ಜಿಲ್ಲಾ ಮಟ್ಟದ ಅಧಿಕಾರಿಗಳ ಡ್ಯಾನ್ಸ್ ವಿಡಿಯೋ ವೈರಲ್…..
ತುಮಕೂರು
ತುಮಕೂರಿನಲ್ಲಿ ಜಿಲ್ಲಾ ಮಟ್ಟದ ಕೆಲವು ಅಧಿಕಾರಿಗಳು ಮಹಿಳಾ ಹಾಸ್ಟೆಲ್ ನಲ್ಲಿ ತಡ ರಾತ್ರಿಯ ಡಿಸ್ಕೋ ಸಾಂಗ್ ಗಳಿಗೆ ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆ ಡ್ಯಾನ್ಸ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ.
ತುಮಕೂರು ನಗರದ ಗೆದ್ದಲಹಳ್ಳಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ದೀಪಾವಳಿ ಹಬ್ಬದಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಯಾದ ಸಮಾಜ ಕಲ್ಯಾಣ ಇಲಾಖೆಯ ಜೆ. ಡಿ ನೇತೃತ್ವದಲ್ಲಿ ಇತರೆ ಅಧಿಕಾರಿಗಳು ಮಹಿಳಾ ವಿದ್ಯಾರ್ಥಿಗಳು ಹಾಗೂ ಯುವತಿಯರ ಜೊತೆಯಲ್ಲಿ ಡ್ಯಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು
ಡಿಸಿ ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳ ನಡೆಗೆ ಪ್ರಗತಿಪರರು,ಬುದ್ದಿ ಜೀವಿಗಳು ತೀವ್ರ ವಿರೋಧ ವ್ಯಕ್ತವಾಗಿದೆ.
ಹಬ್ಬದ ಹೆಸರಿನಲ್ಲಿ ಹಾಸ್ಟೆಲ್ ಗೆ ತೆರಳಿರುವ ಅಧಿಕಾರಿಗಳು ಹಬ್ಬ ಆಚರಿಸಿ ತುಮಕೂರು ತಾಲೂಕು ತಹಸೀಲ್ದಾರ್ ಸಿದ್ದೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ,ವಾರ್ಡನ್ ಸೇರಿದಂತೆ ಹಲವು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮುಂದೆ ದೀಪಾವಳಿ ಹಬ್ಬದ ನೇಪಹೇಳಿ ಕೊಂಡು ಯುವತಿಯ ರೊಂದಿಗೆ ಹೆಜ್ಜೆ ಹಾಕಿರುವುದು ಜಿಲ್ಲಾಡಳಿತವನ್ನು ಮುಜುಗರಕ್ಕೀಡುಮಾಡಿದೆ ಇನ್ನು ನಗರದಲ್ಲಿ 23 ಕ್ಕು ಹೆಚ್ಚು ಹಾಸ್ಟೆಲ್ ಗಳು ಇದ್ದರೂ ಸಹ ಹೊರವಲಯದ ಆಯ್ಕೆ ಮಾಡಿಕೊಂಡಿರುವುದು ಸಾಕಷ್ಟು ಚರ್ಚೆಗೂ ಸಹ ಗ್ರಾಸವಾಗಿದೆ..
ಅದೇನೇ ಇರಲಿ ಜಿಲ್ಲಾಮಟ್ಟದ ಅಧಿಕಾರಿಗಳು ಈ ರೀತಿ ಸಾರ್ವಜನಿಕವಾಗಿ ಸರ್ಕಾರಿ ಹಾಸ್ಟೆಲ್ ಗೆ ರಾತ್ರಿ ವೇಳೆ ತೆರಳಿ ನೃತ್ಯ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಜಿಲ್ಲಾ ಉಸ್ತುವಾರಿ ಸಚಿವರು ಲಜ್ಜೆಗೆಟ್ಟ ಅಧಿಕಾರಿಗಳ ವಿರುದ್ದ ಏನು ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ