ಯುಎಪಿಎ ಅಡಿ ಹುರಿಯತ್ ಕಾನ್ಫರೆನ್ಸ್ ನ ಎರಡೂ ಬಣಗಳ ನಿಷೇಧ ಸಾಧ್ಯತೆ

ಯುಎಪಿಎ ಅಡಿ ಹುರಿಯತ್ ಕಾನ್ಫರೆನ್ಸ್ ನ ಎರಡೂ ಬಣಗಳ ನಿಷೇಧ ಸಾಧ್ಯತೆ

ಶ್ರೀನಗರ, ಆ. 22: ಜಮ್ಮು ಹಾಗೂ ಕಾಶ್ಮೀರದಲ್ಲಿ ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಪ್ರತ್ಯೇಕತಾವಾದಿ ಚಳವಳಿಯ ಮುಂಚೂಣಿಯಲ್ಲಿರುವ ಹುರಿಯತ್ ಕಾನ್ಫರೆನ್ಸ್ ನ ಎರಡೂ ಬಣಗಳನ್ನು ಯುಎಪಿಎ ಅಡಿಯಲ್ಲಿ ನಿಷೇಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಪಾಕಿಸ್ಥಾನದ ಸಂಸ್ಥೆಗಳು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಎಂಬಬಿಎಸ್ ಸೀಟು ನೀಡುವ ಕುರಿತು ಇತ್ತೀಚೆಗೆ ನಡೆಸಿದ ತನಿಖೆಯು ಹುರಿಯತ್ ಕಾನ್ಫರೆನ್ಸ್ ಒಕ್ಕೂಟದ ಭಾಗವಾಗಿರುವ ಕೆಲವು ಸಂಘಟನೆಗಳು ಈ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಣವನ್ನು ಜಮ್ಮು ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನ ಸಂಘಟನೆಗಳಿಗೆ ನೆರವು ನೀಡಲು ಬಳಸುತ್ತಿರುವುದನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

 

ಭಯೋತ್ಪಾದನೆ ವಿರುದ್ಧ ಕೇಂದ್ರದ ಶೂನ್ಯ ಸಹಿಷ್ಣುತೆ ನೀತಿಗೆ ಅನುಗುಣವಾಗಿ ಈ ಪ್ರಸ್ತಾವನೆ ಮುಂದಿರಿಸಲಾಗಿದೆ. ಹುರಿಯತ್ ಕಾನ್ಫರೆನ್ಸ್ 1993ರಲ್ಲಿ ಅಸ್ತಿತ್ವಕ್ಕೆ ಬಂತು. ಕೆಲವು ಪಾಕಿಸ್ತಾನ ಪರ ಹಾಗೂ ಜಮಾಅತೆ ಇಸ್ಲಾಮಿ, ಜೆಕೆಎಲ್ಎಫ್, ದುಖ್ತರನ್-ಎ-ಮಿಲ್ಲತ್ನಂತಹ ನಿಷೇಧಿತ ಸಂಘಟನೆಗಳನ್ನು ಒಳಗೊಂಡಂತೆ 26 ಗುಂಪುಗಳು ಇದರಲ್ಲಿ ಸೇರಿವೆ ಎಂದು ಅವರು ಹೇಳಿದ್ದಾರೆ.

 

ಇದುವರೆಗೆ ಕೇಂದ್ರ ಸರಕಾರ ಜಮಾಅತೆ ಇಸ್ಲಾಮಿ ಹಾಗೂ ಜೆಕೆಎಲ್ಎಫ್ ಅನ್ನು ಯುಎಪಿಎ ಅಡಿಯಲ್ಲಿ ನಿಷೇಧಿಸಿದೆ. ಈ ನಿಷೇಧವನ್ನು 2019ರಲ್ಲಿ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version