ಬಿಜೆಪಿ-ಆರ್’ಎಸ್‌ಎಸ್ ಪಿತೂರಿಯಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಸೋಲಾಗಿತ್ತು: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ-ಆರ್’ಎಸ್‌ಎಸ್ ಪಿತೂರಿಯಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಸೋಲಾಗಿತ್ತು: ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ ನಗರದ ಜೈಭವಾನಿ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಸಿದ್ದ ಅಭಿನಂದನ ಸಮಾರಂಭದಲ್ಲಿ ಕಾಂಗ್ರೆಸ್‌ ನಾಯಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸತತ 11 ಬಾರಿ ಚುನಾವಣೆ ಗೆದ್ದ ತಮಗೆ 12ನೇ ಚುನಾವಣೆಯಲ್ಲಿ ಸೋಲಾಯ್ತು.

 

ಈ ಸೋಲಿಗೆ ಕಲಬುರಗಿ ಜನ ಕಾರಣರಲ್ಲ. ಮೋದಿ, ಶಾ ಹಾಗೂ ಆರ್’ಎಸ್‌ಎಸ್ ಕುತತಂತ್ರದಿಂದ ಸೋಲಾಯಿತು ಎಂದು ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ಕಿಡಿಕಾರಿದ್ದಾರೆ.

ನೀವು ಬರುವ ಲೋಕಸಭೆಯಲ್ಲಿ ಇದ್ದರೆ ತಾನೆ ಇವೆಲ್ಲ ಚರ್ಚೆ ನಡೆಯೋದು ಎಂದು ಒಗಟಾಗಿ ಹೇಳುವ ಮೂಲಕ ಮೋದಿಯವರಂತೂ ಲೋಕಸಭೆಯಲ್ಲೇ ತಮಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರೆಂದು ಸ್ಮರಿಸಿದರು.

 

ಕಾಂಗ್ರೆಸ್ ಪಕ್ಷದ ನಿಷ್ಠೆಯೊಂದಿಗೆ ಸತತ 55 ವರ್ಷದಿಂದ ತಾವು ರಾಜಕೀಯ ಬದುಕಿನಲ್ಲಿರೋದು ಇವರಿಗೆ ಸಹಿಸಲಾಗಲಿಲ್ಲ. ಅದಕ್ಕೇ ಕುತಂತ್ರದಿಂದ ನನ್ನನ್ನು ಸೋಲಿಸಿದರು ಎಂದು ಕಳೆದ 2019ರ ಲೋಕಸಭೆಯಲ್ಲಿ ತಾವುಂಡ ಸೋಲಿನ ಕಹಿಯ ಹಿಂದಿನ ಕಟು ವಾಸ್ತವ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕವಾಗಿ ಹಂಚಿಕೊಂಡರು.

 

ಒಂದು ವರ್ಷ ನಾಲ್ಕು ತಿಂಗಳ ಬಳಿಕ ನಾನು ಪವಿತ್ರವಾದ ಕಲಬುರಗಿ ಭೂಮಿ ಮೇಲೆ ಕಾಲಿಟ್ಟಿದ್ದೇನೆ‌. ಕೋವಿಡ್ ಕಾರಣ ಸ್ಥಳೀಯ ಶಾಸಕರು, ಮುಖಂಡರು ಕಲಬುರಗಿಗೆ ಬಡುವುದು ಬೇಡ ಎಂದಿದಕ್ಕೆ ನಾನು ಬರಲು ತಡವಾಗಿದೆ. ದೇಶವಲ್ಲದೆ ಇಡೀ ವಿಶ್ವಕ್ಕೆ ಕೊರೊನಾ ಕಾಡಿದೆ. ಕೋವಿಡ್‌ನಿಂದ ಲಕ್ಷಾಂತರ ಜನ ಮೃತಪಟ್ಟಿದ್ದಾರೆ. ನಾನು ಜನರಿಂದ ದೂರ ಇರುವ ವ್ಯಕ್ತಿ ಅಲ್ಲ. ಕೋವಿಡ್ ಕಾರಣದಿಂದ ದೂರ ಉಳಿಬೇಕಾದ ಅನಿವಾರ್ಯತೆ ಎದುರಾಯಿತು‌. ಜನರ ಆಶೀರ್ವಾದ, ಸಂಪರ್ಕ ಇಲ್ಲದೆ ನಾನು ಬದುಕೋದು ಕಷ್ಟ. ಕಲಬುರಗಿಯ ಜನ ನನ್ನನ್ನು 11 ಬಾರಿ ಗೆಲ್ಲಿಸಿದ್ದಾರೆ. ಯಾವುದೋ ಕಾರಣಕ್ಕೆ ನನಗೆ ಸೋಲಾಗಿದೆ.

 

ಪಾರ್ಲಿಮೆಂಟ್‌ನಲ್ಲಿ ಸೋಲಿಸೋದಾಗಿ ನನಗೆ ವಾರ್ನಿಂಗ್ ಕೊಟ್ಟಿದ್ದರು. ಅದರಂತೆ ನಡೆದುಕೊಂಡು ಸೋಲಿಸಿದರು. ಅವರು ಎಚ್ಚರಿಕೆ ನೀಡಿದ ನಂತರವಾದರೂ ನಮ್ಮವರುನೀವೆಲ್ಲರು ಎಚ್ಚರಗೊಳ್ಳಬೇಕಿತ್ತು. ಆದರೆ, ಅವರ ಕುತಂತ್ರ ಅರಿಯಲು ನೀವು ವಿಫಲರಾದಿರಿ. ಮೋದಿ… ಮೋದಿ… ಎಂದು ಚಪ್ಪಾಳೆ ತಟ್ಟಿದಿರಿ. ಅದರ ಫಲ ನಾನು ಸೋಲುಂಡೆ. ನರೇಂದ್ರ ಮೋದಿ, ಅಮಿತ್‌ ಶಾ, ಆರ್‌ಎಸ್‌ಎಸ್‌ನವರ ಕುತಂತ್ರದಿಂದ ನಾನು ಸೋಲುಕಂಡೆ. ನನ್ನನ್ನು ಕಲಬುರಗಿ ಜನ ಸೋಲಿಸಿಲ್ಲ. ಇಲ್ಲಿಗೆ ಬರಬೇಕಿದ್ದ ಅನೇಕ ಯೋಜನೆಗಳು ದೂರ ಹೋದವು ಎಂದು ತಮ್ಮ ಸೋಲಿನ ನಂತರದ ಬೆಳವಣಿಗೆಗಳನ್ನು ಪರಾಮರ್ಶಿಸಿದರು.

 

ಇವತ್ತು ಸಂವಿಧಾನದ ಹಕ್ಕು ಕಸಿಯಲಾಗುತ್ತಿದೆ. ಕೇಂದ್ರದಲ್ಲಿ ಹಿಂದುಳಿದ, ಅಲ್ಪಸಂಖ್ಯಾತರಿಗೆ ಮಂತ್ರಿಗಿರಿ ಕೊಟ್ಟಿದ್ದೀವಿ ಅಂತ ಹೇಳುತ್ತಾರೆ. ಆದ್ರೆ ಮಂತ್ರಿಗಳಿಗೆ ಅಧಿಕಾರ ಕೊಟ್ಟಿಲ್ಲ, ಕೇವಲ ಹೀಗಂತ ಬೋರ್ಡ್ ಹಾಕಿಕೊಂಡು ಓಡಾಡಬೇಕು. ಹೊಸದು ಏನೂ ಕೊಡೋದಿಲ್ಲ, ಇದ್ದಿದನ್ನು ಕಿತ್ತುಕೊಂಡು ಹೋಗೋದು ಮೋದಿ ಸರ್ಕಾರದ ಕೆಲಸ. 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಅಂತಾ ಬಿಜೆಪಿ, ಮೋದಿ ಕೇಳ್ತಾರೆ. ನಾವು ಮಾಡಿದ್ದೇವೆ ಅಂತಾ ಇವತ್ತು ನೀವು ಜೀವಂತ ಇದ್ದೀರಿ ಎಂದು ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟರು.

ಈಗ ನರೇಂದ್ರ ಮೋದಿ ಅವರು ಹೊಸ ಆಟ ಆರಂಭಿಸಿದ್ದಾರೆ. ನಾವೇನು ಮಾಡುತ್ತೇವೆ ಅದರ ಹೆಸರನ್ನು ಬದಲಾವಣೆ ಮಾಡುತ್ತಾ ಹೋಗುತ್ತಿದ್ದಾರೆ ಅಷ್ಟೇ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಇತ್ತು. ಇವತ್ತು ತೈಲ ಬೆಲೆ ಏರಿಕೆ ಆಗಿದೆ. ತೈಲ ಬೆಲೆ ಏರಿಕೆಯಿಂದ 7 ವರ್ಷದಲ್ಲಿ 25 ಲಕ್ಷ ಕೋಟಿ ಆದಾಯ ಆಗಿದೆ. ಕೇಂದ್ರ ಸರ್ಕಾರಕ್ಕೆ 1 ಲಕ್ಷ 35 ಸಾವಿರ ಕೋಟಿ ಮಾತ್ರ ಸಾಲ ಇತ್ತು. ಅದನ್ನು ತೀರಿಸಬಹುದಿತ್ತಲ್ಲ? ಅದನ್ನು ಬಿಟ್ಟು ಮೋದಿ ಬರಿ ಸುಳ್ಳು ಹೇಳ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 7 ಕೋಟಿ ಜನ ನಿರುದ್ಯೋಗಿಗಳಾಗಿದ್ದಾರೆ. ಸಾರ್ವಜನಿಕ ಉದ್ಯಮಗಳಲ್ಲಿ ನೌಕರಿಗಳನ್ನು ಕಡಿಮೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಉದ್ಯೋಗವನ್ನು ಸಂಪೂರ್ಣವಾಗಿ ಕಡಿಮೆ ಮಾಡ್ತಿದೆ. ಒಂದೆಡೆ ಉದ್ಯೋಗ ಕೊಡುತ್ತೇವೆ ಎಂದು ಹೇಳಿ, ಇನ್ನೊಂದು ಕಡೆ ಉದ್ಯೋಗ ಕಡಿತ ಮಾಡ್ತಿದ್ದಾರೆ. ಒಟ್ಟಾರೆ ಕೇಂದ್ರ ಸರಕಾರ 1 ಕೋಟಿ 30 ಲಕ್ಷ ಉದ್ಯೋಗ ಕಡಿತ ಮಾಡಿದೆ ಎಂದು ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version