ಭೂಮಿ ಮತ್ತು ವಸತಿ ವಂಚಿತ ಜನರಿಂದ ಮತದಾನದಿಂದ ದೂರ ಉಳಿಯಲು ನಿರ್ಧಾರ.

ಭೂಮಿ ಮತ್ತು ವಸತಿ ವಂಚಿತ ಜನರಿಂದ ಮತದಾನದಿಂದ ದೂರ ಉಳಿಯಲು ನಿರ್ಧಾರ..

 

 

ತುಮಕೂರು – ಭೂಮಿ ಮತ್ತು ವಸತಿ ವಂಚಿತರಿಂದ ಮೇ ತಿಂಗಳಿನಲ್ಲಿ ನಡೆಯುವ ಚುನಾವಣೆ ಇಂದ ದೂರ ಉಳಿಯಲು ನಿರ್ಧರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

 

 

 

ಇನ್ನು ತುಮಕೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ತಮಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಹಲವು ಹೋರಾಟಗಳು ಮಾಡಿ ಹಾಗೂ ಸರ್ಕಾರಿ ಕಚೇರಿಗಳಿಗೆ ಆಲೆದು ಸಾಕಾಗಿರುವ ಬಡ ಕುಟುಂಬಗಳು ಚುನಾವಣೆಗೆ ಮತ ನೀಡದಿರುವ ಮೂಲಕ ವಿನೂತನವಾಗಿ ಪ್ರತಿಭಟಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.

 

 

ಇದಕ್ಕೆ ಪುಷ್ಟಿ ನೀಡುವಂತೆ ತುಮಕೂರು ನಗರಕ್ಕೆ ಸಮೀಪ ಇರುವ ಅಮಲಾಪುರ ಗ್ರಾಮದ ಬಳಿ ವಾಸವಿರುವ ಹಂದಿ ಜೋಗಿ ನಿವಾಸಿಗಳು ಹಾಗೂ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳು ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಮತದಾನ ಬಹಿಷ್ಕಾರಕ್ಕೆ ಜನರು ಮುಂದಾಗಿದ್ದು ತಾವು ಹಾಲಿ ವಾಸವಿರುವ ಸ್ಥಳದಲ್ಲಿ ತಮ್ಮ ಕುಡಿಸಲುಗಳ ಮುಂದೆ ಫ್ಲಕ್ಸ್ ಹಾಗೂ ಪ್ಲೇ ಕಾರ್ಡ್ಗಳನ್ನು ಅಳವಡಿಸುವ ಮೂಲಕ “ಭೂಮಿ ವಸತಿ ಕೊಡದೆ ನಮ್ಮ ವೋಟು ಕೊಡವು” ಎಂಬ ಅಭಿಯಾನದೊಂದಿಗೆ ಮತದಾನ ಮಾಡಲು ಮುಂದಾಗದೂರುವುದು ಗಮನಕ್ಕೆ ಬಂದಿದೆ.

 

 

 

 

ವಿಷಯ ತಿಳಿದು ನಮ್ಮ ತಂಡ ಅಮಲಾಪುರ ಗ್ರಾಮಕ್ಕೆ ಭೇಟಿ ನೀಡಿದಾಗ ನಿಜಕ್ಕೂ ಅಲ್ಲಿ ಕಂಡ ದೃಶ್ಯಗಳು ನಿಜಕ್ಕೂ ಘೋರ ಕಾರಣ ಇಷ್ಟೇ ಇನ್ನು ತುಮಕೂರು ನಗರಕ್ಕೆ ಸಮೀಪವಿರುವ ಹಾಗೂ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ನಗರಕ್ಕೆ ಹೊಂದಿಕೊಂಡಂತೆ ಇರುವ ಕೂಗಳತೆಯ ಗ್ರಾಮ ಅಮಲಾಪುರ ಗ್ರಾಮದ ಸರ್ವೆ ನಂಬರ್ 31 ರ ಜಿಲ್ಲಾಡಳಿತದ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಕೆಲ ಕುಟುಂಬಗಳು ಗುಡ್ಡದಲ್ಲಿ ತಾತ್ಕಾಲಿಕ ಗುಡಿಸಲುಗಳನ್ನ ನಿರ್ಮಾಣ ಮಾಡಿಕೊಂಡು ಜೀವನವನ್ನು ಕಟ್ಟಿಕೊಳ್ಳಲು ಹರಸಾಹಸ ಪಡುವ ದೃಶ್ಯ ಕಣ್ಣಿಗೆ ಬಿದ್ದಿವೆ.

 

 

 

ಕುಡಿಯಲು ನೀರು, ವಿದ್ಯುತ್, ರಸ್ತೆ ,ಶೌಚಾಲಯ ಸೇರಿದಂತೆ ಯಾವ ಮೂಲಭೂತ ಸೌಲಭ್ಯಗಳು ಇಲ್ಲದೆ ಕುಟುಂಬಗಳು ಕಾಡಿನಲ್ಲಿ ವಾಸ ಮಾಡುತ್ತಿದ್ದು ಇನ್ನು ನಮ್ಮ ತಂಡ ಭೇಟಿ ನೀಡಿದ ವೇಳೆ ನಮಗೆ ಅನುಭವವಾಗಿದ್ದು ನಾವು ಚಾಮರಾಜನಗರ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಕಾಡು ಜನರು ಹಾಗೂ   ಹಾಡಿಗೆ ಬೇಟಿ ನೀಡಿದ ಅನುಭವ ನೀಡಿದ್ದು ನಿಜಕ್ಕೂ ಅಲ್ಲಿನ ನಿವಾಸಿಗಳ ನೋವು ಆಕ್ರಂದನ ಮನ ಕಲಕುವಂತಿತ್ತು.

 

 

 

 

 

 

ಇದೇ ರೀತಿ ಅನೇಕ ವರ್ಷಗಳಿಂದ ತುಮಕೂರು ಜಿಲ್ಲೆಯ ಹಾಗೂ ತುಮಕೂರು ನಗರ ಪಾಲಿಕೆ ವ್ಯಾಪ್ತಿಯ ಅನೇಕ ಹಂದಿ ಜೋಗಿ ಕುಟುಂಬಗಳು ಹೆಬ್ಬೂರು ಹೋಬಳಿ ನಾಗವಲ್ಲಿ ಗ್ರಾಮದ ಆಲೆಮಾರಿ ಕುಟುಂಬಗಳು ಹಾಗೂ ಕೊರಟಗೆರೆ ತಾಲೂಕು ಕಸಬಾ ಹೋಬಳಿಯ ಹುಲಿಕುಂಟೆ ಗ್ರಾಮದ ಅಲೆಮಾರಿ ಕುಟುಂಬಗಳು ಸೇರಿದಂತೆ ಕೊರಟಗೆರೆ ತಾಲೂಕಿನ ಕೋಳಲ ಹೋಬಳಿಯ ಇರಕಸಂದ್ರ ಕಾಲೋನಿಯ ಗ್ರಾಮಗಳು ಸೇರಿದಂತೆ ಜಿಲ್ಲೆಯ ಹಲವು ಕುಟುಂಬಗಳು ನಿವೇಶನ ,ಭೂಮಿ ,ವಸತಿಗಾಗಿ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಅಲೆದು ಸಾಕಾಗಿ ಈ ಎಲ್ಲಾ ವಸತಿ ವಂಚಿತರಿಂದ ಈ ಬಾರಿಯ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದು ಕೆಲ ಪ್ರದೇಶಗಳಲ್ಲಿ ಹಾಗೂ ಗ್ರಾಮಗಳಲ್ಲೂ ಫ್ಲೆಕ್ಸ್ ಅಳವಡಿಸಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

 

 

 

ನಮ್ಮ ತಂಡದೊಂದಿಗೆ ಮಾತನಾಡಿ ತಮ್ಮ ನೋವನ್ನು ಹಂಚಿಕೊಂಡಿರುವ ನಿವಾಸಿ ನಾಗರಾಜು ರವರು ಹಲವು ವರ್ಷಗಳಿಂದ ನಿವೇಶನಕ್ಕಾಗಿ ಓಡಾಡಿ ಕಂಗಾಲಾಗಿರುವ ನಮ್ಮ ಕುಟುಂಬಗಳು ಇತ್ತೀಚಿಗೆ ಸುರಿದ ಭಾರಿ ಮಳೆಗೆ ನಮ್ಮ ಗುಡಿಸಲುಗಳು ಮಳೆಗೆ ಸಿಲುಕಿ ಗಂಜಿ ಕೇಂದ್ರಕ್ಕೆ ತೆರಳಿದ್ದವು ಮೂರು ತಿಂಗಳ ಬಳಿಕ ಜಿಲ್ಲಾಡಳಿತದ ಮೌಖಿಕ ಆದೇಶದ ಮೇರೆಗೆ ಇಲ್ಲಿ ಗುಡಿಸಲು ನಿರ್ಮಾಣಮಾಡಿದ್ದು ಇದುವರೆಗೂ ಸ್ಥಳೀಯ ಆಡಳಿತಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರ ಇದುವರೆಗೂ ಯಾವುದೇ ಮೂಲಭೂತ ಸೌಕರ್ಯಗಳು ನಮಗೆ ನೀಡದೆ ನಮ್ಮ ಬದುಕು ಕಾಡುಪ್ರಾಣಿಗಳಿ ಗಿಂತಲೂ ಕಡೆಯದಾಗಿ ನಮ್ಮ ಜೀವನವನ್ನು ದೂಡುವ ದುಸ್ಥಿತಿ ನಮಗೆ ಬಂದಿದ್ದು ನಮಗೆ ಈ ಬಾರಿಯ ಚುನಾವಣೆಗೆ ಮತ ನೀಡಬಾರದೆಂದು  ಮುಂದಾಗಿದ್ದೇವೆ ಇನ್ನು ನಮಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಯಾವುದೇ ಹಣ, ಹೆಂಡ ,ವಸ್ತುಗಳಿಗೆ ಮಾರುಹೋಗದಿರಳು ನಿರ್ಧಾರ ಮಾಡಿದ್ದು ಇನ್ನಾದರೂ ನಮ್ಮ ವೋಟು ಬೇಕೆನ್ನುವ ಜನಪ್ರತಿನಿಧಿಗಳು ನಮ್ಮ ಭರವಸೆಗಳನ್ನ ಈಡೇರಿಸಲು ಮುಂದಾದರೆ ಮಾತ್ರ ನಮ್ಮ ಮತವನ್ನು ನೀಡಲಿದ್ದೇವೆ ಎಂದು ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ.

 

 

 

 

 

 

ಅದೇನೇ ಇರಲಿ ಜಿಲ್ಲೆಯ ಅನೇಕ ಬಡ ಕುಟುಂಬಗಳು ಇದೇ ರೀತಿಯ ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿ ನಲುಗಿದ್ದು ಇನ್ನಾದರೂ ಸ್ಥಳೀಯ ಆಡಳಿತಗಳು ಹಾಗೂ ಸರ್ಕಾರ ಇವರ ಬಗ್ಗೆ ಗಮನ ಹರಿಸಿ ಚುನಾವಣೆಯ ಹಿನ್ನೆಲೆಯಲ್ಲಿ ಮನವೊಲಿಸಲು ಮುಂದಾಗಲಿವೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

 

 

 

ವರದಿ ಮಾರುತಿ ಪ್ರಸಾದ್ ತುಮಕೂರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version