ಅಭಿಮಾನಿಗಳ ಪ್ರೀತಿ-ವಿಶ್ವಾಸಕ್ಕೆ ಸದಾ ಚಿರಋಣಿ _ಶಾಸಕ ಡಿ.ಸಿಗೌರಿಶಂಕರ್.

ಅಭಿಮಾನಿಗಳ ಪ್ರೀತಿ-ವಿಶ್ವಾಸಕ್ಕೆ ಸದಾ ಚಿರಋಣಿ _ಶಾಸಕ ಡಿ.ಸಿಗೌರಿಶಂಕರ್.

 

ತುಮಕೂರು ಗ್ರಾಮಾಂತರ ಕ್ಷೇತ್ರದ ಜನರು ಪ್ರೀತಿಪಾತ್ರರು ಅವರ ಪ್ರೀತಿಗೆ ಬೆಲೆಕಟ್ಟಲಾಗದು ಅವರ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿಸಿ ಗೌರಿಶಂಕರ ತಿಳಿಸಿದರು.

 

ತುಮಕೂರಿನ ಬಳ್ಳಗೆರೆ ಗ್ರಾಮದಲ್ಲಿ ಶಾಸಕ ಗೌರಿಶಂಕರ್ ಅವರ ನಿವಾಸದಲ್ಲಿ ಅವರ 44 ನೆ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ವೈದ್ಯಕೀಯ ತಪಾಸಣ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಇನ್ನೂ ಶಿಬಿರದಲ್ಲಿ ಮಧುಮೇಹ , ಹೃದ್ರೋಗ ಕಣ್ಣು ತಪಾಸಣೆ, ರಕ್ತದಾನ ಶಿಬಿರ , ಸೇರಿದಂತೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು ಇನ್ನು ಆರೋಗ್ಯ ಶಿಬಿರದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

 

 

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಗೌರಿಶಂಕರ್ ಅವರು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 1200 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳು ನಡೆಯುತ್ತಿವೆ ಗ್ರಾಮಾಂತರ ಕ್ಷೇತ್ರದಲ್ಲಿ ನಾನು ಮನೆ ಮಗನಾಗಿ ಎಲ್ಲರ ಕಷ್ಟದಲ್ಲೂ ಭಾಗಿಯಾಗಿದ್ದು ಅವರ ಅಭಿಮಾನಕ್ಕೆ ನಾನು ಸದಾ ಚಿರಋಣಿ ಯಾಗಿದ್ದು ನನ್ನ ಕೊನೆ ಉಸಿರು ಇರುವವರೆಗೂ ನಾನು ನನ್ನ ಪಕ್ಷದ ಕಾರ್ಯಕರ್ತರು ತಲೆತಗ್ಗಿಸುವಂತೆ ಎಂದು ನಡೆಯುವುದಿಲ್ಲ ಸಾರ್ವಜನಿಕರ ಕಷ್ಟಕ್ಕೆ ನಾನು ಸದಾ ಸಿದ್ಧನಿದ್ದು ಅವರ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆ ಗ್ರಾಮಾಂತರ ಕ್ಷೇತ್ರದ ಜನರಿಗೆ ಎಂಥ ಕಷ್ಟ ಬಂದರೂ ಅವರ ಕಷ್ಟ ಸುಖಗಳಿಗೆ ನಾನು ಅವರ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದರು.

 

ಇನ್ನೂ ಕಾರ್ಯಕ್ರಮದಲ್ಲಿ ಅಂಗವಿಕಲರು ಹಿರಿಯರು ವಿಶೇಷಚೇತನರಿಗೆ ಸುಮಾರು 500 ವೀಲ್ಚೇರ್ 2000 ಕನ್ನಡಕ ಹಾಗೂ 2000ಕ್ಕೂ ಹೆಚ್ಚು ವಾಕಿಂಗ್ ಸ್ಟಿಕ್ ಗಳನ್ನು ಗೌರಿಶಂಕರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷಚೇತನರು ಹಾಗೂ ಅಂಗವಿಕಲರಿಗೆ ವಿತರಿಸಲಾಯಿತು.

 

ಇನ್ನು ನೆಚ್ಚಿದ ನಾಯಕನಿಗೆ ಗೌರವ ಸಲ್ಲಿಸಲು ಬೆಳಗ್ಗೆಯಿಂದಲೂ ಅಭಿಮಾನಿಗಳು ಕಾದು ಕುಳಿತು ಹೈರಾಣಾಗಿದ್ದರು ಇನ್ನು ಮಧ್ಯಾಹ್ನ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಗೌರಿಶಂಕರ್ ಅವರು ಅಭಿಮಾನಿಗಳ ಪ್ರೀತಿ-ವಿಶ್ವಾಸಕ್ಕೆ ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿದರು. ನೆಚ್ಚಿನ ನಾಯಕನಿಗೆ ಅಭಿಮಾನಿಗಳು ಹಾರ-ತುರಾಯಿ ಹಾಕಿ ಉಡುಗೊರೆಗಳನ್ನು ನೀಡಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

 

ಇದೇ ಸಂದರ್ಭದಲ್ಲಿ ಶ್ರೀಕ್ಷೇತ್ರ ಚಿಕ್ಕಣ್ಣ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಪಾಪಣ್ಣ ಮುಖಂಡರಾದ ರಾಮಚಂದ್ರಪ್ಪ ರಾಮಚಂದ್ರಯ್ಯ, ಜೆಡಿಎಸ್ ಮುಖಂಡರಾದ ಬೆಳ್ಳಿ ಲೋಕೇಶ್, ವೇಣುಗೋಪಾಲ್, ರಾಹುಲ್ ಗೌಡ ,ಅಭಿಷೇಕ್, ಶಿರಾಕ್ ರವೀಶ್, ಪಾಲನೇತ್ರ ಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಮಾಂಜನೇಯ, ತುಮಕೂರು ಮಹಾನಗರಪಾಲಿಕೆ ಸದಸ್ಯರು ಅದ ಮಂಜುನಾಥ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಜೆಡಿಎಸ್ ಕಾರ್ಯಕರ್ತರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version