ಕೋವಿಡ್ ಎರಡನೆ ಅಲೆ ಹೆಚ್ಚಿದ್ದು ಸಾರ್ವಜನಿಕರು ಎಚ್ಚರದಿಂದಿರಬೇಕು -ಸ್ವಾಮಿ ಜಪಾನಂದಜೀ.

 

 

ಕೋವಿಡ್ ಎರಡನೆ ಅಲೆ ಹೆಚ್ಚಿದ್ದು ಸಾರ್ವಜನಿಕರು ಎಚ್ಚರದಿಂದಿರಬೇಕು -ಸ್ವಾಮಿ ಜಪಾನಂದಜೀ.

 

ಕೋವಿಡ್ 19ರ ಎರಡನೇ ಅಲೆಯು ಇಡೀ ದೇಶದಲ್ಲಿ ವಿನಾಶಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ ಮತ್ತು ಮಹಾನಗರಗಳಾದ ಬೆಂಗಳೂರು-ಮೈಸೂರು ತುಮಕೂರು ಗಳಿಂದ ದೂರದ ಹಳ್ಳಿಗಳಲ್ಲಿ ಸೋಂಕು ಅವ್ಯಾಹತವಾಗಿ ತಲುಪಿದ್ದು ಸಾರ್ವಜನಿಕರನ್ನು ಅಪಾಯಕಾರಿ ಎರಡನೆಯ ಅಲೆಯು ಗ್ರಾಮೀಣ ಭಾಗದ ಜನರ ಜೀವನವನ್ನು ಅತಂತ್ರ ಗೊಳಿಸಿದೆ ಎಂದು ಪಾವಗಡದ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ತಿಳಿಸಿದರು.

 

ಕಳೆದ ವರ್ಷಕ್ಕಿಂತ ಈ ಬಾರಿ ತುಂಬಾ ಅಪಾಯಕಾರಿ ಮಟ್ಟವನ್ನು ಕರೋನ ತಲುಪಿದೆ. ಆದ್ದರಿಂದ ಎಲ್ಲರೂ ಕೂಡ ಎಚ್ಚರದಿಂದಿರಬೇಕು ಎಂದರು.

 

ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಾವಗಡ ರಾಮಕೃಷ್ಣ ಸೇವಾಶ್ರಮದ ಜಪಾನಂದ ಜಿ ಅವರು ಆಶ್ರಮ ಹಾಗೂ ಇನ್ಫಾಸಿಸ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

 

ಪಾವಗಡದ ರಾಮಕೃಷ್ಣ ಸೇವಶ್ರಮ ಕರೋಣ ಎರಡನೇ ಅಲೆಯಲ್ಲಿ ಸಾಕಷ್ಟು ಬಡವರು ನಿರ್ಗತಿಕರು ಕೂಲಿಕಾರ್ಮಿಕರಿಗೆ ಆಶ್ರಮವು ಆಧಾರವಾಗಿದೆ ಪ್ರತಿನಿತ್ಯ ಸಾವಿರಾರು ಜನಕ್ಕೆ ಕೋವಿಡ್ಎರಡನೇ ಅಲೆಯಲ್ಲಿ ಬೆನ್ನೆಲುಬಾಗಿ ನಿಂತಿದೆ ಎಂದರೆ ತಪ್ಪಾಗಲಾರದು.

 

ಇನ್ನು ರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಶನ್ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದು ಪ್ರತಿನಿತ್ಯ ಸೋಂಕು ನಿವಾರಕ ಔಷಧಿ ಸಿಂಪಡಿಸುವ ಕಾರ್ಯವನ್ನು ಮುಂದುವರಿಸಿದೆ ಇದರ ಜೊತೆಯಲ್ಲಿ ಬಡವರು ಕೂಲಿ ಕಾರ್ಮಿಕರು ಊಟ ಇಲ್ಲದೆ ಪರಿತಪಿಸುತ್ತಿದ್ದ ಅಂಥವರಿಗೆ ಪ್ರತಿನಿತ್ಯ ಬಡವರಿಗೆ ನಿರ್ಗತಿಕರಿಗೆ ಪ್ರಯಾಣಿಕರಿಗೆ ಊಟ ಒದಗಿಸುತ್ತಿದೆ.

 

ದವಸಧಾನ್ಯಗಳ ಕಿಟ್ ವಿತರಣೆಯಲ್ಲು ಮುಂದಿದ್ದು ಬಡವರು ,ಕೂಲಿ ಕಾರ್ಮಿಕರು ,ಚಾಲಕರು, ಸಣ್ಣ ಸಣ್ಣ ವ್ಯಾಪಾರಿಗಳು, ವಲಸೆ ಕಾರ್ಮಿಕರು ಸೇರಿದಂತೆ ಬಡವರಿಗೆ ಸಾವಿರಾರು ಕಿಟ್ಗಳನ್ನು ಹಂಚುತ್ತಿದ್ದಾರೆ.

 

ಇನ್ನುಹೊಮ್ ಐಸೋಲೇಶನ್ ನಲ್ಲಿರುವ ಕರೋನ ಸೋಂಕಿತರಿಗೆ ಹೈದರಾಬಾದಿನ ರೆಡ್ ಕ್ರಾಸ್ ವತಿಯಿಂದ ಅಗತ್ಯವಾಗಿರುವ ಔಷಧಿಗಳನ್ನು ಖರೀದಿಸಿ ಸೋಂಕಿತರ ಮನೆಗೆ ಉಚಿತವಾಗಿ ತಲುಪಿಸುವ ಮೂಲಕ ಕೋವಿಡ್ ಸೋಂಕಿತರಿಗೆ ನೆರವಾಗಿದೆ.

ಇನ್ನು ಪಾವಗಡ ಆಶ್ರಮವು ಎಲ್ಲಾ ತುರ್ತು ಸಂದರ್ಭಗಳನ್ನು ಅರಿತು ಸ್ವಯಂ ಪ್ರೇರಿತವಾಗಿ ಎಲ್ಲಾ ತರಹದ ನೆರವುಗಳನ್ನು ನೀಡುವ ಮೂಲಕ ಸ್ಪಂದಿಸುತ್ತಿದ್ದು ಆಶ್ರಮದ ಕಾರ್ಯಕ್ಕೆ ತಾಲೂಕು ಸೇರಿದಂತೆ ಜಿಲ್ಲೆಯ ಸಾರ್ವಜನಿಕರು ಆಶ್ರಮದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ರಾಮಕೃಷ್ಣ ಸೇವಾಶ್ರಮವು ಇನ್ಫೋಸಿಸ್ ಫೌಂಡೇಶನ್ ಸಹಕಾರದೊಂದಿಗೆ ನಿರಂತರ ಸೇವೆಯಲ್ಲಿ ತೊಡಗುವ ಮೂಲಕ ಪಾವಗಡ ತಾಲೂಕು ಸೇರಿದಂತೆ ಇಡೀ ಜಿಲ್ಲೆಗೆ ಆಧಾರವಾಗಿದ್ದು ಸ್ವಾಮಿ ಜಪಾನಂದಜೀ ಅವರು ಇಡೀ ಜಿಲ್ಲೆಗೆ ತಮ್ಮ ಕೈಲಾದ ಮಟ್ಟಿಗೆ ಕೋರೋಣ ಎರಡನೆಯ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಅನುಕೂಲ ಮಾಡುವ ಮೂಲಕ ರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಶನ್ ಎಲ್ಲರಿಗೂ ನೆರವಾಗಿದ್ದಾರೆ.

ಇದೇ ಸಂದರ್ಭದಲ್ಲಿ ತುಮಕೂರು ನಗರದ ಪತ್ರಕರ್ತರಿಗೆ ಪತ್ರಿಕಾಭವನದಲ್ಲಿ ಆಶ್ರಮದ ವತಿಯಿಂದ ದಿನಸಿ ಕೀಟಗಳನ್ನು ಹಂಚಲಾಯಿತು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version