ಬಾಲ ಮಂದಿರದಲ್ಲಿ ಆತ್ಮಹತ್ಯೆಗೆ ಶರಣಾದ ಬಾಲಕಿ ತುಮಕೂರಿನಲ್ಲಿ ಘಟನೆ.
ತುಮಕೂರು _ ಸರ್ಕಾರಿ ಬಾಲ ಮಂದರದಲ್ಲಿ ಮಕ್ಕಳ ರಕ್ಷಣಾಧಿಕಾರಿಗಳ ವಶದಲ್ಲಿದ್ದ ಬಾಲಕಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ತುಮಕೂರು ನಗರದ ಅಮರ್ ಜ್ಯೋತಿ ನಗರದಲ್ಲಿ ಇರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ತುಮಕೂರಿನ ಬಡ್ಡಿಹಳ್ಳಿ ಮೂಲದ (17) ವರ್ಷದ ಬಾಲಕಿ ಸರ್ಕಾರಿ ಬಳಮಂದಿರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇನ್ನು ಪೋಸ್ಕೋ ಪ್ರಕರಣದ ಸಂತ್ರಸ್ತ ಬಾಲಕಿ ತುಮಕೂರಿನ ಮಹಿಳಾ ಠಾಣೆಯಲ್ಲಿ ಕಳೆದ 5 ತಿಂಗಳ ಹಿಂದೆ ದಾಖಲಾಗಿದ್ದ ಪೋಸ್ಕ ಪ್ರಕರಣದಲ್ಲಿ ಸಂತ್ರಸ್ತೆ ಯಾಗಿದ್ದು ಪ್ರಕರಣ ತನಿಖಾ ಹಂತದಲ್ಲಿ ಇದೆ.
ಇನ್ನು ಮನೆಯಿಂದ ಏಕಾಏಕಿ ಮನೆಯಿಂದ ಹೊರ ಹೋಗಿದ್ದ ಬಾಲಕಿ ಮೈಸೂರಿನ ಪೊಲೀಸರ ಕೈಗೆ ಸಿಕ್ಕಿದ್ದು ಮೈಸೂರಿನ ಸ್ವೀಕಾರ ಕೇಂದ್ರಕ್ಕೆ ಪೊಲೀಸರು ನೀಡಿದರು.
ಬುಧವಾರ ಮಧ್ಯಾನ ಮೈಸೂರಿನಿಂದ ತುಮಕೂರಿನ ಬಾಲ ಮಂದಿರಕ್ಕೆ ಬಂದಿದ್ದ ಬಾಲಕಿ ಬಾಲ ಮಂದಿರದ ರೂಮ್ನಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಮೃತ ಯುವತಿಯ ತಂದೆ ಮಾಹಿತಿ ನೀಡಿದ್ದು ಇನ್ನೂ ನಾವು ಅಧಿಕಾರಿಗಳ ಮಾಹಿತಿಯಂತೆ ಇಂದು ಮಗಳನ್ನು ನೋಡಲು ಬಂದಿದ್ದ ವೇಳೆ ಬಾಲ ಮಂದಿರದ ಮುಖ್ಯಸ್ಥರು ರೂಮಿನ ಬಾಗಿಲು ಬಡಿದು ನೋಡಿದಾಗ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಳಿದಿದೆ.
ಅದೇನೇ ಇರಲಿ ಮಕ್ಕಳ ರಕ್ಷಣೆಗಾಗಿ ಬಾಲ ಮಂದಿರ ಸ್ಥಾಪಿಸಿದ್ದು ಬಹುತೇಕ ಸಂತ್ರಸ್ತ ಮಕ್ಕಳು ಮಕ್ಕಳ ಸ್ವೀಕಾರ ಕೇಂದ್ರದಲ್ಲಿದ್ದು ಆ ಮಕ್ಕಳ ರಕ್ಷಣೆ ಅಧಿಕಾರಿಗಳ ರಕ್ಷಣೆಯಾಗಿತ್ತು ಆದರೆ ಸಂತ್ರಸ್ತ ಬಾಲಕಿ ಸ್ವೀಕಾರ ಕೇಂದ್ರದಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಸಾಕಷ್ಟು ಅನುಮಾನಗಳಿಗೂ ಸಹ ಕಾರಣವಾಗಿದೆ
ಕೂಡಲೇ ಮಕ್ಕಳ ರಕ್ಷಣಾ ಘಟಕದ ಮುಖ್ಯಸ್ಥರು ಅಧಿಕಾರಿಗಳು ಹಾಗೂ ಪೊಲೀಸರ ಗಮನಕ್ಕೆ ತಂದಿದ್ದು ಕೂಡಲೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ, ಡಿವೈಎಸ್ಪಿ ಚಂದ್ರಶೇಖರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ತುಮಕೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ