ಹಾನಗಲ್‍ನಲ್ಲಿ ಬಿಜೆಪಿ ಸೋಲಿಗೆ ನಾವು ‘ಇವಿಎಂ’ಅನ್ನು ದೂರುವುದಿಲ್ಲ: ಸಿ.ಟಿ.ರವಿ ವ್ಯಂಗ್ಯ

ಹಾನಗಲ್‍ನಲ್ಲಿ ಬಿಜೆಪಿ ಸೋಲಿಗೆ ನಾವು ‘ಇವಿಎಂ’ಅನ್ನು ದೂರುವುದಿಲ್ಲ: ಸಿ.ಟಿ.ರವಿ ವ್ಯಂಗ್ಯ

 

 

ಚಿಕ್ಕಮಗಳೂರು, ನ.2: ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಮಿಶ್ರ ಪ್ರತಿಕ್ರಿಯೆ ಬಂದಿದ್ದು, ಜನತೆಯ ತೀರ್ಪನ್ನು ಒಪ್ಪುತ್ತೇವೆ. ಇವಿಎಂ ಮೇಲೆ ಆರೋಪ ಮಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೇ ವಿಪಕ್ಷಗಳು ಇವಿಎಂ ಮೇಲೆ ಆರೋಪ ಮಾಡುತ್ತಿದ್ದರು. ನಾವು ಹಾಗೆ ಮಾಡುವುದಿಲ್ಲ, ಜನಾದೇಶವನ್ನು ಸ್ವೀಕರಿಸುತ್ತೇವೆ ಎಂದು ತಿಳಿಸಿದರು.

ಹಾನಗಲ್‍ನಲ್ಲಿ ಮಾನೆ ಬಳಿಕ ಜನರ ಜೊತೆ ನಿರಂತರವಾಗಿದ್ದರು. ಬಿಜೆಪಿ ಅಭ್ಯರ್ಥಿ ಬಗ್ಗೆ ಕಡೆಗಳಿಗೆವರೆಗೆ ಆಯ್ಕೆ ಅಂತಿಮವಾಗದಿರುವುದು ಭಾಗಶಃ ನಮ್ಮ ಸೋಲಿನ ಮೇಲೆ ಪರಿಣಾಮ ಬೀರಿರಬಹುದು. ಪಕ್ಷದಿಂದ ಗೆಲುವಿಗೆ ಸರ್ವಪ್ರಯತ್ನ ಮಾಡಲಾಗಿತ್ತು. ಆದರೂ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಹಾನಗಲ್‍ನಲ್ಲಿ ಕಾಂಗ್ರೆಸ್ ಗೆದ್ದಿಲ್ಲ, ಅದು ಮಾನೆಯವರ ವೈಯಕ್ತಿಕ ಗೆಲುವಾಗಿದೆ.

ಉಪಚುನಾವಣೆಯಲ್ಲಿ ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಉಳಿದ ಪಕ್ಷಗಳಿಗಿಂತ ಹೆಚ್ಚು ಸ್ಥಾನವನ್ನು ಗಳಿಸಿದೆ. ರಾಜ್ಯದ ಸಿಂದಗಿಯಲ್ಲಿ 31ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಹಾನಗಲ್‍ನಲ್ಲಿ ವಿರೋಚಿತವಾದ ಹೋರಾಟ ನಡೆಸಿದ್ದೇವೆ. ಒಂದು ಕಡೆ ಭರ್ಜರಿ ಗೆಲುವು ಸಿಕ್ಕರೆ ಮತ್ತೊಂದು ಕಡೆ ನಿರೀಕ್ಷೆಯಂತೆ ಗೆಲುವು ಸಾಧ್ಯವಾಗಲಿಲ್ಲ, ನಮ್ಮಿಂದ ಎಲ್ಲಿ ತಪ್ಪಾಗಿದೆ ಎಂದು ಅವಲೋಕನ ನಡೆಸಿ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಇದು ಮುಖ್ಯಮಂತ್ರಿ ಅಥವಾ ಆಡಳಿತ ಪಕ್ಷದ ವಿರುದ್ಧ ಜನಾದೇಶ ಎಂದು ಭಾವಿಸುವುದಿಲ್ಲ ಎಂದರು.

ಜೆಡಿಎಸ್ ಸಂಘಟನಾತ್ಮಕವಾಗಿ ಎರಡು ಕ್ಷೇತ್ರಗಳಲ್ಲಿ ಇರಲಿಲ್ಲ, ಮಾಜಿ ಶಾಸಕ ಎಂಬ ಕಾರಣಕ್ಕೆ ಈ ಹಿಂದೆ ಜಯಸಿಕ್ಕಿತ್ತು. ಸಿಂದಗಿಯಲ್ಲಿ ಈ ಬಾರಿ ಅವರ ಮಗನೇ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರೂ ಬಿಜೆಪಿಗೆ ಗೆಲುವು ಸಿಕ್ಕಿದೆ. ಜೆಡಿಎಸ್ ಸಂಘಟನೆ, ಐಡಿಯಾಲಾಜಿ ಹಾಗೂ ನೇತೃತ್ವ ಇಲ್ಲದಾಗ ಏನು ಆಗಬೇಕಿತ್ತೋ ಹಾಗೆಯೇ ಆಗಿದೆ. ಈ ಬಗ್ಗೆ ಜೆಡಿಎಸ್ ನಾಯಕರು ಯೋಚನೆ ಮಾಡಬೇಕು ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version