ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಮೊದಲ ಮಳೆಗೆ ತೊಟ್ಟಿಕ್ಕುತ್ತಿದೆ 90 ಕೋಟಿ ವೆಚ್ಚದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ……
ತುಮಕೂರು -ನಗರದ ಹೃದಯ ಭಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 90 ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಗೆದಷ್ಟೂ ಕಳಪೆ ಕಾಮಗಾರಿಗಳ ಅನಾವರಣವಾಗುತ್ತಿದೆ,ನಗರದಲ್ಲಿ ಸುರಿದ ಮಳೆಯಿಂದ ನೂತನ ಬಸ್ ನಿಲ್ದಾಣದ ಕಳಪೆ ಕಾಮಗಾರಿ ಅನಾವರಗೊಂಡಿದ್ದು ಉದ್ಘಾಟನೆಗೂ ಮೊದಲೇ ತೊಟ್ಟಿಕುತ್ತಿದೆ.
ಮೇಲ್ನೋಟಕ್ಕೆ ಸೂಜಿಗಣ್ಣಿನಿಂದ ಸೆಳೆಯುವ ನೋಟವೇನೋ ಇದೆ ಆದರೆ ಒಳಹೊಕ್ಕರೆ ಕಾರ್ಯಾರಂಭಕ್ಕೂ ನಿಲ್ದಾಣದ ತಳ ಅಂತಸ್ತಿನಲ್ಲಿ ನೀರು ಜಿನುಗುತ್ತಿದೆ.ನೀರು ಜಿನುಗಿರುವುದು ಕಾಣಬಾರದು ಎಂದು ತೇಪೆ ಹಾಕಿ ಬಣ್ಣ ಬಳಿಯುವ ಕಾಮಗಾರಿಯೂ ಸಹ ಭರದಿಂದ ಸಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಅವರ ಕ್ಷೇತ್ರದಲ್ಲಿ ಈ ರೀತಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅಪಸ್ವರ ಕೇಳಿಬರುತ್ತಿವೆ,ಜೊತೆಗೆ ಕಾಮಗಾರಿ ಗುಣಮಟ್ಟದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂಬುದು ಪ್ರಜ್ಙಾವಂತರ ಒತ್ತಾಯವಾಗಿದೆ. ಸ್ತಳೀಯ ಶಾಸಕರೂ ಸಹ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.