ಸಾರ್ವಜನಿಕರಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ಗೌರಿಶಂಕರ್

 

ತುಮಕೂರು ವಿಧಾನಸಭಾ ಕ್ಷೇತ್ರದ ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಫುಡ್ ಕಿಟ್ ವಿತರಣಾ & ಕೊರೋನಾ ಜನ ಜಾಗೃತಿ ಕಾರ್ಯಕ್ರಮಕ್ಕೆ ಶಾಸಕರು ಚಾಲನೆ ನೀಡಿದರು.

 

ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಹಳ್ಳಿಯ, ನೂರಾರು ಮನೆಗಳಿಗೆ ಭೇಟಿ ನೀಡಿ, 10 kg ಯ 2000 ಕ್ಕೂ ಹೆಚ್ಚು ಫುಡ್ ಕಿಟ್, ಕಲ್ಲಂಗಡಿ ಹಣ್ಣು, ಪೈನಾಪಲ್ ಹಣ್ಣು & N-95 ಮಾಸ್ಕ್ ವಿತರಣೆ ಮಾಡಿ ಸರ್ಕಾರದ ಸೂಚನೆ ಪಾಲಿಸಿ ಕ್ಷೇಮವಾಗಿರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

 

ಕಾರ್ಯಕ್ರಮದ ವೇದಿಕೆಯಲ್ಲಿ ಒಂದು ಹೆಣ್ಣು ಮಗಳು ಕೊರೋನಾ ಲಾಕ್ ಡೌನ್ ನಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂದು ತನ್ನ ಅಸಹಾಯಕತೆ ತೋರಿ ಕಣ್ಣೀರಾಕಿದರು. ಸ್ಥಳದಲ್ಲೆ ಶಾಸಕರು ತಮ್ಮ ಕೈಲಾದ ವೈಯಕ್ತಿಕ 25,000 ರೂಪಾಯಿ ಹಣ ನೀಡಿ ಆಕೆಯನ್ನು ಸಂತೈಸಿದರು. ಅವರ ಕುಟುಂಬದ ಮಕ್ಕಳ ಸಂಪೂರ್ಣ ವಿಧ್ಯಾಭ್ಯಾಸದ ಜವಬ್ದಾರಿ ವಹಿಸಿಕೊಂಡರು.

“ಶಾಸಕರು & ಸಭಿಕರ ಕಣ್ಣಾಲಿಗಳು ತೇವವಾದ ಘಳಿಗೆ”

ಇದೇ ವೇದಿಕೆಯಲ್ಲಿ ಕೊರೋನಾ ಸೋಂಕಿನಿಂದ ಗುಣಮುಖಳಾದ ಹೆಣ್ಣು ಮಗಳು & ಆಕೆಯ ಮಗ ಸೋಂಕಿಗೊಳಗಾದ ದಿನ ಮಧ್ಯರಾತ್ರಿ 2 ಗಂಟೆಗೆ ಶಾಸಕರಿಗೆ ಕರೆ ಮಾಡಿದಾಗ, ಶಾಸಕರು ತಮ್ಮ ಆಪ್ತ ಸಹಾಯಕರನ್ನು ಕಳುಹಿಸಿ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿ ನಮ್ಮ ಮನೆಯನ್ನು ಕಾಪಾಡಿದ್ದಾರೆ ಎಂದು ಹೇಳಿ, ನಮ್ಮ ಕುಟುಂಬ ಉಳಿಸಿದ ಶಾಸಕರನ್ನು ದೇವರೆಂದರು. ಶಾಸಕರ ಸೇವೆ ನೆನೆದು ಭಾವುಕಾಳಾಗಿ ಶಾಸಕರನ್ನು ಕೈ ಮುಗಿದು ಅವರ ಕುಟುಂಬ ನೂರ್ಕಾಲ ಬಾಳುವಂತೆ ಹರಸಿದರು. ಈ ಕ್ಷಣದಲ್ಲಿ ಶಾಸಕರು ಸೇರಿದಂತೆ ಅಲ್ಲಿ ನೆರೆದಿದ್ದ ನೂರಾರು ಸಭಿಕರ & ಹೆಣ್ಣು ಮಕ್ಕಳ ಕಣ್ಣಾಲಿಗಳು ತೇವವಾದವು.

 

ಇದಾದ ನಂತರ ಅರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಫುಡ್ ಕಿಟ್ ವಿತರಣಾ & ಕೊರೋನಾ ಜನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಾರ್ವಜನಿಕರನ್ನು ಸೇರಿದಂತೆ ಕೊರೋನಾ ಸೋಂಕಿತರ ಕುಟುಂಬಕ್ಕೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಸುಮಾರು 1000 ಕ್ಕೂ ಹೆಚ್ಚು ಫುಡ್ ಕಿಟ್, ಕಲ್ಲಂಗಡಿ ಹಣ್ಣು, ಪೈನಾಪಲ್ ಹಣ್ಣು & N-95 ಮಾಸ್ಕ್ ವಿತರಣೆ ಮಾಡಿ ವಿತರಣೆ ಮಾಡಿದರು.

 

ಶಾಸಕರ ನಿಸ್ವಾರ್ಥ ಸೇವೆ ಕಂಡು ಕ್ಷೇತ್ರದ ಸಾರ್ವಜನಿಕರು ಸರಳತೆ ಸಾಹುಕಾರ ಡಿ.ಸಿ ಗೌರಿಶಂಕರ್ ಸಾಹೇಬರ ಸೇವಾ ಕಾರ್ಯವೈಖರಿಗೆ ಆಶಿರ್ವದಿಸಿ, ಶಾಸಕರು & ಅವರ ಕುಟುಂಬದ ಶ್ರೇಯಸ್ಸಿಗೆ ಹಾರೈಸಿದರು..

 

ಇಷ್ಟೆಲ್ಲಾ ಕಣ್ಣಾರೆ ಕಂಡ ಶಾಸಕರು ಕಡೆಯದಾಗಿ “ನನ್ನ ಸೇವೆ ಮತ್ತೊಬ್ಬರ ಜೀವ & ಜೀವನ ಉಳಿಸುವ ಕೆಲಸ ಮಾಡುತ್ತದೆ ಎಂದಾದರೇ, ಇದಕ್ಕಿಂತ ಬೇರೊಂದು ನನಗಿನ್ನೇನು ಬೇಕು”. ಎಂದು ಭಾವುಕರಾದರು..

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version