ಅಕ್ರಮ ವೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸುದ್ದಿಗೋಷ್ಠಿ_

ಅಕ್ರಮ ವೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸುದ್ದಿಗೋಷ್ಠಿ_

ದೇವನಹಳ್ಳಿ: ಕುಂದಾಣ ಹೋಬಳಿಯ ಸೊಲೂರು ಗ್ರಾಮದ ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಎಚ್.ಎ.ಎಲ್.ನಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರ ರಾಜಕುಮಾರ್, ಮತ್ತು ಅಶ್ವಥಮ್ಮ ಎಂಬುವವರ ವಿರುದ್ಧ ಸರ್ಕಾರಿ ಭೂಮಿಯ ಉಳಿವಿಗಾಗಿ ಸೋಲೂರು ಗ್ರಾಮಸ್ಥರು, ತುಂಬಾ ಹೋರಾಟ ಮಾಡಿ, ನ್ಯಾಯಾಲಯಗಳಿಗೆ ಅಲೆದಾಡಿ ಉಳಿಸಿದ್ದೇವೆ. ಭೂ ಒತ್ತುವರಿದಾರರು, ಪುನಃ ಜಿಲ್ಲಾಧಿಕಾರಿ ಆದೇಶದ ವಿರುದ್ಧ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭೂಮಿ ಉಳಿಸಿಕೊಳ್ಳಬೇಕು ಎಂದು ಸೋಲೂರು ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್ ಅದ್ಯಕ್ಷ ಚಿಕ್ಕೇಗೌಡ ಕಂದಾಯ ಇಲಾಖೆಯ ಸಚಿವ ಆರ್.ಅಶೋಕ್ ಹಾಗೂ ಕಂದಾಯ ಇಲಾಖೆಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.

 

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ರೈತ ಸಂಘದ ಮುಖಂಡರೊಟ್ಟಿಗೆ ಮಾತನಾಡಿದ ಅವರು, ಸರ್ಕಾರಿ ಭೂಮಿಗೆ ಅಕ್ರಮವಾಗಿ ದಾಖಲೆಗಳು ಮಾಡಿಕೊಂಡಿದ್ದಾರೆ. ಅವರು ಅನುಭವದಲ್ಲಿಲ್ಲ. ಅವರು ಈಗ್ರಾಮದವರೂ ಅಲ್ಲ, ಆದ್ದರಿಂದ ಅಕ್ರಮ ದಾಖಲೆಗಳನ್ನು ವಜಾಗೊಳಿಸಬೇಕು ಎಂದು 2019 ರಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಮಂಜುನಾಥ್ ಹಾಗು ಭೂದಾಖಲೆಗಳ ಉಪನಿರ್ದೇಶಕ ಎಂ.ಸಿ.ಕೇಶವಮೂರ್ತಿ ಅವರಿಗೆ ಮನವಿ ಕೊಟ್ಟಿದ್ದರೂ ಅವರು ಸ್ಥಳ ಪರಿಶೀಲನೆ ನಡೆಸದೇ, ದಾಖಲೆಗಳನ್ನು ಪರಿಶೀಲನೆ ನಡೆಸದೇ, ಗ್ರಾಮಸ್ಥರ ಅರ್ಜಿಗಳನ್ನು ವಜಾಗೊಳಿಸಿದ್ದರು. ಭೂಕಬಳಿಕೆದಾರರಿಗೆ ಅನುಕೂಲ ಮಾಡಿಕೊಟ್ಟಿದ್ದರು.

 

ನಾವು ಪುನಃ ಜಿಲ್ಲಾಧಿಕಾರಿ ಬಳಿ ಮೇಲ್ಮನವಿ ಸಲ್ಲಿಸಿದಾಗ, ಈಗಿನ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು, ಸ್ಥಳ ಪರಿಶೀಲನೆ ನಡೆಸಿ, ಅಕ್ರಮ ದಾಖಲೆಗಳನ್ನು ಪತ್ತೆ ಹಚ್ಚಿ, ಸರ್ಕಾರಿ ಭೂಮಿ ಕಬಳಿಕೆಯಾಗಿರುವುದನ್ನು ಖಚಿತಪಡಿಸಿಕೊಂಡು, ಅಕ್ರಮ ದಾಖಲೆಗಳನ್ನು ರದ್ದುಗೊಳಿಸಿ, ಒತ್ತುವರಿಯಾಗಿದ್ದ ಭೂಮಿಯನ್ನು ಸರ್ಕಾರಿ ಗೋಮಾಳವೆಂದು ಪರಿಗಣಿಸಿ, ಪಹಣಿಗೆ ನೋಂದಣಿ ಮಾಡಿಸಿದ್ದಾರೆ. ಗ್ರಾಮಸ್ಥರ ಮನವಿಯನ್ನು ಸರಿಯಾಗಿ ಪರಿಶೀಲನೆ ನಡೆಸದೇ ಸರ್ಕಾರಿ ಭೂಮಿ ಕಬಳಿಕೆ ಮಾಡುವವರಿಗೆ ಸಹಕಾರ ನೀಡಿದ್ದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕು. ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಇಂತಹ ಅಧಿಕಾರಿಗಳಿಂದ ಜನರು ಸಾಕಷ್ಟು ತೊಂದರೆಗೆ ಒಳಗಾಗುತ್ತಾರೆ ಎಂದು ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯ ಮಾಡಿದ್ದಾರೆ.

 

ಸೋಲೂರು ಗ್ರಾಮದ ಸರ್ವೆ ನಂಬರ್ 5 ರಲ್ಲಿ 135 ಎಕರೆ ಸರ್ಕಾರಿ ಗೋಮಾಳದಲ್ಲಿ ಕ್ರಮವಾಗಿ ಭೂ ಮಂಜೂರಾತಿದಾರರನ್ನು ಹೊರತು ಪಡಿಸಿ, ಸರ್ಕಾರಿ ಜಮೀನು ದುರ್ಬಳಕೆ ಮಾಡಿಕೊಂಡಿರುವ ಭೂಮಿಯ ಬಗ್ಗೆ ಸಂಪೂರ್ಣವಾಗಿ ತನಿಖೆಯಾಗಬೇಕು. ಅಕ್ರಮ ದಾಖಲೆಗಳನ್ನು ವಶಪಡಿಸಿಕೊಳ್ಳಬೇಕು. ಸೋಲೂರು ಗ್ರಾಮದ ಸುತ್ತಮುತ್ತಲಿನ ಸರ್ಕಾರಿ ಗೋಮಾಳ ಸರ್ವೆ ನಂ 5 ರಲ್ಲಿ ಕನಿಷ್ಟ 25 ರಿಂದ 35 ಎಕರೆ ಜಮೀನಿದೆ. ಅದನ್ನು ಸರ್ಕಾರದ ವಶಕ್ಕೆ ಪಡೆದುಕೊಂಡು, ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು. ಭೂ ಕಬಳಿಕೆ ಮಾಡಿದ್ದವರು, ಹೈಕೋರ್ಟ್ ನಲ್ಲಿ ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಲಿದ್ದು, ಪುನಃ ನಾವು ಅವರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಲಿಕ್ಕೆ ಶಕ್ತಿಯಿಲ್ಲ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಿ ಸರ್ಕಾರಿ ಭೂಮಿ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

 

ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸರ್ಕಾರಿ ಭೂಮಿಗಳು ಕಬಳಿಕೆದಾರರಿಂದ ಉಳಿಸಲಿಕ್ಕೆ ಸಾಧ್ಯವಾಗುತ್ತದೆ ಆದ್ದರಿಂದ ಸರ್ಕಾರ, ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

 

ಮುಖಂಡರಾದ ನವೀನ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ಆಂಜಿನಮ್ಮ, ತಿಮ್ಮರಾಯಪ್ಪ, ವಕೀಲ ಸಿದ್ಧಾರ್ಥ, ಲೋಕೇಶ್, ಮಧು, ಆನಂದ್, ಅಂಬರೀಶ್, ಜಯಕುಮಾರ್, ಹನುಮಂತ, ಹಾಜರಿದ್ದರು.

 

ಮಂಜು ಬೂದಿಗೆರೆ

9113813926

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version