬೆಳೆಸಿದ್ದು ಅವುಗಳನ್ನು ಬಳಸಿ ಆರೋಗ್ಯಕರವಾದ ರುಚಿಕರವಾದ ಕಷಾಯ ತಯಾರಿಸಿ ಪ್ರತಿನಿತ್ಯ ಕೊರೋನಾ ಸೋಂಕಿತರಿಗೆ ವಿತರಿಸುತ್ತಿದ್ದಾರೆ ತಾವೇ ಸ್ವತಃ ಗಿಡಮೂಲಿಕೆಗಳನ್ನು ಕಿತ್ತು ತಂದು ದೊಡ್ಡ ಕಡಾಯಿಯಲ್ಲಿ ಕಷಾಯ ತಯಾರು ಮಾಡಿ ಕೋವಿಡ್ ಕೇರ್ ಸೆಂಟರ್ ಗೆ ತಂದು ಖುದ್ದು ತಾವೇ ಸೋಂಕಿತರಿಗೆ ವಿತರಣೆ ಮಾಡಿ ಸಮಾಜಮುಖೀ ಕಾರ್ಯದಲ್ಲಿ ತೊಡಗಿದ್ದಾರೆ ಮೊದಲಿಗೆ ಗ್ರಾಮ ಪಂಚಾಯಿತಿ ನೌಕರರಿಗೆ ಆಶಾ ಕಾರ್ಯಕರ್ತೆಯರಿಗೆ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಕಷಾಯ ವಿತರಣೆ ಮಾಡುತ್ತಿದ್ದರು ಇದೀಗ ಒಂದು ಹೆಜ್ಜೆ ಮುಂದಿಟ್ಟು ಧೈರ್ಯದಿಂದ ಕೋವಿಡ್ ಸೋಂಕಿತರಿಗೆ ತಾವೇ ಕಷಾಯ ವಿತರಣೆ ಮಾಡುತ್ತಾ ಅವರ ಆರೋಗ್ಯ ಚೇತರಿಕೆಗೆ ನೆರವಾಗುತ್ತಿದ್ದಾರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಂತಕುಮಾರಿಯವರು ಪ್ರಕೃತಿದತ್ತವಾಗಿ ದೊರೆಯುವ ಗಿಡಮೂಲಿಕೆಗಳಿಂದ ತಾವು ಕಷಾಯ ತಯಾರು ಮಾಡುತ್ತಿದ್ದು ಸುಮಾರು ಎರಡು ವರ್ಷಗಳಿಂದಲೂ ಸಾರ್ವಜನಿಕರಿಗೆ ಕಷಾಯ ವಿತರಣೆ ಮಾಡುತ್ತಿದ್ದು ಇದನ್ನು ತೆಗೆದುಕೊಳ್ಳುತ್ತಿರುವ ಎಲ್ಲರೂ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಂಡಿದೆ ಎಂದು ತಿಳಿಸಿದರು
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ರವರು ನಂಜಪ್ಪ ಶಾಂತಕುಮಾರಿ ದಂಪತಿಗಳು ಸಮಾಜಮುಖಿ ಕೆಲಸದಲ್ಲಿ ಸುಮಾರು ಎರಡು ವರ್ಷಗಳಿಂದ ತೊಡಗಿದ್ದು ತಮ್ಮ ಕೋವಿಡ್ ಕೇರ್ ಸೆಂಟರ್ ಗೆ ಪ್ರತಿನಿತ್ಯ ಭೇಟಿ ನೀಡಿ ಸೋಂಕಿತರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಕಷಾಯ ವಿತರಣೆ ಮಾಡುತ್ತಾ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ತಾವು ಉಚಿತವಾಗಿ ಸೋಂಕಿತರಿಗಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ ಮಾಡಿದ್ದು ಅದಕ್ಕೆ ನಂಜಪ್ಪ ಶಾಂತಕುಮಾರಿ ದಂಪತಿಗಳು ತಮ್ಮದೇ ಆದ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ ಪ್ರತಿಯೊಬ್ಬರೂ ಸಹ ಈ ರೀತಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಾಗ ಉತ್ತಮವಾದ ಮತ್ತು ಆರೋಗ್ಯಕರವಾದ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿ ನಂಜಪ್ಪ ಮತ್ತು ಶಾಂತಕುಮಾರಿ ದಂಪತಿಗಳನ್ನು ಅಭಿನಂದಿಸಿದರು ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಸಮೃದ್ಧಿ ಸೇವಾ ಟ್ರಸ್ಟ್ ಸದಸ್ಯರುಗಳು ಉಪಸ್ಥಿತರಿದ್ದರು