ತುಮಕೂರಿನ ಜ್ಯೋತಿ ಬೆಳಗಲು ಜ್ಯೋತಿ ಗಣೇಶರನ್ನು ಗೆಲ್ಲಿಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ತುಮಕೂರಿನ ಜ್ಯೋತಿ ಬೆಳಗಲು ಜ್ಯೋತಿ ಗಣೇಶರನ್ನು ಗೆಲ್ಲಿಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ತುಮಕೂರು: ಜ್ಯೊತಿ‌ಗಣೇಶ ಸಜ್ಜನ ರಾಜಕಾರಣಿ. ಅವರು ಯಾರ ಮನಸಿಗೂ ನೋವಾಗದಂತೆ ನಡೆದುಕೊಂಡಿದ್ದಾರೆ. ತುಮಕೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತರಲು ಸಂಸದ ಬಸವರಾಜ ಪ್ರಮುಖ ಪಾತ್ರ ವಹಿಸಿದ್ದಾರೆ. ಶೇ 95%ರಷ್ಟು ಕಾಮಗಾರಿ ಪೂರ್ಣಗೊಳ್ಳಲು ಜ್ಯೊತಿಗಣೇಶ್ ಕಾರಣ. ತುಮಕೂರಿನ ಜ್ಯೋತಿ ಬೆಳಗಲು ಜ್ಯೋತಿ ಗಣೇಶರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

 

ಇಂದು ತುಮಕೂರು ನಗರ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಅವರ ಪರ ರೋಡ್ ಶೋ ನಡೆಸಿ ಅವರು ಮತಯಾಚಿಸಿದರು.

 

ಕೇಂದ್ರದ ಡಬಲ್ ಎಂಜಿನ್ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತಂದಿದೆ. ಅದಕ್ಕೆ ಯಡಿಯೂರಪ್ಪನವರ ನೇತೃತ್ವದಲ್ಲಿ ಸ್ಮಾರ್ಟ್ ಸಿಟಿಗೆ ಶೇ 50% ರಷ್ಟು ಅನುದಾನ ನೀಡಲಾಗುತ್ತಿದೆ. ತುಮಕೂರು ಇನ್ನು ಹತ್ತು ವರ್ಷದಲ್ಲಿ ಬೆಂಗಳೂರು ರೀತಿಯಲ್ಲಿ‌ ಬೃಹತ್ ಮಹಾನಗರವಾಗಿ ಅಭಿವೃದ್ಧಿ ಆಗಲಿದೆ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಮಾಡದೇ ಭ್ರಷ್ಟಾಚಾರ ಮಾಡಿದ್ದರು. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಅವರನ್ನು ಓಡಿಸಬೇಕು. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಅವರಿಗೆ ಮತ ಹಾಕಿದರೆ ಕಾಂಗ್ರೆಸ್ ಗೆ ಮತ ಹಾಕಿದಂತೆ, ಅವರಿಗೆ ಮತ ಹಾಕಬೇಡಿ. ಬಿಜೆಪಿಯನ್ನು ಗೆಲ್ಲಿಸಿ ತುಮಕೂರಿನ ಜ್ಯೋತಿ ಬೆಳಗಲು ಜ್ಯೊತಿ ಗಣೇಶರನ್ನು ಗೆಲ್ಲಿಸಿ ಎಂದರು.

ಕಾಂಗ್ರೆಸ್ ಭ್ರಷ್ಟಾಚಾರ ಎಸಗಿ ಕರ್ನಾಟಕವನ್ನು ಎಟಿಎಂ ಆಗಿಸಿದ್ದಾರೆ: ಸಿಎಂ ಬೊಮ್ಮಾಯಿ

 

ಕಾಂಗ್ರೆಸ್ ನವರು ಭ್ರಷ್ಟಾಚಾರ ಮಾಡಿ ಕರ್ನಾಟಕವನ್ನು ಎಟಿಎಂ ಆಗಿ ಮಾಡಿದ್ದಾರೆ. ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

 

 

 

ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ.‌ ರಾಜ್ಯ ಕಾಂಗ್ರೆಸ್ ‌ಮುಕ್ತ ಆಗಲಿದೆ. ಸಾಮಾಜಿಕ‌ ನ್ಯಾಯ ಎಂದು ಭಾಷಣ ಮಾಡಿ, ಎಸ್ಸಿ ಎಸ್ಟಿ ಜನಾಂಗವನ್ನು ಇದ್ದಲ್ಲಿಯೇ ಇಟ್ಟು ತಾವು ಮಾತ್ರ ಅಭಿವೃದ್ಧಿ ಆದರು ಎಂದರು.

 

 

ತಿಗಳರ ಅಭಿವೃದ್ದಿ ನಿಗಮ, ನೇಕಾರರು, ಉಪ್ಪಾರರು, ಕಾಡುಗೊಲ್ಲರ ಅಭಿವೃದ್ಧಿ ‌ನಿಗಮ ಸ್ಥಾಪಣೆಯನ್ನು ಬಿಜೆಪಿ ಸರ್ಕಾರ ಮಾಡಿದೆ. ಕಾಂಗ್ರೆಸ್ ನವರು ಈ ಎಲ್ಲ ನಿಗಮಗಳ ಸ್ಥಾಪನೆ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಗ್ರಾಮೀಣ ಪ್ರದೇಶದಲ್ಲಿ ಕಾಡುಗೊಲ್ಲರ ಕಷ್ಟ ಕಣ್ಣೀರು ತರಿಸುವಂತಿದೆ ಎಂದರು.

 

ಹಿಂದುಳಿದ ವರ್ಗಕ್ಕೆ ಕುಂಚಟಿಗ ಒಕ್ಕಲಿಗ ಸಮುದಾಯ

ಕುಂಚಟಿಗ ಒಕ್ಕಲಿಗ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಮುಂದಿನ ದಿನಗಳಲ್ಲಿ ಸೇರಿಸಲಾಗುವುದು. ಕಾಯಕ ಮಾಡುವ 24 ಸಮುದಾಯಗಳಿಗೆ 50 ಸಾವಿರ ಸಾಲ ನೀಡಲಾಗುತ್ತಿದೆ.‌

ಕಿಸಾನ್ ಸಮ್ಮಾನ್ ಯೋಜನೆ ಗುಬ್ಬಿ ತಾಲೂಕಿನ 25 ಸಾವಿರ ರೈತರಿಗೆ ತಲುಪಿದೆ. 7000 ಮಕ್ಕಳಿಗೆ ರೈತ ವಿದ್ಯಾನಿಧಿ ಸೌಲಭ್ಯ ದೊರಕಿದೆ ಎಂದರು.

 

ಮೀಸಲಾತಿ ಹೆಚ್ಚಳ

ಎಸ್ಸಿ ಎಸ್ಟಿ ಮೀಸಲಾತಿಯನ್ನು ದೇಶದ ಯಾವುದೇ ಸರ್ಕಾರ ಮಾಡಿಲ್ಲ. ನಮ್ಮ ಬಿಜೆಪಿ ಸರ್ಕಾರ ಮಾಡಿದೆ. ಒಳ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ರೈತಾಪಿ ವರ್ಗದ ಒಕ್ಕಲಿಗ, ಲಿಂಗಾಯತ ಸಮುದಾಯದವರ ಮಿಸಲಾತಿ ಹೆಚ್ಚಳ ಮಾಡಿದ್ದೇವೆ ಎಂದರು.

 

ಮೀಸಲಾತಿ ರದ್ದು ಮಾಡಿದರೆ ಕ್ರಾಂತಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುವುದಾಗಿ‌ ಹೇಳಿದ್ದಾರೆ. ಅವರು ಹಾಗೆ ಮಾಡಿದರೆ ಕ್ರಾಂತಿಯಾಗುತ್ತದೆ.‌

ದಿಲೀಪ್ ಅವರ ಜೊತೆಗೆ ದೊಡ್ಡ ಶಕ್ತಿ ಬಂದಿದೆ. ಅವರು 25 ಸಾವಿರ ಮತಗಳಿಂದ ಜಯ ಗಳಿಸುತ್ತಾರೆ. ಕಾಂಗ್ರೆಸ್ ಮತಗಳನ್ನು ಕಮಲಕ್ಕೆ ಹಾಕಿಸಿ ರಾಜ್ಯದಲ್ಲಿ ಜನಪರ ಸರ್ಕಾರ ಅಧಿಕಾರಕ್ಕೆ ತರಲು ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version