ಸ್ವಚ್ಛತೆ ಮಾಯ, ಡೆಂಗ್ಯೂ ಹಾಟ್ಸ್ಪಾಟ್ ಆದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನ.
ತುಮಕೂರು_ತುಮಕೂರಿನ ಹೃದಯ ಭಾಗದಲ್ಲಿರುವ ಕನ್ನಡಭವನದಲ್ಲಿ ಸ್ವಚ್ಚತೆ ಕಣ್ಮರೆಯಾಗಿದೆ .ಭವನದ ತಳ ಅಂತಸ್ತಿನಲ್ಲಿ ನೀರು ತುಂಬಿ ಡೆಂಗ್ಯೂ ಸೊಳ್ಳೆಗಳ ಆವಾಸ ತಾಣವಾಗಿ ಮಾರ್ಪಟ್ಟಿದೆ.
ಲಕ್ಷಾಂತರ ರೂ ಹಣ ವ್ಯಯಿಸಿ ಕಟ್ಟಿರುವ ಕನ್ನಡ ಭವನ ನಿರ್ಮಾಣವಾಗಿದೆ, ಆದರೆ ಪಾರ್ಕಿಂಗ್ ಗಾಗಿ ನಿರ್ಮಿಸಿರುವ ತಳಮಹಡಿಯಲ್ಲಿ ಎರಡು ಅಡಿ ನೀರು ನಿಂತು ಕೊಳೆತು ನಾರುತ್ತಿದ್ದು ‘ಮೇಲೆ ಥಳಕು ಒಳಗೆ ಹುಳುಕು, ಎಂಬ ಗಾಧೆ ಮಾತು ಕನ್ನಡ ಭವನಕ್ಕೆ ಅಕ್ಷರಷಃ ಅನ್ವಯಿಸುವಂತಿದೆ.
ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಸಮ್ಮೇಳನದ ಬಗ್ಗೆ ಮಾಹಿತಿ ಕೊಡಲು ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿದ್ದ ಪತ್ರಕರ್ತರು ಭವನ ವೀಕ್ಷಣೆ ಮಾಡುತ್ತಿದ್ದ ವೇಳೆ ತಳ ಮಹಡಿಯ ಸ್ವಿಮ್ಮಿಂಗ್ ಪೂಲ್ ಕಣ್ಣಿಗೆ ಬಿದ್ದಿದೆ,ಈ ಸುಂದರ ದೃಷ್ಯಾವಳಿಯನ್ನು ಕೆಲ ಪತ್ರಕರ್ತರು ಸೆರೆ ಹಿಡಿಯಲು ಮುಂದಾದಾಗ ಜಿಲ್ಲಾ ಕಸಾಪ ಅಧ್ಯಕ್ಷರು ತರಾತುರಿಯಲ್ಲಿ ಸ್ತಳಕ್ಕೆ ಬಂದು ಇದು ನಮ್ಮ ಅವಧಿಯಲ್ಲಿ ಆಗಿದ್ದಲ್ಲ,ಕೆರೆ ನೀರು ತುಂಬಿ ಹೀಗಾಗಿದೆ ಎಂದು ಸಿದ್ದ ಉತ್ತರದ ಸಬೂಬು ಹೇಳಿ ಜಾರಿಕೊಂಡರು.
ಅದೇನೆ ಇರಲಿ ಲಕ್ಷಾಂತರ ರೂ ಹಣ ವ್ಯಯಿಸಿ ಕಟ್ಟಿರುವ ಕನ್ನಡ ಭವನ ನೀರು ನಿಂತು ಕುಸಿದರೆ ಅಥವಾ ಬಿದ್ದು ಹೋದರೆ ಮುಂದಿನ ಅನಾಹುತಕ್ಕೆ ಹೊಣೆ ಯಾರು ಎಂಬ ಯಕ್ಷ ಪ್ರಶ್ನೆ ಕಾಡತೊಡಗಿದೆ.