ವಿ. ಪ ಚುನಾವಣೆಯ ಗೆಲುವು ಸಾಮೂಹಿಕ ನಾಯಕತ್ವದ ಗೆಲುವು_ವಿಜೇತ ಅಭ್ಯರ್ಥಿ ಆರ್ ರಾಜೇಂದ್ರ.
ತುಮಕೂರು_ತುಮಕೂರು ಜಿಲ್ಲೆಯ ಈ ಬಾರಿಯ ವಿ. ಪ ಸ್ಥಳೀಯ ಸಂಸ್ಥೆ ಚುನಾವಣೆಯ ಗೆಲುವು ಸಾಮೂಹಿಕ ನಾಯಕತ್ವದ ಗೆಲುವು ಎಂದು ಕಾಂಗ್ರೆಸ್ ಪಕ್ಷದ ವಿಜೇತ ಅಭ್ಯರ್ಥಿ ಆರ್ ರಾಜೇಂದ್ರ ತಿಳಿಸಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲೆಯ ಎಲ್ಲ ನಾಯಕರು ಒಗ್ಗಟ್ಟಾಗಿ ಗೆಲುವಿಗಾಗಿ ಶ್ರಮಿಸಿದ್ದರು ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕಾರಿಯಾಗಿದೆ ಎಂದರು.
ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರಾದ ಡಾ. ಜಿ ಪರಮೇಶ್ವರ್ ಹಾಗೂ ಮಾಜಿ ಸಚಿವರಾದ ಟಿಬಿ ಜಯಚಂದ್ರ ರವರ ನೇತೃತ್ವದಲ್ಲಿ ಹಾಗೂ ಜಿಲ್ಲೆಯ ಎಲ್ಲ ಹಿರಿಯ ಹಾಗೂ ಕಿರಿಯ ನಾಯಕರ ಸಾಮೂಹಿಕ ಮುಂದಾಳತ್ವದಲ್ಲಿ ಚುನಾವಣೆಯನ್ನು ಎದುರಿಸಿದ್ದೆವು.
2015ರ ವಿಧಾನಪರಿಷತ್ ಚುನಾವಣೆಯಲ್ಲಿ ಸೋಲು ಕಂಡ ನಂತರವೂ ಸಹ 2021ರ ಚುನಾವಣೆಗೂ ಸಹ ಮುಖಂಡರಿಗೆ ಆದ್ಯತೆ ನೀಡಬೇಕೆಂದು ವರಿಷ್ಠರ ತೀರ್ಮಾನದಂತೆ ಈ ಬಾರಿಯೂ ಸಹ ತನಗೆ ಟಿಕೆಟ್ ನೀಡಲಾಗಿತ್ತು ಅದರಂತೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ .
ಇನ್ನು ಪಕ್ಷದ ಹೈಕಮಾಂಡ್ ಸಹ ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ತಾನು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸ್ಪಷ್ಟ ಸಂದೇಶ ಹೈಕಮಾಂಡ್ಗೆ ಇದ್ದ ಕಾರಣ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ನನಗೆ ಟಿಕೆಟ್ ಲಭ್ಯವಾಗಿತ್ತು.
ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತದಾರರು ತಮಗೆ ಮತ ಹಾಕುವ ನಿಟ್ಟಿನಲ್ಲಿ ಗೆಲುವಿಗೆ ಸಹಕರಿಸಿದ್ದಾರೆ 2015ರ ಚುನಾವಣೆಯ ಸೋಲಿನ ನಂತರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮುಖಂಡರು ಹಾಗೂ ಸದಸ್ಯರು ಸಂಪರ್ಕದಲ್ಲಿ ಅಂದಿನಿಂದಲೂ ಇದ್ದ ಕಾರಣ ಬಾರಿಯ ಚುನಾವಣೆಯ ಗೆಲುವಿಗೆ ಸಹಕಾರಿಯಾಗಿದೆ.
ಇನ್ನು ಮತದಾರರಿಗೆ ಯಾರಿಗೆ ಮತ ಹಾಕಬೇಕೆಂದು ಮತದಾರರು ನಿರ್ಧಾರ ಮಾಡಿಯೇ ತಮಗೆ ಮತ ನೀಡಿದ್ದಾರೆ ಅದರ ಮೂಲಕ ಜನ ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ ಎನ್ನುವ ಭಾವನೆ ನನಗೆ ಇದೆ ಎಂದರು.
ಇನ್ನು ಈ ಬಾರಿಯ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕೆ. ಎ.ಎಸ್ ಅಧಿಕಾರಿಯನ್ನು ರಾಜೀನಾಮೆಯನ್ನು ನೀಡಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದರು ಹಾಗೆಯೇ ಬಿಜೆಪಿ ಪಕ್ಷದ ವತಿಯಿಂದ ಸಹ ಜಿಲ್ಲೆಯ ಹೊರಗಿನ ಅಭ್ಯರ್ಥಿಯನ್ನು ತಂದು ಚುನಾವಣೆಗೆ ನಿಲ್ಲುವಂತೆ ಮಾಡಿದ್ದರು ಇದರ ಬಗ್ಗೆ ಜನರು ಸಹ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಬಾರಿಯ ಚುನಾವಣೆಗೆ ಸಹಕಾರಿ ಕ್ಷೇತ್ರವೂ ಸಹ ಸಾಕಷ್ಟು ಅನುಕೂಲ ಮಾಡಿದೆ ಚುನಾವಣೆಯ ಗೆಲುವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು