ಅವೈಜ್ಞಾನಿಕ ಎಕ್ಸ್ಪ್ರೆಸ್ ಕೆನಲ್ ಕಾಮಗಾರಿ ವಿರೋಧಿಸಿ ಮೇ 30 ಕ್ಕೆ ಗೃಹ ಸಚಿವ ಪರಮೇಶ್ವರ್ ಮನೆ ಮುಂದೆ ಪ್ರತಿಭಟನೆಗೆ ನಿರ್ಧಾರ.
ತುಮಕೂರು _ ಅವೈಜ್ಞಾನಿಕ ಹೇಮಾವತಿ ಎಕ್ಸ್ಪ್ರೆಸ್ ಕೆನಲ್ ವಿರೋಧಿಸಿ ಮೇ 30 ರಂದು ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ರವರ ತುಮಕೂರು ಮನೆ ಮುಂದೆ ಪ್ರತಿಭಟನೆ ಮಾಡಲು ರಾಜಕೀಯ ಪಕ್ಷಗಳ ಮುಖಂಡರ,ಹಾಗೂ ರೈತರ ನಿರ್ಧಾರ.
ಇನ್ನು ಹೇಮಾವತಿ ಎಕ್ಸ್ಪ್ರೆಸ್ ಕ್ಯಾನಲ್ ಮೂಲಕ ಕುಣಿಗಲ್ ಭಾಗಕ್ಕೆ ನೀರು ಕೊಂಡಯುವ ಕಾಮಗಾರಿಗೆ ಹಲವಾರು ವಿರೋಧ ವ್ಯಕ್ತವಾಗುತ್ತಿದ್ದು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಹಲವು ರೈತ ಮುಖಂಡರು ಈಗಾಗಲೇ ಹಲವು ಪ್ರತಿಭಟನೆ ಮಾಡುವ ಮೂಲಕ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದವು.
ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಮುಖಂಡರು ರಾಜ್ಯ ಸರ್ಕಾರಕ್ಕೆ ಎಕ್ಸ್ಪ್ರೆಸ್ ಕೆನಲ್ ಕಾಮಗಾರಿಯನ್ನ ನಿಲ್ಲಿಸಬೇಕು ಎಂದು ಹಲವು ಬಾರಿ ಮನವಿ ಮನವಿ ಮಾಡಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು.
ಆದರೂ ಸಹ ಎಕ್ಸ್ಪ್ರೆಸ್ ಕೆನಲ್ ಕಾಮಗಾರಿ ಮುಂದುವರಿದ ಕಾರಣ ಇಂದು ತುಮಕೂರಿನ ಖಾಸಗಿ ಸಭಾಂಗಣದಲ್ಲಿ ಸಭೆ ನಡೆಸಿದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮಾಜಿ ಹಾಲಿ ಶಾಸಕರು ಹಾಗೂ ವಿವಿಧ ರೈತ ಮುಖಂಡರು ಮೇ 30ರಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಮನೆ ಮುಂದೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ ಪ್ರತಿಕ್ರಿಯಿಸಿದ್ದು ಅವೈಜ್ಞಾನಿಕ ಕಾಮಗಾರಿ ಮೂಲಕ ರಾಮನಗರಕ್ಕೆ ಹೇಮಾವತಿ ನೀರು ಕೊಂಡೊಯ್ಯಲು ಸಿದ್ದರಾಮಯ್ಯ ಹಾಗೂ ಡಿ .ಕೆ ಶಿವಕುಮಾರ್ ನೇತೃತ್ವದ ಸರ್ಕಾರ ಕಾಮಗಾರಿ ಅನುಷ್ಠಾನ ಮಾಡಿ ಕಾಮಗಾರಿ ನಡೆಸುತ್ತಿದೆ ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರಿಗೆ ವಿವಿಧ ಮುಖಂಡರು ಈಗಾಗಲೇ ಹಲವು ಬಾರಿ ಮನವಿ ಮಾಡಿ ಕಾಮಗಾರಿ ನಿಲ್ಲಿಸುವ ಬಗ್ಗೆ ಎಮರ್ಜೆನ್ಸಿ ಕ್ಯಾಬಿನೆಟ್ ನಡೆಸಿ ಕಾಮಗಾರಿಯನ್ನ ನಿಲ್ಲಿಸುವಂತೆ ಒತ್ತಾಯಿಸಿದ್ದೆವು ಆದರೂ ಸಹ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದೆ ಸುಮ್ಮನಾಗಿದ್ದು ರೈತರಿಗೆ ವಿಷ ಕೊಡುವ ಕೆಲಸವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದರು.
ಇನ್ನು ಗುಬ್ಬಿ ಹಾಗೂ ಸಿಎಸ್ ಪುರ ಭಾಗದಲ್ಲಿ ಈಗಾಗಲೇ ಪ್ರತಿಭಟನೆ ಮಾಡಿ 20 ದಿನ ಕಳೆದರೂ ಸಹ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಹಾಗಾಗಿ ಮೇ 30ರಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಮನೆ ಮುಂದೆ ಪ್ರತಿಭಟನೆಗೆ ನಿರ್ಧಾರ ಮಾಡಿದ್ದು ಪ್ರತಿಭಟನೆಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಹೇಮಾವತಿ ನೀರು ನಮ್ಮ ಹಕ್ಕು ಪ್ರತಿಭಟನೆ ಮಾಡಿ ನಮ್ಮ ಹಕ್ಕನ್ನು ಪಡೆಯುವ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯುವುದು ಆ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನು ಸಹ ರವಾನಿಸಿಬೇಕು ಅದರ ಜೊತೆಗೆ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರು ಸಹ ರೈತರು ಹಾಗೂ ಜಿಲ್ಲೆಯ ಜನರ ಹಿತ ಕಾಯುವ ನೀತಿನಲ್ಲಿ ಕೂಡಲೇ ರಾಜೀನಾಮೆ ನೀಡಿ ಸಂಪುಟದಿಂದ ಹೊರಬರಬೇಕು ಎಂದು ಶಾಸಕ ಬಿ ಸುರೇಶ್ ಗೌಡ ಒತ್ತಾಯಿಸಿದರು.
ಇನ್ನು ಸಭೆಯಲ್ಲಿ ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ, ಮಾಜಿ ಸಚಿವ ಸೊಗಡು ಶಿವಣ್ಣ, ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಎಚ್ ನಿಂಗಪ್ಪ, ಮಾಜಿ ಸಚಿವ ಡಿ ನಾಗರಾಜಯ್ಯ, ಬಿಜೆಪಿ ಮುಖಂಡ ಅನಿಲ್, ದಿಲೀಪ್, ಗುಬ್ಬಿ ಜೆಡಿಎಸ್ ಮುಖಂಡ ನಾಗರಾಜು ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ವರದಿ ಮಾರುತಿ ಪ್ರಸಾದ್ ತುಮಕೂರು