ಸರ ಕಳ್ಳತನ ತಡೆಯಲು ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನೂ  ಹಂಚಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ – ಅಶೋಕ್ ಕೆ. ವಿ

 

ಸರ ಕಳ್ಳತನ ತಡೆಯಲು ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನೂ  ಹಂಚಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ – ಅಶೋಕ್ ಕೆ. ವಿ

 

 

 

 

ಇತ್ತೀಚೆಗೆ ಜಿಲ್ಲೆಯಾದ್ಯಂತ ಸರಗಳ್ಳತನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮನವಿ ಮಾಡಿದ್ದಾರೆ.

 

ಪೊಲೀಸ್ ಇಲಾಖೆ ನೀಡಿರುವ ಮಾರ್ಗದರ್ಶಿ ಸೂತ್ರ

 

1. ಒಂಟಿಯಾಗಿ ಜನರಿಲ್ಲದ ಪ್ರದೇಶಗಳಲ್ಲಿ ಹೆಂಗಸರು ಓಡಾಡುವುದನ್ನು ತಪ್ಪಿಸಿ.

 

2. ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ನಿಧಾನವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದಾಗ ಅವರ ಕೈಗೆಟಕುವ ಅಂತರದಲ್ಲಿ ನಿಲ್ಲಬೇಡಿ.

 

3. ಅನುಮಾನಾಸ್ಪದ ವಾಹನಗಳು ನಿಮ್ಮ ಬಳಿ ಬರುವಾಗ ವಾಹನದ ವಿಧ, ಬಣ್ಣ, ನೊಂದಣಿ ಸಂಖ್ಯೆ ವಾಹನ ಸವಾರರು ಧರಿಸಿರುವ ಬಟ್ಟೆ, ಚಹರೆ, ಮುಖದಲ್ಲಿ ಗುರುತಿಸಬಹುದಾದ ಯಾವುದಾದರೂ ವಿಶೇಷತೆಗಳು ಇತ್ಯಾದಿಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ.

 

4. ನಿಮ್ಮ ಬಳಿ ಅನುಮಾನಾಸ್ಪದ ವ್ಯಕ್ತಿ ಬಂದರೆ ತಕ್ಷಣ ಜೋರಾಗಿ ಕೂಗಿಕೊಂಡು ಅಕ್ಕಪಕ್ಕದವರನ್ನು ಸೇರಿಸಿ,

 

5. ವಾಯು ವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಚಿನ್ನದ ಸರಗಳನ್ನು ಬಟ್ಟೆಯಿಂದ ಮರೆ ಮಾಡಿಕೊಳ್ಳಿ.

 

6. ಸರ ಮತ್ತು ಧರಿಸುವ ಬಟ್ಟೆಗೆ ಹೊಂದಿಸಿ ಸೇಫ್ಟಿ ಪಿನ್ಗಳನ್ನು ಹಾಕಿ.

 

7. ಅನಾವಶ್ಯಕವಾಗಿ ಅಧಿಕ ಆಭರಣಗಳನ್ನು ಧರಿಸಿ ಪ್ರದರ್ಶಿಸಬೇಡಿ, ಕಳ್ಳರನ್ನು ಆಕರ್ಷಿಸಬೇಡಿ.

 

8. ಮನೆಯಿಂದ ಹೊರಗೆ ಹೋಗುವಾಗ, ಅಂಗಡಿಗೆ ಹೋಗುವಾಗ, ಅಂಗಡಿಯಿಂದ ಸಾಮಾನು ಖರೀದಿಸಿ ಹೊರಡುವಾಗ ಜಾಗ್ರತೆ ಅಗತ್ಯ.

 

9. ಬೆಳಗಿನ ಸಮುಯದಲ್ಲಿ ದೇವಸ್ಥಾನಕ್ಕೆ, ಅಂಗಡಿಗೆ ಒಂಟಿಯಾಗಿ ಹೋಗುವುದನ್ನು ತಪ್ಪಿಸಿ.

 

10. ಎದುರಿನಿಂದ ಬರುವ ವಾಹನಗಳ ದೀಪದ ಬೆಳಕು ಕಣ್ಣಿಗೆ ಬಿದ್ದಾಗ ನೀವು ಧರಿಸಿದ ಚಿನ್ನದ ಸರವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ

 

11.ಕತ್ತಲೆ ಪ್ರದೇಶದಲ್ಲಿ ಪವರ್ ಕಟ್ ಆದ ಸಮಯದಲ್ಲಿ ನಡೆದಾಡುವಾಗ ನಿಮ್ಮ ಆಭರಣಗಳ ಕಡೆ ಹೆಚ್ಚಿನ ಗಮನ ವಹಿಸಿ ಹಾಗೂ ನಿಮ್ಮ ಜೊತೆಗಾರರಿಗೂ ಸರಗಳ್ಳತನಗಳ ಬಗ್ಗೆ ಮನವರಿಕೆ ಮಾಡಿಕೊಡಿ.

 

12.ಅಪರಾಧ ತಡೆ ಮತ್ತು ಪತ್ತೆ ಪೊಲೀಸರಿಗಷ್ಟೇ ಜವಾಬ್ದಾರಿ ಎಂದು ಭಾವಿಸಬೇಡಿ. ನಿಮ್ಮ ಸಹಕಾರ ಕೂಡ ಅತ್ಯಗತ್ಯ ಸಮುದಾಯ ಪೊಲೀಸರಿಗೆ ಸಹಕರಿಸಿ.

 

ಈ ಮೇಲಿನ ಅಂಶಗಳನ್ನು ಪಾಲಿಸುವುದರ ಮೂಲಕ ಸಾರ್ವಜನಿಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version