ಫೆ 24 ರಂದು ನಂಜನಗೂಡಿನ ಸಭೆಯೊಂದರಲ್ಲಿ ದಲಿತ ಸಂಘಟನೆಗಳ ವಿರುದ್ಧ ಹರಿಹಾಯ್ದಿದ್ದ ಸಂಸದ ಶ್ರೀನಿವಾಸ್ ಪ್ರಸಾದ್
ಇದನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ಪತ್ರಿಕಾಗೋಷ್ಠಿ
ಒಕ್ಕೂಟದ ಗೌರವಾಧ್ಯಕ್ಷ ಚುಂಚನಹಳ್ಳಿ ಮಲ್ಲೇಶ್ ಮತ್ತು ಮುಖಂಡ ಮಲ್ಲಳ್ಳಿ ನಾರಾಯಣ್ ಮಾತನಾಡಿ
ಹಿರಿಯರು ಅನುಭವಿಗಳು ಮುತ್ಸದ್ದಿಗಳು ಆದ ಶ್ರೀನಿವಾಸಪ್ರಸಾದ್ ದಲಿತ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ
ಇದರಿಂದ ರಾಜ್ಯದ ಇಡೀ ಸಮುದಾಯವೇ ದಿಗ್ಬ್ರಮೆ ಗೊಂಡಿದೆ
ಕಾರ್ಯಕ್ರಮ ದಲ್ಲಿ ಇದು ಯಾರಪ್ಪನ ಮನೆ ಹಣ ಎಂದು ಪ್ರಶ್ನೆ ಮಾಡಿದ್ದಾರೆ
ಹೌದು ನಾವು ಬಡಜನರಾದರೂ ಕೂಲಿ ಮಾಡಿಯಾದರೂ ಮಾಡಿ ತೆರಿಗೆ ಹಣ ಕಟ್ಟುತ್ತೇವೆ ಅಂದಮೇಲೆ ಪ್ರತಿಯೊಬ್ಬರಿಗೂ ಹಕ್ಕಿದೆ ಅದಕ್ಕಾಗಿ ಅದು ನಮ್ಮಪ್ಪನ ಮನೆಯ ಹಣವೇ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದು ತಿರುಗೇಟು ನೀಡಿದರು
ಆದರೆ ಇದರಲ್ಲಿ ಯಾವುದೇ ಚುನಾಯಿತ ಪ್ರತಿನಿಧಿಗಳ ಪಾಲಿಲ್ಲ ಯಾಕೆಂದರೆ ಅವರಿಗೆ ಎಲ್ಲವೂ ಉಚಿತವಾಗಿ ಸಿಗುತ್ತದೆ ಎಂದು ಛೇಡಿಸಿದರು
ದಲಿತ ಸಂಘರ್ಷ ಸಮಿತಿ ಹೋರಾಟ ಶೂನ್ಯ ಎಂದು ಹೇಳಿರುವ ಅವರು ದಸಂಸ ಹೋರಾಟ ಮತ್ತು ಚಳುವಳಿಯ ಬಗ್ಗೆ ಸರ್ಕಾರದಿಂದ ಮಾಹಿತಿ ಹಕ್ಕು ಪಡೆದು ತಿಳಿದುಕೊಳ್ಳಲಿ
ಇವರು ಸಂಸದರಾಗಿ ಸಚಿವರಾಗಿ ಶಾಸಕರಾಗಿ ಮಾಡಲಾಗದ ಎಷ್ಟೋ ಕೆಲಸಗಳನ್ನು ನಮ್ಮ ಸಂಘಟನೆ ವತಿಯಿಂದ ಮಾಡಿದ್ದೇವೆ ಎಂದು ಅಂಕಿಅಂಶಗಳು ಮುಖಾಂತರ ತಿಳಿಸಿದರು
ತಾವು ಹಿರಿಯರು ಅನುಭವಿಗಳು ಮುಂದೆ ಈ ರೀತಿ ಮಾತನಾಡುವಾಗ ಎಚ್ಚರ ವಹಿಸಿ ಮಾತನಾಡಿ ನಮಗೆ ಮಾರ್ಗದರ್ಶಕರಾಗಿ ಎಂದರು
ಈ ವಿಚಾರದಲ್ಲಿ ನಾವು ಶಾಸಕರನ್ನು ಅಭಿನಂದಿಸುತ್ತೇವೆ
ಅವರು ಅಂದಿನ ಕಾರ್ಯಕ್ರಮದಿಂದ ಎದ್ದುಬಂದು ನಮ್ಮ ಮನವಿಯನ್ನು ಆಲಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು
ಆದರೆ ಯಾವುದೇ ಮಾಹಿತಿ ಪಡೆಯದೆ ಈ ರೀತಿ ಸಂಘಟನೆಗಳ ಮೇಲೆ ಮಾತನಾಡಿರುವ ಸಂಸದರ ನಡೆ ಸರಿಯಿಲ್ಲ ಎಂದರು
ಅಂದಿನ ಸಭೆ ಪೂರ್ವನಿಗದಿಯಂತೆ ಸರ್ಕಾರದ ನಿಯಮಗಳ ಪ್ರಕಾರ ನಡೆಯದೆ ಉಲ್ಲಂಘನೆ ಮಾಡಿ ನಡೆಸಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದರು
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಕಾರ್ಯ ಬಸವಣ್ಣ ಉಪಾಧ್ಯಕ್ಷ ಸುರೇಶ್ ಶಂಕರಪುರ ಪ್ರಧಾನ ಕಾರ್ಯದರ್ಶಿ ಅಭಿ ನಾಗಭೂಷಣ್ ಖಜಾಂಚಿ ವಿಜಯ್ ಕುಮಾರ್ ಉಪಸ್ಥಿತರಿದ್ದರು