ಸಮಾಜ ಪರಿವರ್ತಕರು ಜಾತಿಯಲ್ಲಿ ಬಂಧಿ: ಡಾ.ರಮೇಶ್

ಸಮಾಜ ಪರಿವರ್ತಕರು ಜಾತಿಯಲ್ಲಿ ಬಂಧಿ: ಡಾ.ರಮೇಶ್

 

 

 

ತುಮಕೂರು: ಸಮಾಜ ಪರಿವರ್ತಕರು ಇಂದು ಜಾತಿ ಸಂಕೋಲೆಯಲ್ಲಿ ಬಂಧಿಸಿ, ಜಾತಿ, ಒಳ ಜಾತಿ, ಧರ್ಮದೊಳಗೆ ಬಂಧಿಸಿ ಜೈಲಿಗೆ ಕಳುಹಿಸಿರುವ ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕಿದೆ ಎಂದು ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ರಮೇಶ್ ತಿಳಿಸಿದರು.

 

 

 

ಕಲ್ಪತರು ಟ್ರಸ್ಟ್ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಅವರು ನಮ್ಮನ್ನು ಆಳುವ ಜನ ಸಂವಿಧಾನ ನೀಡಿರುವ ಕರ್ತವ್ಯಗಳ ಬಗ್ಗೆ ಮಾತನಾಡುತ್ತಾರೆ ಹೊರತು ಹಕ್ಕುಗಳ ಬಗ್ಗೆ ಮಾತನಾಡುವುದಿಲ್ಲ, ಮೊದಲು ನಾವು ಭಾರತೀಯರು ಎನ್ನುವುದನ್ನು ಹೇಳದೇ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಂಗಡಿಸಲಾಗುತ್ತಿದೆ ಎಂದರು.

 

 

 

ಕರ್ನಾಟಕದ ಆಸ್ತಿ ಪುನೀತ್ ರಾಜ್ ಕುಮಾರ್ ಅವರಂತೆ ಬದುಕಬೇಕು, ಅವರಂತೆ ಸಮಾಜ ಕಟ್ಟಬೇಕು, ಕುವೆಂಪು ಅವರಂತೆ ನಾವು ಮಾನವರಾಗಬೇಕು, ಮಾನವೀಯತೆ ಮರೆತಿರುವ ಸಮಾಜದಲ್ಲಿ ಮಾನವೀಯತೆ ಸ್ಥಾಪಿಸಲು ಬದ್ಧತೆಯಿಂದ ಬದುಕಲು ಸಂಘಟಿತರಾಗಬೇಕಿದೆ ಎಂದರು.

 

 

 

ಬುದ್ಧ, ಬಸವ, ಅಂಬೇಡ್ಕರ್ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿರುವುದು ಇಂದಿನ ಅನಿವಾರ್ಯತೆ, ಮಾನವೀಯತೆಯೇ ಮುಖ್ಯ ಎನ್ನುವುದನ್ನು ಅರಿತು ಸಮ ಸಮಾಜದ ನಿರ್ಮಾಣಕ್ಕಾಗಿ, ಭಾವೈಕ್ಯತೆಯನ್ನು ನಿರ್ಮಿಸಲು, ಸಂಬಂಧಗಳನ್ನು ಬೆಳೆಸಬೇಕಿದೆ ಎಂದು ಕರೆ ನೀಡಿದರು.

 

 

 

ಸಮಾಜದಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಅಂತರದಿಂದ ಕ್ಷೋಭೆ ಹೆಚ್ಚುತ್ತಿದೆ, ಬಡವರು ಮತ್ತು ಶ್ರೀಮಂತರ ನಡುವೆ ಬಡ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾದ ಹೊಣೆಗಾರಿಕೆ ಸಂಘಟನೆಗಳ ಮೇಲಿದೆ ಎಂದು ಹೇಳಿದರು.

 

 

 

ಶಾಸಕ ಜ್ಯೋತಿಗಣೇಶ್ ಮಾತನಾಡಿ, ನಮ್ಮ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಎನ್ ಜಿಒಗಳ ಪಾತ್ರ ದೊಡ್ಡದಿದ್ದು, ವೈವಿಧ್ಯತೆಯಲ್ಲಿ ಭಾರತ ಸಂಸ್ಕೃತಿಯನ್ನು ಉಳಿಸಿಕೊಂಡಿದೆ, ಜಾತಿ, ಧರ್ಮದ ರಾಜಕಾರಣ ಸೃಷ್ಠಿಯಾದರೂ ದೇಶ ಭಾರತವಾಗಿಯೇ ಉಳಿದಿದೆ, ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಅರಿಯಬೇಕೆಂದು ಸಲಹೆ ನೀಡಿದರು.

 

 

ಎನ್ ಜಿಒಗಳು ಸೂಕ್ಷ್ಮತೆಯಿಂದ ಕೆಲಸ ಮಾಡಬೇಕು, ದೇಶ ಒಡೆಯುವ, ದೇಶ ವಿರೋಧಿಸುವ ಕೆಲಸವನ್ನು ಯಾರೇ ಮಾಡಿದರೂ ಸಹ ಸಹಿಸುವುದಿಲ್ಲ, ದೇಶ ಒಡೆಯುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ ಎನ್ನುವುದನ್ನು ಅರಿತು ದೇಶದ ಅಭಿವೃದ್ಧಿ ಶ್ರಮಿಸಬೇಕೆಂದು ಕರೆ ನೀಡಿದರು.

 

 

 

 

ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ ನವೆಂಬರ್ ತಿಂಗಳಲ್ಲಿ ಮಾತ್ರ ರಾಜ್ಯೋತ್ಸವ ಆಚರಿಸಿದೇ ಪ್ರತಿ ನಿತ್ಯ ಕನ್ನಡವನ್ನು ಬಳಸಿ, ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ತಾಯಿ ಭಾಷೆ ಕನ್ನಡವನ್ನು ನೀಡಲು ಎಲ್ಲರು ಕನ್ನಡವನ್ನು ಬಳಸಬೇಕೆಂದು ಕರೆ ನೀಡಿದರು.

 

 

 

ದಯೆಯೇ ಧರ್ಮ ದ ಮೂಲ ಎನ್ನುವುದನ್ನು ಕಾಪಾಡಿದರೆ ಸಾಕು ಮಾನವ ಹಕ್ಕುಗಳನ್ನು ಕಾಪಾಡಿದಂತೆ ಆಗುತ್ತದೆ, ಮಾನವ ಹಕ್ಕುಗಳನ್ನು ಸಂರಕ್ಷಿಸಬೇಕಿರುವುದು ಮೊದಲು ಮನೆಯಲ್ಲಿಯೇ ಎನ್ನುವುದನ್ನು ಅರಿಯಬೇಕು, ನೆರೆ ಹೊರೆಯವರು, ಮನೆಯವರ ಹಕ್ಕು ಭಾದ್ಯತೆಗಳನ್ನು ಸಂರಕ್ಷಿಸಬೇಕು ಎಂದು ಹೇಳಿದರು.

 

 

 

ಈ ವೇಳೆ ಮಾನವ ಹಕ್ಕುಗಳ ಸಂಘಟನೆಯ ಅಧ್ಯಕ್ಷ ಅಬಿದ್ ತಂಗಲ್, ಪಾಲಿಕೆ ಸದಸ್ಯ ವಿಷ್ಣುವರ್ಧನ್, ಸುವರ್ಣಗಿರಿಕುಮಾರ್, ಸಿ.ಕೆ.ಹಳ್ಳಿ ಮಹಾದೇವ್, ಬರ್ಖಾತ್, ಡಾ.ನಟರಾಜು, ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘದ ರಾಜ್ಯ ಯುವ ಅಧ್ಯಕ್ಷ ಉದಯ್ ಕುಮಾರ್, ಅಸ್ಮಿಯಾ ರೋಷನಿ, ಮಂಜುನಾಥ್, ಕಾಂತರಾಜು, ಗಾಯಿತ್ರಿ, ಜಗದೀಶ್, ವಿಜಯ್, ಸುಧಾ ಚಂದ್ರಕಲಾ, ಹೊನ್ನಪ್ಪ, ಪ್ರದೀಪ್ ಕುಮಾರ್, ಮೇಘನಾ, ಅನಿಲ್ ಕುಮಾರ್, ನಿತೀನ್, ಅಭಿಷೇಕ್, ಕಿರಣ್ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!