2 ತಿಂಗಳ ಹಿಂದಿನ ಯುವತಿ ಅನುಮಾನಾಸ್ಪದ ಸಾವಿಗೆ ಬಿಗ್ ಟ್ವಿಸ್ಟ್ ….. ಆರೋಪಿಗಳ ಮೇಲೆ ಎಫ್. ಐ.ಅರ್ ದಾಖಲು 

2 ತಿಂಗಳ ಹಿಂದಿನ ಯುವತಿ ಅನುಮಾನಾಸ್ಪದ ಸಾವಿಗೆ ಬಿಗ್ ಟ್ವಿಸ್ಟ್ ….. ಆರೋಪಿಗಳ ಮೇಲೆ ಎಫ್. ಐ.ಅರ್ ದಾಖಲು 

 

 

 

ತುಮಕೂರು_ತುಮಕೂರು ನಗರದಲ್ಲಿ ಕೆಲ ತಿಂಗಳುಗಳ ಹಿಂದೆ 19 ವರ್ಷದ ಯುವತಿಯ ಅನುಮಾನಸ್ಪದ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಮೃತ ಯುವತಿಯ ತಾಯಿಯ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಎಫ್. ಐ.ಅರ್.ದಾಖಲಾದ ಘಟನೆ ವರದಿಯಾಗಿದೆ.

 

ಕರೋನ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ದಿನಸಿ ಕಿಟ್ ನೀಡುವ ನಿಟ್ಟಿನಲ್ಲಿ ಯುವತಿಯ ಕುಟುಂಬಕ್ಕೆ ಪರಿಚಯವಾದ ತುಮಕೂರು ಮಹಾನಗರ ಪಾಲಿಕೆಯ  ಮಾಜಿ ನಾಮನಿರ್ದೇಶಿತ ಕಾರ್ಪೊರೇಟರ್ ಹಾಗೂ ತುಮಕೂರಿನ ಚರ್ಚ ಒಂದರ ಕಮಿಟಿ ಸದಸ್ಯ ರಾಜೇಂದ್ರ ಕುಮಾರ್ ಎಂಬುವವನು ಅದನ್ನೇ ಅಸ್ತ್ರವಾಗಿಸಿಕೊಂಡು ಯಾರು ಕುಟುಂಬಕ್ಕೆ ಆಸರೆ ಇಲ್ಲ ಎಂಬುದನ್ನು ಬಳಸಿಕೊಂಡ ಆತ ಕುಟುಂಬಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಬಂದು ನಂತರ ಈಗ ಯುವತಿಯ ಸಾವಿಗೆ ಕಾರಣವಾಗಿರುವ…..? ಘಟನೆ ವರದಿಯಾಗಿದೆ

 

 

ಇನ್ನೂ 19 ವರ್ಷದ ಯುವತಿ ತುಮಕೂರು ನಗರದ ಬಟ್ಟೆ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಬಡತನದಲ್ಲಿದ್ದ ಕುಟುಂಬಕ್ಕೆ ಆಸರೆಯಾಗಿದ್ದಳು. ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಹತ್ತಿರವಾಗುವ ಆರೋಪಿ ರಾಜೇಂದ್ರ ಕುಮಾರ್ ಯುವತಿ ಹಾಗೂ ಯುವತಿಯ ಬಡತನವನ್ನು, ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು. ಹಲವು ಬಾರಿ ಕುಟುಂಬಕ್ಕೆ ಸಹಕಾರ ನೀಡುತ್ತಿದ್ದ ನಂತರ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಲು ತೊಡಗಿದ್ದ ನಂತರ

 

 

 

ಯುವತಿಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ಆತನ ತಾಯಿಗೆ ಗೊತ್ತಾಗದಂತೆ ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಆರೋಪಿ ಮಾಡಿದ್ದು ಯುವತಿಯ ಆರೋಗ್ಯದಲ್ಲಿ ಸ್ವಲ್ಪ ಏರು-ಪೇರು ಉಂಟಾದ ಪರಿಣಾಮ ಯುವತಿಗೆ ಔಷಧಿಗಳನ್ನು ನೀಡುತ್ತಿದ್ದ ಎಂದು ಮೃತ ಯುವತಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

 

ಇನ್ನು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆಯ ಆರೋಗ್ಯದಲ್ಲಿ ಏರುಪೇರಾಗಿ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಕ್ಟೋಬರ್ 27 ರಂದು ಆರೋಪಿ ಯುವತಿಯನ್ನು ಚಿಕಿತ್ಸೆಗಾಗಿ ದಾಖಲು ಮಾಡಿ ನಂತರ ಯುವತಿಯ ಆರೋಗ್ಯ ತೀರ ಹದಗೆಟ್ಟ ನಂತರ ನವಂಬರ್ 1ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ದಾಖಲಾಗುವ ಯುವತಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ನವಂಬರ್ ಎಂಟರಂದು ಸಾವನ್ನಪ್ಪುತ್ತಾಳೆ.ನಂತರ ಯುವತಿಯ ಅಂತ್ಯಸಂಸ್ಕಾರವನ್ನು ಬೆಂಗಳೂರಿನಲ್ಲಿ ಮಾಡಿದ್ದು.

 

ನಂತರ ತುಮಕೂರಿನಲ್ಲಿ ಮೃತ ಯುವತಿಯ ತಾಯಿ ವಾಸವಿದ್ದು ನಂತರ ಯುವತಿಯ ತಾಯಿಗೆ ಪ್ರಾಣ ಬೆದರಿಕೆಯನ್ನು ಸಹ ಹಾಕಿ ಸಾಕ್ಷಿ ನಾಶಕ್ಕೆ ಮುಂದಾಗಿದ್ದು ನಂತರ ಎಲ್ಲಾ ಬೆಳವಣಿಗೆಗಳಿಂದ ಮನನೊಂದು ತುಮಕೂರು ನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ದೂರು ನೀಡಿದ್ದು ಕೊನೆಗೂ ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಾಗಿದೆ.

 

 

ಇನ್ನು ಪ್ರಕರಣದ ಪ್ರಮುಖ ಆರೋಪಿ ರಾಜೇಂದ್ರ ಕುಮಾರ್ ಹಾಗೂ ಇತರ ಮೂವರ ಮೇಲೆ ಎಫ್ಐಆರ್ ದಾಖಲಾಗಿದ್ದು ಐಪಿಸಿ ಸೆಕ್ಷನ್ 302 ,201, 504 ,506 ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ನಗರದಲ್ಲಿ ಕೆಲ ದಿನಗಳಿಂದ ಆಡಿಯೋಗಳು, ಬಿತ್ತಿ ಪತ್ರ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು  ಇನ್ನು ಈ ಎಲ್ಲಾ ಘಟನೆಗಳ ನಂತರ ಕೊನೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿಯ ತಾಯಿ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ .

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version