ಕೋವಿಡ್ ಲಸಿಕೆ ಸಾವು ತಡೆಯಲು ಎಷ್ಟು ಪರಿಣಾಮಕಾರಿ ಗೊತ್ತೇ ?

ಕೋವಿಡ್ ಲಸಿಕೆ ಸಾವು ತಡೆಯಲು ಎಷ್ಟು ಪರಿಣಾಮಕಾರಿ ಗೊತ್ತೇ ?

ಹೊಸದಿಲ್ಲಿ: ಕೋವಿಡ್-19 ವಿರುದ್ಧದ ಒಂದು ಲಸಿಕಾ ಡೋಸ್ ಕೋವಿಡ್ ಸಾವನ್ನು ತಡೆಯುವಲ್ಲಿ ಶೇಕಡ 96.6ರಷ್ಟು ಪರಿಣಾಮಕಾರಿ ಎನ್ನುವುದು ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಅಂತೆಯೇ ಎರಡು ಡೋಸ್‌ಗಳು ಶೇಕಡ 97.5ರಷ್ಟು ಸಾವು ತಡೆಯುವಲ್ಲಿ ಪರಿಣಾಮಕಾರಿ ಎಂದು ದೃಢಪಟ್ಟಿದೆ.

 

ಕೋವಿಡ್-19 ಪರಿಸ್ಥಿತಿ ಕುರಿತ ವಿವರ ನೀಡಿದ ಉನ್ನತ ಅಧಿಕಾರಿಗಳು, ಶೀಘ್ರದಲ್ಲೇ ಲಸಿಕೆ ಟ್ರ್ಯಾಕರ್‌ಗೆ ಚಾಲನೆ ನೀಡಲಾಗುವುದು. ಇದರಲ್ಲಿ ಲಸಿಕೆ ಹಾಕಿಸಿಕೊಂಡ ವಿವರಗಳು ಮತ್ತು ಲಸಿಕೆ ಹಾಕಿಸಿಕೊಂಡವರ ಸಾವಿನ ಪ್ರಮಾಣದ ಮಾಹಿತಿಗಳು ಒಳಗೊಂಡಿರುತ್ತವೆ ಎಂದು ವಿವರಿಸಿದರು.

 

“ಲಸಿಕೆ ಹಾಕಿಸಿಕೊಂಡವರಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣವನ್ನು ಪತ್ತೆ ಮಾಡುವಲ್ಲಿ ಇದು ಮಹತ್ವಾಕಾಂಕ್ಷಿ ಹಸ್ತಕ್ಷೇಪವಾಗಿದೆ. ಇದನ್ನು ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ಗೆ ಅಳವಡಿಸಿ, ಆನ್‌ಲೈನ್ ಮೂಲಕ ಜನತೆ ಮಾಹಿತಿ ನೋಡಲು ಅನುವು ಮಾಡಿಕೊಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದರು.

 

ಇದಕ್ಕೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಎಲ್ಲ ಪ್ರಮುಖ ಕೋವಿಡ್-19 ಲಸಿಕಾ ಮೂಲಗಳಿಂದ ಸರ್ಕಾರ ಸಂಗ್ರಹಿಸಲಿದೆ ಎಂದು ಸ್ಪಷ್ಟಪಡಿಸಿದರು.

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version