ಬುಡಕಟ್ಟು ಜನಾಂಗದ ಕುಟುಂಬದ ಮೇಲೆ ಬೆದರಿಕೆ ಹಾಕಿದ್ದ ಹಿನ್ನೆಲೆ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ತೇಜಸ್ವಿನಿ ವಿರುದ್ದ ಅಟ್ರಾಸಿಟಿ ಕೇಸ್ ದಾಖಲು.

ಬುಡಕಟ್ಟು ಜನಾಂಗದ ಕುಟುಂಬದ ಮೇಲೆ ಬೆದರಿಕೆ ಹಾಕಿದ್ದ ಹಿನ್ನೆಲೆ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ತೇಜಸ್ವಿನಿ ವಿರುದ್ದ ಅಟ್ರಾಸಿಟಿ ಕೇಸ್ ದಾಖಲು.

 

ಚಿಕ್ಕನಾಯಕನಹಳ್ಳಿ : ಬುಡಕಟ್ಟು ಜನಾಂಗದವರೊ0ದಿಗೆ ಅನುಚಿತವಾಗಿ ವರ್ತಿಸಿ ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬ0ಧಿಸಿದ0ತೆ ಚಿಕ್ಕನಾಯಕನಹಳ್ಳಿಯ ತಹಸೀಲ್ದಾರ್ ತೇಜಸ್ವಿನಿ ವಿರುದ್ದ ಅಟ್ರಾಸಿಟಿ ಕಾಯ್ದೆಯ ಅಡಿ ಕೇಸ್ ದಾಖಲಾಗಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದ್ದು ಈ ಸಂಬಂಧ ಪರಮೇಶ್ ಎಂಬವರು ದೂರನ್ನು ದಾಖಲಿಸಿದ್ದರು

 

ಪಟ್ಟಣದ ಸ್ರೀ ಶಕ್ತಿ ಭವನದಲ್ಲಿ ಸರಕಾರದ ವತಿಯಿಂದ ಆರಂಭಿಸಲಾಗಿದ್ದ ಗಂಜಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಯಾದ ಅಲೆಮಾರಿ ಕುಟುಂಬದ ಮೇಲೆ ತಹಸೀ ಲ್ದಾರ್ ಅನುಚಿತವಾಗಿ ವರ್ತಿಸಿ ಅಸಂಬದ್ದ ಶಬ್ದಗಳಿಂದ ನಿಂದನೆ ಮಾಡಿ ಬೆದರಿಕೆ ಹಾಕಿರುವುದಾಗಿ ಪರಮೇಶ್ ದೂರಿನಲ್ಲಿ ದಾಖಲಿಸಿದ್ದಾರೆ.

ಡಿಐಜಿ ಹಾಗು ಎಸ್‌ಪಿ ಗೆ ದೂರು

ತಹಸೀಲ್ದಾರ್ ತೇಜಸ್ವಿನಿ ಅನುಚಿತ ವರ್ತನೆಯ ವಿರುದ್ದ ಪಟ್ಟಣದಲ್ಲಿ ಪ್ರಕರಣ ದಾಖಲಿಸಲು ದೂರುದಾರ ಪರಮೇಶ್ ತೆರಳಿದಾಗ ಐಟಿ ವಿಭಾಗದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ನಂತರ ಬೇಸತ್ತು ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗು ಡಿಐಜಿಗೆ ಕಚೇರಿಗೆ ತೆರಳಿ ದೂರನ್ನು ಡಿಸೆಂಬರ್ ತಿಂಗಳಿನಲ್ಲಿ ದೂರನ್ನು ದಾಖಲಿಸಿದ್ದರು

ಪ್ರಕರಣದ ಹಿನ್ನಲೆ : ಚಿಕ್ಕನಾಯಕನಹಳ್ಳಿಯಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಕೇದಿಗೆಹಳ್ಳಿ ಗ್ರಾಮದ ಗುಂಡು ತೋಪಿನಲ್ಲಿರುವ ಅಲೆಮಾರಿ ಸಮುದಾಯಗಳ ಕಾಲೋನಿ ಜಲಮಯವಾಗಿತ್ತು. ಮನೆಗಳಿಗೆ ನೀರು ನುಗ್ಗಿ ಜನ ಪರದಾಡುತ್ತಿದ್ದರು. ಸರಕಾರದ ವತಿಯಿಂದ ಪಟ್ಟಣದ ಸ್ರೀ ಶಕ್ತಿ ಭವನದಲ್ಲಿ ಗಂಜಿ ಕೇಂದ್ರ ತೆರದು ಅಲೆಮಾರಿ ಕುಟುಂಬವನ್ನು ಇರಿಸಲಾಗಿತ್ತು. ವಾತಾವರಣ ಸಹಜ ಸ್ಥಿತಿಗೆ ಬಂದ ನಂತರ ತಹಸೀಲ್ದಾರ್ ತೇಜಸ್ವಿನಿ ನೀವು ಗಂಜಿ ಕೇಂದ್ರವನ್ನು ತೆರವುಗೊಳಿಸಿ ನಿಮಗೆ ನಿಗದಿ ಪಡಿಸಿದ ಸ್ಥಳ ದಬ್ಬೇಘಟ್ಟಕ್ಕೆ ತೆರಳುವಂತೆ ಅಲೆಮಾರಿ ಕುಟುಂಬಕ್ಕೆ ಸೂಚಿಸಿದ್ದಾರೆ.

 

 

 

ಅಲೆಮಾರಿ ಕುಟುಂಬದ ಸದಸ್ಯೆ ನರಸಮ್ಮ ನಮಗೆ ಮೂಲಭೂತ ಸೌಕರ್ಯ ಒದಗಿಸಿ, ಕಾಡಿನಂತಹ ಪ್ರದೇಶದಲ್ಲಿ ವಾಸಮಾಡಲು ಹೇಗೆ ಸಾಧ್ಯ ನಾವು ಮನುಷ್ಯರಲ್ಲವೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಕಚೇರಿ ಸಿಬ್ಬಂದಿ ಅಂಬಿಕಮ್ಮ ಹಾಗು ಪೋಲೀಸರನ್ನು ಕರೆದು ಅವಳನ್ನು ಆಚೆ ದಬ್ಬು ಎಂದು ದಲಿತ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದೇ ಕಾರಣಕ್ಕೆ ನಮ್ಮ ತಂದೆ ವೆಂಕಟೇಶಯ್ಯನವರ ಆಧಾರ್ ಕಾರ್ಡ್ ಅನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಿ ಸರಕಾರದಿಂದ ಬರುವ ಸೌಲಭ್ಯವನ್ನು ತಡೆಹಿಡಿಯುತ್ತೇನೆಂದು ತಹಸೀಲ್ದಾರ್ ತೇಜಸ್ವಿನಿ ಬೆದರಿಕೆ ಹಾಕಿದ್ದಾರೆಂದು ಪರಮೇಶ್ ದೂರು ನೀಡಿದ್ದಾರೆ.

 

 

ಅದೇನೇ ಇರಲಿ ತಾಲೂಕು ದಂಡಾಧಿಕಾರಿಗಳು ಎಲ್ಲಾ ವರ್ಗದ ಜನರಿಗೆ ನ್ಯಾಯ ಕೊಡಿಸಿ ಕಷ್ಟದ ಸಂದರ್ಭದಲ್ಲಿ ಸ್ಪಂದಿಸಬೇಕಾಗಿದೆ ಆದರೆ ದಲಿತ ಕುಟುಂಬಕ್ಕೆ ಸೇರಿದ ಕುಟುಂಬದ ಸದಸ್ಯರಿಗೆ ಬೆದರಿಕೆ ಒಡ್ಡುವ ಮೂಲಕ ತಮ್ಮ ದರ್ಪವನ್ನು ತೋರಿತ್ತು ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆಕ್ರೋಶ ಕೂಡ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು

 

 

ದೂರಿನನ್ವಯ ಪಟ್ಟಣದ ಠಾಣೆಯಲ್ಲಿ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ ೧೯೮೯ರ ಕಲಂ ೩(೧)(ಆರ್)(ಎಸ್),೩(೨)(೭)ಸೇರಿದಂತೆ ಎಸ್ಸಿ ಎಸ್ಟಿ ಕಾಯ್ದೆ ಹಾಗು ಇತರೆ ಕಲಂಗಳಡಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version