ಪಬ್ಲಿಕ್ ಟಿ.ವಿ.ಗೆ ದಶಮಾನೋತ್ಸವ ಸಂಭ್ರಮ- ೧೦ ಸಾವಿರ ಗಿಡ ನೆಟ್ಟು ಪರಿಸರ ಸ್ನೇಹಿ ಕಾರ್ಯ
ತುಮಕೂರು-ನಿಮ್ಮ ಪಬ್ಲಿಕ್ ಟಿವಿಗೆ 10 ವರ್ಷ ತುಂಬಿದ ಹಿನ್ನಲೆಯಲ್ಲಿ ವಿಭಿನ್ನವಾಗಿ ದಶಮಾನೋತ್ಸವ ಆಚರಿಸಲಾಗುತ್ತಿದೆ.ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡಿರುವ ಪಬ್ಲಿಕ್ ಟಿವಿ ತನ್ನ ದಶಮಾನೋತ್ಸವದ ಅಂಗವಾಗಿ ಪರಿಸರ ಸ್ನೇಹಿ ಕೆಲಸಕ್ಕೆ ಮುಂದಾಗಿದ್ದು ರಾಜ್ಯಾದ್ಯಂತ10 ಸಾವಿರ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಿದೆ.ಇದರ ಭಾಗವಾಗಿ ತುಮಕೂರು ಜಿಲ್ಲೆಯಲ್ಲೂ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವ ಆಚರಿಸಿದರೆ.
ತುಮಕೂರು ನಗರದ ಹನುಮಂತಪುರದ ಬಿ.ಎ.ಗುಡಿಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ರಸ್ತೆ ಇಕ್ಕೆಲಗಳಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಗಿಡಗಳನ್ನು ಹಾಕಿ ದಶಮಾನೋತ್ಸವ ಸಂಭ್ರಮಕ್ಕೆ ಮೆರಗು ನೀಡಲಾಗಿದೆ. ನಗರ ಶಾಸಕ ಜ್ಯೋತಿಗಣೇಶ್ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಮಾತನಾಡುತ್ತಾ.. ಬೆಳಕು ಕಾರ್ಯಕ್ರಮದ ಮೂಲಕ ಪಬ್ಲಿಕ್ ಟಿ.ವಿ. ನೊಂದವರಿಗೆ ನೆರವಾಗಿದ್ದು, ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಮನೆಯೆ ಮಂತ್ರಾಲಯ ಕಾರ್ಯಕ್ರಮದ ಮೂಲಕ ಲಕ್ಷಾಂತರ ಜನರಿಗೆ ದಿನಸಿ, ಮೆಡಿಸಿನ್, ಸೇರಿದಂತೆ ಹಲವು ನೆರವು ನೀಡಿದನ್ನು ಸ್ಮರಿಸಿಕೊಂಡರು. ಜತೆಗೆ ಕೋವಿಡ್ ನಿಂದಾಗಿ ಆನ್ ಲೈನ್ ಕ್ಲಾಸ್ ಕೇಳಲು ಮೊಬೈಲ್ ಲ್ಯಾಪ್ ಟ್ಯಾಪ್ ಇಲ್ಲದೇ ತೊಂದರೆ ಅನುಭವಿಸಿದ ಸರ್ಕಾರಿ ಶಾಲೆಯ ಬಡ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದ ಪಬ್ಲಿಕ್ ಟಿ.ವಿ.ಯ ಕಾಳಜಿಯನ್ನು ಶ್ಲಾಘಿಸಿದರು. ಈ ವೇಳೆ ಹಾಜರಿದ್ದ ಕ್ಷೇತ್ರಶಿಕ್ಷಣಾಧಿಕಾರಿ ಹನುಮಾ ನಾಯ್ಕ್, ಪಾಲಿಕೆ ಸದಸ್ಯ ಶ್ರೀನಿವಾಸ್ ಪಬ್ಲಿಕ್ ಟಿ.ವಿ.ಮುಖ್ಯಸ್ಥ ಎಚ್.ಆರ್. ರಂಗನಾಥ್ ಅವರ ಸಮಾಜ ಸೇವೆಯನ್ನು ಶ್ಲಾಘಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸೌಭಾಗ್ಯಮ್ಮರ ಮೇಲುಸ್ತುವಾರಿಯಲ್ಲಿ ಕಾರ್ಯಕ್ರಮ ನೆರವೇರಿತು. ಈ ವೇಳೆ ಎಸ್ ಡಿ ಎಮ್ ಸಿ ಅಧ್ಯಕ್ಷ ದೇವರಾಜು, ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಶಾಲಾ ವಿದ್ಯಾರ್ಥಿಗಳಿಂದ ಕೇಕ್ ಕತ್ತರಿಸಿ ಸಂಭ್ರಮ- ಬಿ.ಎ.ಗುಡಿಪಾಳ್ಯದ ಶಾಲೆ ವಿದ್ಯಾರ್ಥಿಗಳು ಕೇಕ್ ಕತ್ತರಿಸುವ ಮೂಲಕ ಪಬ್ಲಿಕ್ ಟಿ.ವಿ.ಗೆ ಶುಭಾಶಯ ಕೋರಿದ್ದಾರೆ. ಇದೇ ವೇಳೆ ಪಬ್ಲಿಕ್ ಟಿ.ವಿ.ಜಿಲ್ಲಾ ಪ್ರತಿನಿಧಿ ಮಂಜುನಾಥ್ ತಾಳಮಕ್ಕಿ ಅವರಿಗೆ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕ್ಯಾಮರಾಮ್ಯಾನ್ ಕುಮಾರಸ್ವಾಮಿ ಹಾಜರಿದ್ದರು.