ತುಮಕೂರು ಜಿಲ್ಲೆಯ ಕೋವಿಡ್ ರಿಪೋರ್ಟ್ ನಲ್ಲಿ ಎಡವಟ್ಟು ಮಾಡಿಕೊಂಡ ಆರೋಗ್ಯ ಇಲಾಖೆ
ತುಮಕೂರು ಜಿಲ್ಲೆಯಾದ್ಯಂತ ಕರೋನ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಸರ್ಕಾರದ ನಿಯಮದ ಪ್ರಕಾರ ಪ್ರತಿದಿನ ತುಮಕೂರು ಆರೋಗ್ಯ ಇಲಾಖೆಯಿಂದ ಕೋವಿಡ್ ಸೋಂಕಿತರ ಅಂಕಿಅಂಶ ಬಿಡುಗಡೆ ಮಾಡುತ್ತಾರೆ ಅದರಂತೆ ಇಂದು ಇಲಾಖೆಯಿಂದ ಬಿಡುಗಡೆ ಮಾಡಿರುವ ವರದಿಯ ಪ್ರಕಾರ.
ತುಮಕೂರು ಜಿಲ್ಲೆಯಲ್ಲಿ ಇಂದು ವರದಿಯಾಗಿರುವ ಕರೋನ್ ಸೊಂಕಿತರ ಸಂಖ್ಯಾ 2026 ಎಂದು ಮಾಹಿತಿ ನೀಡಿದೆ ಇನ್ನು ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2 ಹಾಗೂ ಜಿಲ್ಲೆಯಲ್ಲಿ ಇಂದು ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1156 ಎಂದು ತಿಳಿಸಲಾಗಿದೆ.
ಇನ್ನು ಜಿಲ್ಲೆಯಾದ್ಯಂತ ಇದುವರೆಗೂ ಕರುನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1154 ಎಂದು ನಮೂದಿಸುವ ಮೂಲಕ ಎಡವಟ್ಟು ಮಾಡಿಕೊಂಡಿದೆ.
ಇಂದಿನ ವರದಿಯಲ್ಲಿ ಗಮನಿಸಬೇಕಾದ ಅಂಶವೆಂದರೆ ಸೋಂಕಿನಿಂದ ಮೃತಪಟ್ಟವರ ಇಂದಿನ ಸಂಖ್ಯೆ 1156 ಎಂದು ನಮೂದಿಸುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
ಆದರೆ ಇಂದು ತುಮಕೂರು ಜಿಲ್ಲೆಯಲ್ಲಿ 1156 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನುವ ಅನುಮಾನ ಒಂದೆಡೆಯಾದರೆ ಅಧಿಕಾರಿಗಳು ಎಡವಟ್ಟಿಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಅದೇನೇ ಇರಲಿ ಅನಾಯಸವಾಗಿ ತುಮಕೂರು ಜಿಲ್ಲಾ ಆರೋಗ್ಯ ಇಲಾಖೆ 1156 ಜನ ಇಂದು ಮತಪಟ್ಟಿದ್ದಾರೆ ಎಂದು ಮಾಹಿತಿ ನೀಡುವ ಮೂಲಕ ನಗೆಪಾಟಲಿಗೆ ಈಡಾಗಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು