ಗೂಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆ ಜೆಡಿಎಸ್ ಪಾಲು
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಗೂಳೂರು ಜಿಲ್ಲಾಪಂಚಾಯ್ತಿ ವ್ಯಾಪ್ತಿಗೊಳಪಡುವ ಗೂಳೂರು ಗ್ರಾಮಪಂಚಾಯ್ತಿ ಅಧ್ಯಕ್ಷ ಸ್ತಾನ ಪುನಃ ಜೆಡಿಎಸ್ ಪಾಲಾಗಿದೆ. ಆ ಮೂಲಕ ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ.
ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ಅವರ ಜನಪರ ಕಾರ್ಯಕ್ರಮಗಳ ಫಲವಾಗಿ ಗ್ರಾಮಾಂತರ ಕ್ಷೇತ್ರದ ಬಹುತೇಕ ಗ್ರಾಮಪಂಚಾಯ್ತಿಗಳಲ್ಲಿ ದಳಪತಿಗಳ ದರ್ಬಾರ್ ಶುರುವಾಗಿದೆ.
ಗ್ರಾಮಾಂತರ ಶಾಸಕರಾದ ಡಿ ಸಿ ಗೌರೀಶಂಕರ್ ನೇತೃತ್ವದಲ್ಲಿ ಗೂಳೂರು ಜಿಲ್ಲಾಪಂಚಾಯ್ತಿ ಉಸ್ತುವಾರಿ ಜಿ ಪಾಲನೇತ್ರಯ್ಯ,ಮಾನಂಗಿ ನಿಂಗರಾಜು,ಗೂಳಹರಿವೆ ತಿಮ್ಮಪ್ಪ ಹಾಗೂ ಇತರೆ ಜೆಡಿಎಸ್ ಮುಖಂಡರ ಶ್ರಮದ ಫಲವಾಗಿ ಗೂಳೂರು ಗ್ರಾಮಪಂಚಾಯ್ತಿ ಜೆಡಿಎಸ್ ಅಧ್ಯಕ್ಷ ಸ್ತಾನ ಮತ್ತೊಮ್ಮೆ ಜೆಡಿಎಸ್ ತೆಕ್ಕೆಗೆ ಬಿದ್ದಿದೆ.
ಗೂಳೂರು ಗ್ರಾಮಪಂಚಾಯ್ತಿಯಲ್ಲಿ ಜೆಡಿಎಸ್ ಪಕ್ಷದ ಗೂಳೂರು ಕೃಷ್ಣೇಗೌಡ ಅವರು ಅಧ್ಯಕ್ಷರಾಗಿದ್ದರು,ಅಧಿಕಾರ ಅವಧಿ ಮುಗಿದ ಬಳಿಕ ತೆರವಾಗಿದ್ದ ಅಧ್ಯಕ್ಷ ಸ್ತಾನಕ್ಕೆ ಚುನಾವಣೆ ನಡೆದು ಜೆಡಿಎಸ್ ಪಕ್ಷದ ಮಹದೇವಪ್ಪ ನಾಮಪತ್ರ ಸಲ್ಲಿಸಿದ್ದರು,ಬಿಜೆಪಿ ಪಕ್ಷದಿಂದ ಯಾರೂ ನಾಮಪತ್ರ ಸಲ್ಲಿಸದ ಕಾರಣ ಮಹದೇವಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದೇ ವೇಳೆ ಗೂಳೂರು ಗ್ರಾಮಪಂಚಾಯ್ತಿ ನೂತನ ಅಧ್ಯಕ್ಷ ಮಹದೇವಪ್ಪ ಮಾತನಾಡಿ ಶಾಸಕರಿಗೆ ಹಾಗೂ ಜೆಡಿಎಸ್ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು,ಶಾಸಕರ ಸಲಹೆ, ಸೂಚನೆ ಪಡೆದು ಗೂಳೂರು ಜನರ ಸೇವೆ ಮಾಡುವೆ ,ಶಾಸಕರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುವುದಾಗಿ ತಿಳಿಸಿದರು. ಈ ವೇಳೆ ಗೂಳೂರು ಜಿಲ್ಲಾಪಂಚಾಯ್ತಿ ಉಸ್ತುವಾರಿ ಜಿ.ಪಾಲನೇತ್ರಯ್ಯ,ಗೂಳೂರು ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಕೃಷ್ಣೇಗೌಡ,ಜೆಡಿಎಸ್ ಮುಖಂಡರಾದ ಪಂಚೆಗಂಗಣ್ಣ ಸೇರಿದಂತೆ ಹಲವಾರು ಮುಖಂಡರು ಉಪಸ್ತಿತರಿದ್ದರು