ತುಮಕೂರು ನಗರದಲ್ಲಿ  ಹಾಡುಹಗಲೇ ಡೆಡ್ಲಿ ವೀಲಿಂಗ್ ಮಾಡಿದ ಪುಂಡರು… ಕ್ರಮಕ್ಕೆ ಆಗ್ರಹ. 

ತುಮಕೂರು ನಗರದಲ್ಲಿ  ಹಾಡುಹಗಲೇ ಡೆಡ್ಲಿ ವೀಲಿಂಗ್ ಮಾಡಿದ ಪುಂಡರು… ಕ್ರಮಕ್ಕೆ ಆಗ್ರಹ. 

 

 

 

ತುಮಕೂರು _ ಇದುವರೆಗೂ ಕೊಂಚ ಬಿಡುವು ತೆಗೆದುಕೊಂಡಿದ್ದ ಬೈಕ್ ವೀಲಿಂಗ್ ಪ್ರಕರಣ ನಗರದಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು .

 

 

 

 

 

ಕೆಲ ಪುಂಡರು ತಮ್ಮ ಬೈಕ್ಗಳ ಮೂಲಕ ರಸ್ತೆಯಲ್ಲಿ ಡೆಡ್ಲಿ ಬೈಕ್ ವೀಲಿಂಗ್ ಮಾಡುವ ಮೂಲಕ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ.

 

 

 

ಹಾಡುಹಗಲೇ ಬೈಕ್ ವಿಲಿಂಗ್ ಮಾಡಿರುವ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ವಿಡಿಯೋ ಈಗ ವೈರಲ್ ಆಗಿದೆ.

 

 

 

 

 

ತುಮಕೂರು ನಗರದ ಹೊರವಲಯದ ರಿಂಗ್ ರಸ್ತೆಯ ಮರಳೂರು ಸರ್ಕಲ್ ನಿಂದ ಹಿಡಿದು ಕ್ಯಾತ್ಸಂದ್ರವರೆಗೂ ಬೈಕ್ ವೀಲಿಂಗ್ ಮಾಡಿರುವ ಪುಂಡರು .

 

 

 

 

 

 

ನಡು ರಸ್ತೆಯಲ್ಲಿ ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಾ ಕಾರುಗಳ ಮಧ್ಯೆ ತಮ್ಮ ಬೈಕ್ ವಿಲಿಂಗ್ ಮಾಡುವ ಮೂಲಕ ನಾಲ್ವರು ಯುವಕರು ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುವ ಮೂಲಕ ಟ್ರಾಫಿಕ್ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.

 

 

 

 

 

ಇತ್ತೀಚಿಗೆ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ, ಬೈಕ್ ವೀಲಿಂಗ್ ಮಾಡುವ ಪುಂಡರಿಗೆ ಸಾಕಷ್ಟು ಬಿಸಿ ಮುಟ್ಟಿಸಿದ್ದ ಪರಿಣಾಮ ಬೈಕ್ ವೀಲಿಂಗ್ ಮಾಡುವ ಪುಂಡರು ಸುಮ್ಮನಾಗಿದ್ದರೂ . ಅದರ ಮುಂದುವರಿದ ಭಾಗವಾಗಿ ಕೆಲ ಯುವಕರು ಮತ್ತೆ ಬೈಕ್ ವಿಲಿಂಗ್ ಮಾಡಿದ್ದು ಇಂತವರಿಗೆ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version