ತುಮಕೂರಿನ ಚಿಕ್ಕ ಹಳ್ಳಿಯಲ್ಲಿ ನಡೆದ ಅತ್ಯಾಚಾರ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ .ಡಾ. ಜಿ ಪರಮೇಶ್ವರ್ ಯುವ ಸೈನ್ಯ ಪದಾಧಿಕಾರಿಗಳು.
ತುಮಕೂರಿನ ಕ್ಯಾಸಂದ್ರ ಸಮೀಪದ ಚಿಕ್ಕಹಳ್ಳಿಯಲ್ಲಿ ಕಳೆದ ತಿಂಗಳು 24ರಂದು ರೈತ ಮಹಿಳೆ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ,ಶೀಘ್ರ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಅಖಿಲ ಕರ್ನಾಟಕ ಡಾಕ್ಟರ್ ಜಿ ಪರಮೇಶ್ವರ್ ಯುವ ಸೈನ್ಯ ವತಿಯಿಂದ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು ಆರೋಪಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಪ್ರತಿಭಟನೆಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಡಾಕ್ಟರ್ ಜಿ ಪರಮೇಶ್ವರ್ ಯುವ ಸೈನ್ಯ ರಾಜ್ಯಾಧ್ಯಕ್ಷ ನಗುತ ರಂಗನಾಥ್ ಮಾತನಾಡಿ ತುಮಕೂರಿನ ರೈತ ಮಹಿಳೆ ಮೇಲೆ ನಡೆದ ಅತ್ಯಾಚಾರ ನಿಜಕ್ಕೂ ಖಂಡನೀಯ ಇಂದಿನ ದಿನದಲ್ಲಿ ಮಹಿಳೆಯರು ಇಂತಹ ಘಟನೆಗಳಿಂದ ಭಯಭೀತರಾಗಿದ್ದು ಅವುಗಳಿಗೆ ಪುಷ್ಟಿ ನೀಡುವಂತೆ ನಡೆಯುತ್ತಿರುವ ಇಂತಹ ಘಟನೆಗಳಿಂದ ಇಡೀ ಸಮಾಜವೇ ತಲೆತಗ್ಗಿಸುವಂತೆ ಆಗಿದೆ ತುಮಕೂರಿನ ಮಹಿಳೆ ಮೇಲೆ ನಡೆದ ಅತ್ಯಾಚಾರದ್ದಲ್ಲಿ ಭಾಗಿಯಾದ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ ಹಾಗಾಗಿ ಶೀಘ್ರ ಆರೋಪಿಗಳ ಬಂಧನ ವಾಗಬೇಕು ಇಂತಹ ಘಟನೆಗಳಿಗೆ ಕಡಿವಾಣ ಹಾಕುವಂತ ಕಠಿಣ ಕಾನೂನುಗಳು ಜಾರಿಯಾದಾಗ ಮಾತ್ರ ಇಂತಹ ಪ್ರಕರಣಗಳು ನಿಲ್ಲಲು ಸಾಧ್ಯ ಹಾಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮಹಿಳೆಯರ ರಕ್ಷಣೆಗೆ ಮುಂದಾಗಬೇಕು ಎಂದರು.
ಪರಮೇಶ್ವರ್ ಯುವ ಸೈನ್ಯದ ಗೌರವಾಧ್ಯಕ್ಷರಾದ ಅತಿಕ್ ಅಹಮದ್ ಮಾತನಾಡಿ ತುಮಕೂರಿನ ಚಿಕ್ಕಹಳ್ಳಿಯಲ್ಲಿ ನಡೆದ ಘಟನೆ ನಿಜಕ್ಕೂ ಖಂಡನೀಯ ಹಾಗೂ ಅಮಾನವೀಯ ಘಟನೆ ಇಂತಹ ಘಟನೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಇಂದಿನ ದಿನದಲ್ಲಿ ಒಬ್ಬಂಟಿಯಾಗಿ ಮಹಿಳೆಯರು ಓಡಾಡುವುದು ದುಸ್ತರವಾಗಿದೆ ಹಾಗಾಗಿ ಸರ್ಕಾರ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಜೊತೆಗೆ ಕಠಿಣ ಕಾನೂನು ಜಾರಿ ಮಾಡಬೇಕು ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಮೈಸೂರು ಪೊಲೀಸರು ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಬಂಧಿಸಿದ್ದರು ಅದೇ ರೀತಿ ತುಮಕೂರಿನ ಪೊಲೀಸರು ಸಹ ಶೀಘ್ರ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪಿ ಶಿವಾಜಿ, ಇಲ್ಲ ಕರ್ನಾಟಕ ಡಾಕ್ಟರ್ ಜಿ ಪರಮೇಶ್ವರ್ ಯುವ ಸೈನ್ಯ ತುಮಕೂರು ಜಿಲ್ಲಾಧ್ಯಕ್ಷರಾದ ನರಸಿಂಹಮೂರ್ತಿ, ಉಪಾಧ್ಯಕ್ಷರಾದ ಜಬಿವುಲ್ಲಾ, ರಜನಿಕಾಂತ್ ವರದರಾಜು ಕೋರ ರಾಜು ಸಾಂಗ್ ವೆಂಕಟೇಶ್ ಶಶಾಂಕ್ ರಾಮಕೃಷ್ಣ ರಾಜು ದಾದಾಪೀರ್, ನವಾಜ್ ಮೆಹಬೂಬ್ ಕಾಂ ದೇವರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಹಾಜರಿದ್ದರು.