ದಲಿತ ಮಹಿಳೆ ಅಂಗನವಾಡಿಗೆ ನೇಮಕ ಮಾಡಿದ್ದಕ್ಕೆ ಮಕ್ಕಳನ್ನು ಪೋಷಕರು ಅಂಗನವಾಡಿಗೆ ಕಳುಹಿಸಲು ಹಿಂದೇಟು ಘಟನೆಯನ್ನು ಖಂಡಿಸಿದ_WDO ರಾಜ್ಯಾಧ್ಯಕ್ಷ ಲೋಹಿತ್ ಮುನಿಯಪ್ಪ
ಬೆಂಗಳೂರು : 12ನೇ ಶತಮಾನದಲ್ಲಿ ಬಸವಾದಿ ಶರಣರು ಅಸ್ಪೃಶ್ಯತೆ ವಿರುದ್ಧ ಹೋರಾಡಿದ ನೆಲದಲ್ಲೇ ಇನ್ನೂ ಕೂಡ ಅಸ್ಪೃಶ್ಯತೆ ಜೀವಂತವಾಗಿದೆ ಇಂಥ ಘಟನೆಗಳು ಸಮಾಜಕ್ಕೆ ಮಾರಕ ಇಂಥ ಜಾತೀಯತೆ , ಅನಿಷ್ಟ ಪದ್ಧತಿಗಳು ಇನ್ನೂ ಜೀವಂತ ವಾಗಿರುವುದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ ಆದರೆ ಬೀದರ್ ಜಿಲ್ಲೆಯ ಅಂಗನವಾಡಿ ಕೇಂದ್ರಕ್ಕೆ ದಲಿತ ಮಹಿಳೆಯರನ್ನು ನೇಮಕ ಮಾಡಿರುವುದಕ್ಕೆ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಇಂತಹ ಘಟನೆಗಳನ್ನು ಯಾವುದೇ ನಾಗರಿಕ ಸಮಾಜ ಒಪ್ಪುವುದಿಲ್ಲ ಇಂತಹ ಘಟನೆಗಳು ಖಂಡನೀಯ ಎಂದು ವರ್ಲ್ಡ್ ದಲಿತ ಆರ್ಗನೈಸೇಷನ್ ರಾಜ್ಯಾಧ್ಯಕ್ಷ (world dalith organization state president)ಹಾಗೂ ಕೆ.ಪಿ.ಸಿ.ಸಿ ವೈದ್ಯ ಘಟಕದ ಕೋಲಾರ ಜಿಲ್ಲಾಧ್ಯಕ್ಷ ಡಾ.ಲೋಹಿತ್ ಮುನಿಯಪ್ಪ ( dr.lohith muniyappa)ಘಟನೆಯನ್ನು ಖಂಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ_ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹತ್ಯಾಳ ಗ್ರಾಮದಲ್ಲಿ ಅಂಗನವಾಡಿಗೆ ದಲಿತ ಮಹಿಳೆಯರು ನೇಮಕವಾಗಿರುವ ಹಿನ್ನೆಲೆ ಮೇಲ್ಜಾತಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಅಂಗನವಾಡಿ ಶಿಕ್ಷಕಿಯಾಗಿ ದಲಿತ ಸಮುದಾಯದ ಸುಮಿತ್ರಾ ಬಾಯಿ ನೇಮಕವಾಗಿದ್ದರೆ, ಶಾಲೆಯ ಸಹಾಯಕಿಯೂ ದಳಿತ ಮಹಿಳೆಯಾಗಿದ್ದಾರೆ. ಈ ಹಿನ್ನೆಲೆ ಮೇಲ್ಜಾತಿಯ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದಾರೆ.
ಗ್ರಾಮದ 3 ಅಂಗನವಾಡಿ ಕೇಂದ್ರಗಳ ಪೈಕಿ 2 ಅಂಗನವಾಡಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಆದರೆ ಸಾಮಾನ್ಯ ವಾರ್ಡಿನ ಅಂಗನವಾಡಿ ಕೇಂದ್ರ ಅಸ್ಪೃಶ್ಯತೆಯ ವಿವಾದಕ್ಕೀಡಾಗಿದೆ. 2 ವರ್ಷಗಳಿಂದ ಕೋವಿಡ್ ಕಾರಣದಿಂದ ಬಂದ್ ಆಗಿದ್ದ ಅಂನವಾಡಿ ಇದೀಗ ಅಸ್ಪೃಶ್ಯತೆ ಕಾರಣಕ್ಕೆ ಮಕ್ಕಳೇ ಅಂಗನವಾಡಿಗೆ ಬರುತ್ತಿಲ್ಲ ಇನ್ನಾದರೂ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಲು ಮುಂದಾಗುತ್ತದೆಯಾ ಎಂದು ಕಾದುನೋಡಬೇಕು.