ಆಕ್ಸಿಜನ್ ಖರೀದಿಗೆ ದೇಣಿಗೆ ನೀಡಿದ ಬಿಜೆಪಿ ಹಿರಿಯ ಮುಖಂಡ ಎ.ಕೆ.ಪಿ.ನಾಗೇಶ್ ದೇವನಹಳ್ಳಿಯಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ರೂ.೩,೮೦,೯೦೦ರೂ ದೇಣಿಗೆ
ದೇವನಹಳ್ಳಿ
ರಾಜ್ಯಾದಂತ ಆಕ್ಸಿಜನ್ ಕೊರತೆ ತಲೆದೊರಿದ್ದು ಕೆಲ ಭಾಗದಲ್ಲಿ ಆಕ್ಸಿಜನ್ ಸಿಗದೆ ಎಷ್ಟೋಜನ ಮೃತಪಟ್ಟಿದ್ದಾರೆ ಇದನ್ನು ಮನಗಂಡು ದೇವನಹಳ್ಳಿಯಲ್ಲಿ ಅಂತಹ ಘಟನೆಗಳು ನಡೆಯಬಾರದೆಂದು ರೂ. ೩,೮೦,೯೦೦ ರೂಗಳ ದೇಣಿಗೆ ನೀಡುತ್ತಿರುವುದಾಗಿ ಬಿಜೆಪಿ ರಾಜ್ಯ ಎಸ್ಸಿ ಮೋರ್ಚ ಖಜಾಂಚಿ ಹಾಗು ಹಿರಿಯ ಮುಖಂಡ ಎ.ಕೆ.ಪಿ.ನಾಗೇಶ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾಗಿಗಳಿಗೆ
ಆಕ್ಸಿಜನ್ ಸರಬರಾಜು ಮಾಡುವ ಐನಾಕ್ಸ್ ಕಂಪನಿಗೆ ನೇರವಾಗಿ ನಗದಾಗುವಂತೆ ಚೆಕ್ ನೀಡಿ ಅವರು ಮಾತನಾಡಿದರು. ಎಲ್ಲೆಡೆ ಆಕ್ಸಿಜನ್ ಕೊರತೆ ತಲೆದೊರುತ್ತಿದ್ದು ದೇವನಹಳ್ಳಿಯಲ್ಲಿ ಅಂತಹ ಯಾವುದೇ ಅಹಿತಕರ ಘಟನೆಗಳು ಸಂಬವಿಸಬಾರದೆAದು ಮುನ್ನೆಚ್ಚರಿಕೆಯಾಗಿ ಆಕ್ಸಿಜನ್ ಖರೀದಿಗೆ ದೇಣಿಗೆ ನೀಡಿದ್ದೇನೆ, ದೇವನಹಳ್ಳಿ ಸುತ್ತಮುತ್ತಲಿನ ಜನ ಇದರ ಸದುಪಯೋಗಪಡಿಸಿಕೊಳ್ಳಬೇಕು. ಇದು ಹೊಸದೇನಲ್ಲಿ ನಾನು ಕಳೆದ ಸಾಲಿನಲ್ಲಿ ಇದೇ ಸಂದರ್ಭದಲ್ಲಿ ದಿನಸಿ ಕಿಟ್, ಪ್ರತಿನಿತ್ಯ ಕೂಲಿಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಪರಿಸ್ಥಿತಿಯನ್ನು ಆದರಿಸಿ ಈ ಬಾರಿಯು ಸಹ ಬಡ ಕೂಲಿ ಕಾರ್ಮಿಕರಿಗೆ ಮತ್ತಷ್ಟು ಸಹಾಯ ಮಾಡುವ ಗುರಿ ಹೊಂದಿದ್ದೇನೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್ ಚೆಕ್ ಸ್ವೀಕರಿಸಿ ಅವರು ಮಾತನಾಡಿ ಬಿಜೆಪಿ ಹಿರಿಯ ಮುಖಂಡರು ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಖರೀದಿಗೆ ಐನಾಕ್ಸ್ ಕಂಪನಿಯ ಹೆಸರಿನಲ್ಲಿ ೩,೮೦,೯೦೦ ರೂಗಳ ಚೆಕ್ ನೀಡಿದ್ದರೆ ಈ ಚಕ್‌ನ್ನು ತಕ್ಷಣ ಕಂಪನಿಯವರಿಗೆ ನೀಡಿ ಆಕ್ಸಿಜನ್ ಸರಬರಾಜು ಮಾಡಲು ತಿಳಿಸಲಾಗುವುದು.
ಇದೇ ವೇಳೆ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಕಾರ್ಯದರ್ಶಿ ಗಣೇಶ್ ಬಾಬು, ಬಿಜೆಪಿ ಪದಾಧಿಕಾರಿಗಳಾದ ಮಧುಸೂಧನ್, ಶ್ರೇಯಸ್, ಆಸ್ಪತ್ರೆ ವೈದ್ಯರಾದ ಡಾ.ಶ್ರೀನಿವಾಸ್ ಸೇರಿದಂತೆ ಅನೇಕರು ಇದ್ದರು.
ಚಿತ್ರಸುದ್ದಿ: ೧೨ ದೇವನಹಳ್ಳಿ ಪೊ-೧
ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಖರೀದಿಗೆ ಬಿಜೆಪಿ ಹಿರಿಯ ಮುಖಂಡ ಎ.ಕೆ.ಪಿ.ನಾಗೇಶ್ ೩,೮೦,೯೦೦ ರೂ ದೇಣಿಗೆಯ ಚೆಕ್‌ನ್ನು ತಾಲ್ಲ್ಲೂಕು ಆರೋಗ್ಯಾಧಿಕಾರಿಗೆ ಹಸ್ತಾಂತರಿಸಿದರು.
ಗುರುಮೂರ್ತಿ ಬೂದಿಗೆರೆ
8861100990