Hosakote
ಅನಗತ್ಯ ತಿರುಗುವವರಿಗೆ ವಾಹನ ಸವಾರರಿಗೆ ನಗರ ಡಿವೈಎಸ್ಪಿ ಉಮಾಶಂಕರ್ಖಡಕ್ ಎಚ್ಚರಿಕೆ
ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ರಾಜ್ಯದಲ್ಲಿ ಕೊರೋನಾ ಕರ್ಫ್ಯೂ ಆದೇಶ ಹೊರಡಿಸಿದ್ದರೂ,ನಗರದಲ್ಲಿ ಸಕಾರಣವಿಲ್ಲದೇ ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರವರೆಗೆ ಅವಕಾಶ ನೀಡಿ ಸಮಯ ನಿಗದಿಗೊಳಿಸಿದ್ದರೂ, ಆ ಬಳಿಕ ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಟ ನಡೆಸುತ್ತಿದ್ದ ವಾಹನ ಸವಾರರನ್ನು ವಿಚಾರಿಸಿ, ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಾಹನಗಳನ್ನು ವಶಕ್ಕೆ ಪಡೆದು,
ಕೆಲವರನ್ನು ಬಸ್ಕಿ ಹೊಡೆಸಿ ಕಳುಹಿಸಿದಯ ದೃಶ್ಯವೂ ಕಂಡು ಬಂದಿತು.
ನಗರದ ಕೆಇಬಿ ವೃತ್ತ ವೃತ್ತದ ಬಳಿ ಮಾಸ್ಕ್ ಧರಿಸದೇ, ಹೆಲ್ಮೆಟ್ ಧರಿಸದೇ ಸಂಚರಿಸುತ್ತಿದ್ದವರು ವಿಚಾರಿಸಿ ದಂಡ ವಿಧಿಸಲಾಯಿತು.
ಪ್ರತಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಿರುವ ಪೊಲೀಸರು ಯಾವುದೇ ಸೂಕ್ತ ಕಾರಣಗಳು ಇಲ್ಲದೇ ಸಂಚರಿಸುತ್ತಿದ್ದ ಬೈಕ್, ಕಾರು ಸಹಿತ ಇತರ ವಾಹನಗಳನ್ನು ವಶಕ್ಕೆ ಪಡೆದರು.
ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕೊರೋನಾ ಕರ್ಫ್ಯೂ ಜಾರಿಯಲ್ಲಿದೆ.
ಈ ಸಂದರ್ಭದಲ್ಲಿ ಜನರು ಮನೆಯಿಂದ ಹೊರ ಬರಬಾರದು.
ಬೆಳಗ್ಗೆ 10 ಗಂಟೆಯೊಳಗೆ ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಗೆ ಸೇರಬೇಕು. 10 ಗಂಟೆಯ ಬಳಿಕ ರಸ್ತೆಯಲ್ಲಿ ಸಂಚರಿಸುವುದು ಕಂಡರೆ ದಂಡ ವಿಧಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಸಿಬಿಐ ಗಳಾದ ಶಿವರಾಜ್. ರಂಗಸ್ವಾಮಿ ಪಿಎಸ್ಐ ಗಳಾದ .ಸಿಎಂ ರಾಜು. ಪ್ರದೀಪ್ ಕುಮಾರ್ ಪೂಜಾರ್
ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು
35 ಬೈಕ್ ಹಾಗೂ ಇನ್ನಿತರೆ ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಲಾಯಿತು.