ಪ್ರಧಾನ ಮಂತ್ರಿ ಅವರ ಪ್ರಯತ್ನದಿಂದ ಯೋಗವು ಜಗತ್ತಿನಲ್ಲಿ ಜನಪ್ರಿಯವಾಗಿದೆ- ಸಚಿವ ವಿ.ಸೋಮಣ್ಣ

ಪ್ರಧಾನ ಮಂತ್ರಿ ಅವರ ಪ್ರಯತ್ನದಿಂದ ಯೋಗವು ಜಗತ್ತಿನಲ್ಲಿ ಜನಪ್ರಿಯವಾಗಿದೆ- ಸಚಿವ ವಿ.ಸೋಮಣ್ಣ. 

 

 

 

 

ತುಮಕೂರು: ಭಾರತ ದೇಶದ ಪರಂಪರೆ, ಸಂಸ್ಕೃತಿಯು ತುಂಬಾ ಪ್ರಾಚೀನವಾಗಿದ್ದು, ಜಗತ್ತಿಗೆ ಆದರ್ಶವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಯೋಗವು ಜಗತ್ತಿಗೆ ಪರಿಚಯಿಸಲ್ಪಟ್ಟು ಅಂತರರಾಷ್ಟಿಯ ಯೋಗ ದಿನಾಚರಣೆ ಮೂಲಕ ವಿಶ್ವದ ೧೮೭ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲ್ಪಡುತ್ತಿದೆ ಎಂದು ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದರು.

 

 

 

 

 

 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಆಶ್ರಯದಲ್ಲಿ ೧೦ನೇ ಅಂತರರಾಷ್ಟಿçÃಯ ದಿನಾಚರಣೆ ಅಂಗವಾಗಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿಂದು ಹಮ್ಮಿಕೊಳ್ಳಲಾಗಿದ್ದ “ತನಗಾಗಿ ಮತ್ತು ಸಮಾಜಕ್ಕಾಗಿ ಯೋಗ” ಎಂಬ ಘೋಷವಾಕ್ಯದೊಂದಿಗೆ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 

 

 

 

 

 

 

ವಿಶ್ವಸಂಸ್ಥೆಯಲ್ಲಿ ನಡೆದ ೨೦೧೪ರ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯೋಗದ ಮಹತ್ವವನ್ನು ವಿವರಿಸಿ, ಜಗತ್ತಿನ ಆರೋಗ್ಯಕ್ಕಾಗಿ ಯೋಗದ ಅನಿವಾರ್ಯತೆಯನ್ನು ಪ್ರತಿಪಾದಿಸಿದರು. ಪ್ರಧಾನ ಮಂತ್ರಿಗಳ ಪ್ರಯತ್ನದಿಂದ ವಿಶ್ವಸಂಸ್ಥೆಯು ೨೦೧೪ರ ವರ್ಷದಿಂದ ಪ್ರತಿ ವರ್ಷ ಜೂನ್ ೨೧ನ್ನು ಅಂತರಾಷ್ಟಿçÃಯ ಯೋಗ ದಿನಾಚರಣೆಯಾಗಿ ಘೋಷಣೆ ಮಾಡಿದ್ದು, ಭಾರತಕ್ಕೆ ಸೀಮಿತವಾಗಿದ್ದ ಯೋಗವು ಪ್ರಧಾನ ಮಂತ್ರಿಯವರ ದೂರದೃಷ್ಟಿ ಚಿಂತನೆಯಿAದ ಜಗತ್ತಿನ ಎಲ್ಲಾ ದೇಶಗಳಲ್ಲಿ ಜನಪ್ರಿಯವಾಗಿದೆ ಎಂದು ತಿಳಿಸಿದರು.

 

 

 

 

 

 

 

ಯೋಗವು ಕೇವಲ ವ್ಯಾಯಾಮವಲ್ಲ. ಮಾನವನನ್ನು ಪ್ರಕೃತಿಯೊಂದಿಗೆ ಸಮತೋಲನಗೊಳಿಸುವ ಆರೋಗ್ಯಕರ ಅಭ್ಯಾಸವಾಗಿದೆ. ಮಾನವನ ದೇಹವು ವೈಶಿಷ್ಟö್ಯಪೂರ್ಣವಾಗಿದ್ದು, ದೇಹ ಹಾಗೂ ಮನಸ್ಸಿನ ಆರೋಗ್ಯಕ್ಕೆ ಯೋಗಾಭ್ಯಾಸವು ಅತ್ಯಂತ ಅಗತ್ಯವಾಗಿದೆ. ಯೋಗದ ಗುರಿ ಕೇವಲ ದೇಹವನ್ನು ಸರಿಪಡಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ದೇಹ, ಮನಸ್ಸು, ಆತ್ಮವನ್ನು ಶುದ್ಧೀಕರಿಸುತ್ತದೆ. ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಯೋಗಾಭ್ಯಾಸವು ಅತ್ಯವಶ್ಯಕ ಎಂದು ಹೇಳಿದರು.

 

 

 

 

 

 

ಯೋಗಕ್ಕೆ ಕೊಡುಗೆ ನೀಡಿದ ರಾಜ್ಯದ ಬಿ.ಕೆ.ಎಸ್.ಐಯ್ಯಂಗಾರ್, ಡಾ: ರಾಜ್‌ಕುಮಾರ್ ಸೇರಿದಂತೆ ಮತ್ತಿತರರು ಇಂದು ಸ್ಮರಣೀಯರಾಗಿದ್ದಾರೆ ಎಂದರು.

 

 

 

 

 

ಜ್

 

ಸಚಿವರೊಂದಿಗೆ ಯೋಗ ಮಾಡಿದ ಅಧಿಕಾರಿಗಳು :-

ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರಾದ ವಿ.ಸೋಮಣ್ಣ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಜಿಲ್ಲಾ ಆಯುಷ್ ಅಧಿಕಾರಿ ಡಾ: ಪ್ರಭಾಕರ್ ವಿ.ಎಂ., ಜಂಟಿ ಕೃಷಿ ನಿರ್ದೇಶಕ ರಮೇಶ್, ಸೇರಿದಂತೆ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಯೋಗಾಭ್ಯಾಸದಲ್ಲಿ ಸಕ್ರೀಯವಾಗಿ ಭಾಗಿಯಾದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version