ವಿವಿಧತೆಯಲ್ಲಿ ಏಕತೆ_ಜಾಮಿಯಾ ಮಸೀದಿ ಉಲ್ಮ

ವಿವಿಧತೆಯಲ್ಲಿ ಏಕತೆ_ಜಾಮಿಯಾ ಮಸೀದಿ ಉಲ್ಮ

 

ತುಮಕೂರು: ವಿವಿಧೆತೆಯಲ್ಲಿ ಏಕತೆಯನ್ನು ಕಾಣುವ ಭಾರತದಂತಹ ರಾಷ್ಟ್ರದಲ್ಲಿ ದ್ವೇಷದಿಂದ ದೇಶ ಕಟ್ಟಲು ಸಾಧ್ಯವಿಲ್ಲ.ಪ್ರೀತಿಯಿಂದ ಮಾತ್ರ ದೇಶದಲ್ಲಿ ಐಕತ್ಯೆ ಮೂಡಿಸಬಹುದು ಎಂದು ಮಂಡಿಪೇಟೆ ಜಾಮೀಯಾ ಮಸೀದಿಯ ಉಲ್ಕಾರವರಾದ ಮಹಮದ್‌ ಉಮ್ಮರ್ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.

 

ನಗರದ ಪಿ.ಹೆಚ್.ಕಾಲೋನಿಯ ಕಲ್ಪತರು ಡ್ರೈವಿಂಗ್ ಸ್ಕೂಲ್‌ವತಿಯಿಂದ ಆಯೋಜಿಸಿದ್ದ 75ನೇ ಸ್ವಾತಂತ್ರ ದಿನದ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತಿದ್ದ ಅವರು.ಹಲವು ಕೋಮು,ಜಾತಿ, ಭಾಷೆಗಳ ರಾಷ್ಟ್ರದಲ್ಲಿ ಸೌಹಾರ್ಧತೆ ಎಂಬುದು ನಮ್ಮೆಲ್ಲರ ಮಂತ್ರವಾಗಬೇಕಿದೆ ಎಂದರು.

 

ಭಾರತದ ಸ್ವಾತಂತ್ರ ಹೋರಾಟದಲ್ಲಿఎల్లా ಸಮುದಾಯಗಳುಭಾಗವಹಿಸಿವೆ.ಸ್ವಾತಂತ್ರ ಹೋರಾಟವನ್ನು ಮೊದಲು ಆರಂಭ ಮಾಡಿದ್ದೇ ಮುಸ್ಲಿಂರು,ಆದರೆ ಇಂದು ನಮ್ಮನ್ನು ಕಲ್ಪತರು ದೈಹಿಕ ವಾಗಿ, ಮಾನಸಿಕವಾಗಿ ಗುಲಾಮರನ್ನಾಗಿಸುವ ಹುನ್ನಾರಗಳು ನಡೆಯುತ್ತಿವೆ.ದೇಶಭಕ್ತಿಯ ಹೆಸರಿನಲ್ಲಿ ಅವರು ಹೇಳಿದ್ದೇ ಸರಿ ಎನ್ನುವ ಮನಸ್ಥಿತಿಯನ್ನು ಹುಟ್ಟು ಹಾಕುತ್ತಿದ್ದಾರೆ. ಇದರ ವಿರುದ್ದ ಮತ್ತೊಂದುಸ್ವಾತಂತ್ರ ಹೋರಾಟದ ಅಗತ್ಯವಿದೆ ಎಂದು ಮಹಮದ್‌ ಉಮ್ಮರ ಅನ್ಸಾರಿ ತಿಳಿಸಿದರು.

 

ಡೆ. ವಿಂಗ್ ಸ್ಕೂಲ್‌ ವ್ಯವಸ್ಥಾಪಕ ನಿರ್ದೇಶಕ ಹಬೀಬ್ ಉರ್ ರೆಹಮಾನ್‌ ಮಾತನಾಡಿ,ಸ್ವಾತಂತ್ರದಿನ ಅಮೃತ ಮಹೋತ್ಸವವನ್ನು ನಾವೆಲ್ಲರೂ ಬಹಳ ವಿಜೃಂಬಣೆಯಿಂದ ಆಚರಿಸುತ್ತಿದ್ದೇವೆ.ಆದರೆ ಇತ್ತೀಚಿನ ಭಾಗವಹಿಸಿದ್ದರು. ದಿನಗಳಲ್ಲಿ ಒಂದು ವರ್ಗವನ್ನು ದೇಶದಅಭಿವೃದ್ಧಿ.ರಾಜಕೀಯ ಎಲ್ಲದರಿಂದಲೂ ದೂರವಿಡುವ ಪ್ರವೃತ್ತಿ ನಡೆಯುತ್ತಿದೆ.ನಮ್ಮ ಹಿರಿಯರು ಕ೦ಡಿದ್ದ ಸ್ವಾತ೦ತ್ರದ ಆಶಯಗಳಿಗೆ ವಿರುದ್ಧವಾದ ನಡೆಗಳು,ದೇಶದ ಜನರಲ್ಲಿ ಗೊಂದಲವನ್ನು ಉಂಟು ಮಾಡುತ್ತಿದೆ.ಇದರ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಂಡು ಕಷ್ಟಪಟ್ಟು ಗಳಿಸಿದ ಸ್ವಾತಂತ್ರವನ್ನು ಉಳಿಸಬೇಕಿದೆ ಎಂದರು.

 

 

 

ಅಮೃತಮಹೋತ್ಸವ ಧ್ವಜಾರೋಹಣ ಸಮಾರಂಭದಲ್ಲಿ ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ ಮುಜಿಲ್ ಪಾಷ,ಪ್ರಜಾಶಕ್ತಿ ಚಾನಲ್‌ನ ವ್ಯವಸ್ಥಾಪಕ ಶಬೀರ್ ಪಾಷ, ಸಿಇಓ ಕುಸುಮ.ಕಲ್ಪತರು ಡ್ರೈವಿಂಗ್ ಸ್ಕೂಲ್‌ನ ವ್ಯವಸ್ಥಾಪಕರಾದ ಹುಸ್ನಾ ಆರಾ, ನಗರದ ವಿವಿಧ ಮಸೀದಿಗಳ ಹತ್ತಾರು ಉಲ್ಟಾಗಳು ಬಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version