ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆಟೋ ಚಾಲಕ ಎಫ್ಐಆರ್ ದಾಖಲು.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆಟೋ ಚಾಲಕ ಎಫ್ಐಆರ್ ದಾಖಲು.

ತುಮಕೂರು _ ಆಟೋ ಚಾಲಕನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

 

 

ತುಮಕೂರು ನಗರದ ಹೊರವಲಯದ ಬೆಳಗುಂಬ ಬಳಿಯ ನಾಗರಾಜು ಲೇಔಟ್ ನಲ್ಲಿ ಘಟನೆ ನಡೆದಿದ್ದು. ಮನು ಎಂಬ ಆಟೋ ಚಾಲಕನೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪಿಯಾಗಿದ್ದಾನೆ.

 

 

 

ಸ್ನೇಹಿತೆಯ ಮನೆಗೆ ನೋಟ್ಸ್ ಕೇಳಲು ಹೋಗುತ್ತಿದ್ದ ಬಾಲಕಿಯನ್ನು ಬಲವಂತವಾಗಿ ಆಟೋದಲ್ಲಿ ಹತ್ತಿಸಿಕೊಂಡು ಹತ್ತಿರದಲ್ಲೇ ಇದ್ದ ಲೇಔಟ್ಗೆ ಬಾಲಕಿಯನ್ನು ಕರೆದು ಕೊಂಡು ಹೋಗಿ  ಅತ್ಯಾಚಾರಕ್ಕೆ ಯತ್ನಿಸಿ ಸ್ಥಳದಿಂದ ಪರಾರಿಯಾಗಿರುವ ಬಗ್ಗೆ  ಬಾಲಕಿ   ಪೋಷಕರಿಗೆ ತಿಳಿಸಿದ  ಕೂಡಲೇ ಬಾಲಕಿಯ ಪೋಷಕರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

 

 

ಎಫ್ಐಆರ್ ದಾಖಲು ಮಾಡಿರುವ ಮಹಿಳಾ ಠಾಣಾ ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದು ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ಕಳೆದ ಮೂರು ತಿಂಗಳ ಹಿಂದೆಯೂ ಸಹ ಆಟೋ ಚಾಲಕರೊಬ್ಬ  ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿ ಗೂಸಾ ತಿಂದು  ಜೈಲು ಸೇರಿರುವ ಘಟನೆ ವಾಸುವ ಮುನ್ನವೇ ಮತ್ತೊಂದು ಅತ್ಯಾಚಾರ ಯತ್ನ ಪ್ರಕರಣ ದಾಖಲಾಗಿತ್ತು

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version