ಕರ್ನಾಟಕ ರಕ್ಷಣಾ ವೇದಿಕೆ ,ಜಿಲ್ಲಾ ಮಹಿಳಾ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರವೇ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಹನ ಶೇಖರ್ ಮಾತನಾಡಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಇದರಿಂದ ಪುರುಷರಷ್ಟೇ ಸಮಾನತೆ ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಯಾದ ವಿಷ್ಣುವರ್ಧನ್ ಮಾತನಾಡಿ. ಸಮಾಜದಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದ್ದು ಅವರಿಗೆ ಗೌರವ ಸೂಚಿಸುವುದು ಎಲ್ಲರ ಕರ್ತವ್ಯ, ಸ್ವಯಂ ಉದ್ಯೋಗ ಸ್ವಾವಲಂಬನೆ ಜೀವನ ನಡೆಸಲು ಮುಂದಾಗಬೇಕು ಎಂದು ತಿಳಿಸಿದರು.
ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸುನಿತಾ ಮೂರ್ತಿ ರವರು ಮಾತನಾಡಿ ಮಹಿಳೆಯರು ಇಂದು ಎಲ್ಲ ರಂಗದಲ್ಲಿ ಮುಂಚೂಣಿಯಲ್ಲಿದ್ದು ವೈದ್ಯಕೀಯ ,ನಾಟಕ ,ಕಲೆ ,ಸಾಹಿತ್ಯ ಐಟಿ-ಬಿಟಿ ಕ್ಷೇತ್ರ ಸೇರಿದಂತೆ ಎಲ್ಲ ರಂಗದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ . ಇದು ಸಮಾನತೆಯ ಸಂಕೇತ. ಇದನ್ನು ಮತ್ತಷ್ಟು ಗಟ್ಟಿಗೊಳಿಸಲು ಮಹಿಳೆಯರು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕರವೇ ರಾಜ್ಯ ಉಪಾಧ್ಯಕ್ಷರಾದ ಶ್ವೇತಾ ,ರಾಜ್ಯ ಸಂಘಟನಾ ಕಾರ್ಯದರ್ಶಿ ಅನ್ನಪೂರ್ಣ ,ರಾಜ್ಯ ಸಂಚಾಲಕರಾದ ಸಂಗೀತ ಶೆಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರವೇ ರಾಜ್ಯ ಸಹಕಾರ್ಯದರ್ಶಿ ತನುಜ್ ಕುಮಾರ್ , ನಿವೃತ್ತ ಮುಖ್ಯ ಶಿಕ್ಷಕಿ ಮಂಗಳಮ್ಮ ,ಜನ ಶಿಕ್ಷಣ ಇಲಾಖೆಯ ಸುಕನ್ಯ, ಉಪ್ಪರಹಳ್ಳಿ ಕುಮಾರ್ ಗೌರವಾಧ್ಯಕ್ಷರಾದ ತಾಹಿರಾ ಕುಲ್ಸುಂ, ಜಿಲ್ಲಾ ಉಪಾಧ್ಯಕ್ಷರಾದ ಗೌರಮ್ಮ ,ಗೌರಮ್ಮ ಅನಂತ, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನಾಗರತ್ನ ಮೂರ್ತಿ , ಕರವೇ ಜಿಲ್ಲಾ ಸಂಚಾಲಕರಾದ ಉಮಾ ರಾಜಶೇಖರ್ ಸೇರಿದಂತೆ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ತಾಲೂಕು ಘಟಕದ ಅಧ್ಯಕ್ಷರು ಭಾಗವಹಿಸಿದ್ದರು.