ಡೀಸೆಲ್ ಲಾರಿ ಪಲ್ಟಿ, ಡಿಸೆಲ್ ಕೊಂಡೊಯ್ದ ಸಾರ್ವಜನಿಕರು ತುಮಕೂರಿನಲ್ಲಿ ಘಟನೆ.

ಡೀಸೆಲ್ ಲಾರಿ ಪಲ್ಟಿ, ಡಿಸೆಲ್ ಕೊಂಡೊಯ್ದ ಸಾರ್ವಜನಿಕರು ತುಮಕೂರಿನಲ್ಲಿ ಘಟನೆ.

 

 

 

ತುಮಕೂರು – ಡೀಸೆಲ್ ತುಂಬಿದ ಲಾರಿ ರಸ್ತೆಯಲ್ಲಿ ಪಲ್ಟಿಯಾದ ಕಾರಣ ಡೀಸೆಲ್ ಸೋರಿಕೆಯಾಗಿ ಸಾರ್ವಜನಿಕರು ಮನಸೋ ಇಚ್ಛೆ ಡೀಸೆಲ್ ಕೊಂಡೊಯ್ದ ಘಟನೆ ವರದಿಯಾಗಿದೆ.

 

 

 

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹಾಲ್ಕುರ್ಕೆ ರಸ್ತೆಯಲ್ಲಿ ಘಟನೆ ನಡೆದಿದ್ದು ಹರಿಸಮುದ್ರ ಗೇಟ್ಬಳಿ ಲಾರಿ ಪಟ್ಟಿಯಾಗಿದ್ದು.

 

 

 

 

ಲಾರಿ ಪಟ್ಟಿಯಾದ ಕಾರಣ ಡೀಸೆಲ್ ರಸ್ತೆಯಲ್ಲೇ ಸೋರಿಕೆಯಾದ ಕಾರಣ ಸಾರ್ವಜನಿಕರು ಹಾಗೂ ದಾರಿಹೋಕರು ಮನಸೋ ಇಚ್ಛೆ ಸೋರುತ್ತಿದ್ದ ಡೀಸೆಲ್ ನನ್ನ ಕೊಂಡೊಯ್ದಿದ್ದಾರೆ.

 

 

 

 

ಇನ್ನು ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು ಟ್ಯಾಂಕರ್ ವೇಗವಾಗಿ ಬಂದು ಪಲ್ಟಿಯಾದ ಕಾರಣ ಘಟನೆಯಲ್ಲಿ ಸರ್ವ ಮಂಗಳ ಎನ್ನುವ ಮಹಿಳೆ ಬೈಕ್ ನಲ್ಲಿ ತೆರಳುತ್ತಿದ್ದು ಇದೇ ಸಂದರ್ಭದಲ್ಲಿ ಪೆಟ್ಟು ಬಿದ್ದು ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

 

 

 

 

ಪ್ರತಿನಿತ್ಯ ನೂರಾರು ಟ್ಯಾಂಕರ್ ಲಾರಿಗಳು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದು ಅತಿ ವೇಗದಲ್ಲಿ ಸಂಚರಿಸುವ ಕಾರಣ ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದು ಇನ್ನಾದರೂ ಸಂಬಂಧ ಪಟ್ಟ ಇಲಾಖೆಗಳು ಕಠಿಣ ಕ್ರಮ ಕೈಗೊಂಡು ಮುಂದೆ ಇತರಹದ ಘಟನೆಗಳು ಆಗದಂತೆ ತಡೆಯಬೇಕು ಎಂಬುದು ಸ್ಥಳೀಯರ ಆಗ್ರಹ.

 

 

 

ಅದೇನೇ ಇರಲಿ ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವ ಗಾದೆ ಮಾತಿಗೆ ತಕ್ಕಂತೆ ರಸ್ತೆಯಲ್ಲಿ ಪಲ್ತಿಯಾದ ಲಾರಿಯಿಂದ ಸೋರಿಕೆಯಾದ ಡೀಸೆಲ್ ಕೊಂಡೊಯ್ದ ಸಾರ್ವಜನಿಕರನ್ನು ಕಂಡ ಲಾರಿ ಚಾಲಕ ಕೆಲ ಕಾಳ ಕಕ್ಕಾ ಬಿಕ್ಕಿ ಯಾಗಿದ್ದಂತು ಸತ್ಯ..

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version