ಎ.ಆರ್ ರಹ್ಮಾನ್ ಪುತ್ರಿ ಖದೀಜಾ ರಹ್ಮಾನ್ ರ ಅನಿಮೇಟೆಡ್ ಸಂಗೀತ ವೀಡಿಯೋಗೆ ಜಾಗತಿಕ ಪ್ರಶಸ್ತಿ
ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರಹ್ಮಾನ್ ಅವರ ಪುತ್ರಿ ಖದೀಜಾ ರಹ್ಮಾನ್ ಅವರು ತಮ್ಮ ತಂದೆಯ ಹಾದಿಯಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಮಿಂಚಲು ಆರಂಭಿಸಿದ್ದಾರೆ. ಆಕೆಯ ಅನಿಮೇಟೆಡ್ ಸಂಗೀತ ವೀಡಿಯೋ `ಫರಿಶ್ತೋಂ’ – ಬೆಸ್ಟ್ ಅನಿಮೇಷನ್ ಮ್ಯೂಸಿಕ್ ವೀಡಿಯೋ ಪ್ರಶಸ್ತಿಯನ್ನು ಇಂಟರ್‍ನ್ಯಾಷನಲ್ ಸೌಂಡ್ ಫ್ಯೂಚರ್ ಅವಾರ್ಡ್ಸ್ ನಲ್ಲಿ ಪಡೆದುಕೊಂಡಿದೆ.
ತಾಂತ್ರಿಕವಾಗಿ ಈ ಪ್ರಶಸ್ತಿ ಈ ವೀಡಿಯೋದ ಸಂಗೀತ ನಿರ್ದೇಶಕ ಮತ್ತು ನಿರ್ಮಾಪಕ ಎ ಆರ್ ರೆಹಮಾನ್ ಅವರಿಗೇ ಸಲ್ಲುತ್ತದೆಯಾದರೂ ಈ ವೀಡಿಯೋ ತಮ್ಮ ಪುತ್ರಿಯ ಶ್ರಮದ ಫಲಶ್ರುತಿ ಎಂದೇ ರೆಹಮಾನ್ ಅಂದುಕೊಂಡಿದ್ದಾರೆ.
`ಫರಿಶ್ತೋಂ’ಗೆ ಪ್ರಶಸ್ತಿ ಲಭಿಸಿರುವ ಕುರಿತು ರೆಹಮಾನ್ ಅವರು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಈ ಮ್ಯೂಸಿಕ್ ವೀಡಿಯೋ ಅಂತರಾಷ್ಟ್ರೀಯ ಕಿರು ಚಿತ್ರ ಸ್ಪರ್ಧೆಯಾಗಿರುವ `ಗ್ಲೋಬಲ್ ಶಾಟ್ರ್ಸ್.ನೆಟ್‍ನಲ್ಲಿ ಅವಾರ್ಡ್ ಆಫ್ ಮೆರಿಟ್ ಪಡೆದಿದೆ. ಲಾಸ್ ಏಂಜಲಿಸ್ ಫಿಲ್ಮ್ ಅವಾಡ್ರ್ಸ್‍ನಲ್ಲೂ ಈ ವೀಡಿಯೋ ವಿಶೇಷವಾಗಿ ಉಲ್ಲೇಖಗೊಂಡಿದೆ.
ಇದು ತಮ್ಮ ಸಂಗೀತ ಪಯಣದ ಮೊದಲ ಹೆಜ್ಜೆ ಎಂದು ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿರುವ ತಮ್ಮ ಮ್ಯೂಸಿಕ್ ವೀಡಿಯೋ ಬಗ್ಗೆ ಖದೀಜಾ ರೆಹಮಾನ್ ಹೇಳಿಕೊಂಡಿದ್ದಾರೆ.