ತುಮಕೂರು ಕರಡು ಮತದಾರರ ಪಟ್ಟಿಯಲ್ಲಿನ ಲೋಪ ಸರಿಪಡಿಸಲು ಮಾಜಿ ಶಾಸಕ ರಫೀಕ್ ಅಹ್ಮದ್ ಒತ್ತಾಯ

ತುಮಕೂರು ಕರಡು ಮತದಾರರ ಪಟ್ಟಿಯಲ್ಲಿನ ಲೋಪ ಸರಿಪಡಿಸಲು ಮಾಜಿ ಶಾಸಕ ರಫೀಕ್ ಅಹ್ಮದ್ ಒತ್ತಾಯ

 

ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 21,990 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು ಕೂಲಂಕುಷ ತನಿಖೆ ನಡೆಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳನ್ನು ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಒತ್ತಾಯಿಸಿದರು.

 

 

 

 

ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ನಗರ ವಿಧಾನಸಭಾ ಕ್ಷೇತ್ರದಲ್ಲಿ 2008 ರಲ್ಲಿ ಒಟ್ಟು 1,99,842 ಮತದಾರರಿದ್ದರು, 2013 ರಲ್ಲಿ ಒಟ್ಟು ಮತದಾರರು 2,10,412 2018 de 2,59,542 2013 de ಒಟ್ಟು ಮತದಾರರು 2,10,412 2018 ರಲ್ಲಿ ಒಟ್ಟು ಮತದಾರರು 2,59,542, ಆದರೆ 2023 ರಲ್ಲಿ ಒಟ್ಟು ಮತದಾರರ ಸಂಖ್ಯೆ 2,40,165 ಮತದಾರರು ಎಂದು ಕರಡು ಪಟ್ಟಿಯಲ್ಲಿ ಬಿಡುಗಡೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ ಎಂದರು.

 

2019 ರಿಂದ 2022 ರವರೆಗೂ ಸೇರ್ಪಗೊಂಡ ಮತದಾರರ ಸಂಖ್ಯೆ 9277, 2019 ರಿಂದ 2022 ರವರೆಗೂ ಬಿಟ್ಟಿರುವ ಮತದಾರರ ಸಂಖ್ಯೆ ಕೇವಲ 6661 ಮತದಾರರಾಗಿರುತ್ತಾರೆ ಎಂದ ಅವರು, ಆಗಿರುವ ಲೋಪ-ದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿದರು.

 

 

 

 

ಅಂದರೆ ಕಳೆದ ಅವಧಿಯಲ್ಲಿ ಸುಮಾರು 21,990 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇuÉಂದು ಮಂದಾರರನ್ನು ಕೈಬಿಡಲು ಕಾರಣವೇನು? ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯಲ್ಲಿ ಆಧಾರ್ ಲಿಂಕ್ ಮಾಡಿಸದವರನ್ನು ಪಟ್ಟಿಯಿಂದ ಡಿಲಿಟ್ ಮಾಡಲಾಗಿದೆಯೇ? ಸರಿಯಾದ ರೀತಿಯಲ್ಲಿ ಮಾಡಿಲ್ಲದಿರುವ ಕಾರಣವೇನು? 18 ವರ್ಷ ತುಂಬಿದ ಯುವಕ ಯುವತಿಯರಿಗೆ ಮತದಾನದ ಅರಿವು ಮೂಡಿಸಿ ಕಳೆದ ಎರಡು ವರ್ಷಗಳಲ್ಲಿ ಮಾಡಿರುವ ಮತದಾರರ ಪಟ್ಟಿಯ ಪರಿಷ್ಕರಣೆ ಅಸಮರ್ಪಕವಾಗಿ ನಡೆದಿರುತ್ತದೆ ಎಂದು ಆರೋಪಿಸಿದರು.

 

 

ವರದಿ_ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!