ಚಿನ್ನದ ಹುಡುಗನಿಗೆ ಅಭಿನಂದನೆ ಸಲ್ಲಿಕೆ.
ತುಮಕೂರಿನ ಮುಂಜಾನೆ ಗೆಳೆಯರ ಬಳಗದ ಸದಸ್ಯರು ಟೋಕಿಯೋ ಒಲಂಪಿಕ್ಸ್ನಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜಾವಲಿನ್ ತ್ರೊ ಆಟದಲ್ಲಿ ಚಿನ್ನ ಪಡೆದ ಹರಿಯಾಣ ಮೂಲದ ಕ್ರೀಡಾಪಟು ನೀರಜ್ ಚೋಪ್ರಾಗೆ ಅಭಿನಂದನೆ ಸಲ್ಲಿಸಿ ಸಂಭ್ರಮಿಸಿದರು.
ತುಮಕೂರಿನ ವಿಶ್ವವಿದ್ಯಾನಿಲಯದ ಅವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಅಂತರಾಷ್ಟ್ರೀಯ ಕ್ರೀಡಾಪಟು ಆನಂದ್ ಮಾತನಾಡಿ ನೀರಜ್ ಚೋಪ್ರಾ ರವರ ಸಾಧನೆ ದೇಶವೇ ಸಂಭ್ರಮಿಸುವ ಸಾಧನೆಯಾಗಿದೆ ಕ್ರೀಡಾ ಲೋಕದಲ್ಲಿ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆದಿಡುವ ಸುದಿನ ಎಂದರು ಈ ಬಾರಿಯ ಒಲಂಪಿಕ್ಸ್ ನಲ್ಲಿ ಏಳು ಪದಕಗಳು ಭಾರತಕ್ಕೆ ಸಿಕ್ಕಿದ್ದು ನೀರಜ್ ಚೋಪ್ರಾ ರವರ ಸಾಧನೆ ಹಲವು ದಶಕಗಳ ಇತಿಹಾಸವನ್ನು ಮರುಕಳಿಸುವಂತೆ ಮಾಡಿದ್ದಾರೆ ಅದರ ಮೂಲಕ ಇತರ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಬಿಜೆಪಿ ಮುಖಂಡರ ಚಂದ್ರಶೇಖರ್ ಮಾತನಾಡಿ ದೇಶದ ಉತ್ತಮ ಕ್ರೀಡಾಪಟು ನೀರಜ್ ಚೋಪ್ರಾ ರವರು ವಿಶಿಷ್ಟ ಸಾಧನೆ ಮಾಡಿದ್ದು ಅಂತಹ ಕ್ರೀಡಾಪಟುಗಳಿಗೆ ಉತ್ತಮ ಸಹಕಾರ ನೀಡಿದ ಎಲ್ಲರೂ ಧನ್ಯರು ಕ್ರಿಕೆಟ್ ನಂತರ ಯಾವುದೇ ಕ್ರೀಡೆಗೆ ಹೆಚ್ಚಿನ ಪ್ರಾಧಾನ್ಯತೆ ಇಲ್ಲವೇನೋ ಅನ್ನುವ ಭಾವನೆ ನಮ್ಮಲ್ಲಿ ಇತ್ತು ಆದರೆ ನೀರಜ್ ಚೋಪ್ರಾ ರವರ ಸಾಧನೆ ಅವೆಲ್ಲವನ್ನು ಮೆಟ್ಟಿ ನಿಲ್ಲುವಂತೆ ಮಾಡಿದ್ದಾರೆ ಎಂದರು.
ಮುಖಂಡ ಧನಿಯಕುಮಾರ್ ಮಾತನಾಡಿ ನೀರಜ್ ಚೋಪ್ರಾ ರವರು 130 ಕೋಟಿ ಜನರ ಪ್ರತಿನಿಧಿಯಾಗಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ದೇಶದ ಹೆಮ್ಮೆಯ ಪುತ್ರರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮುಂಜಾನೆ ಗೆಳೆಯರ ಬಳಗದ ಸದಸ್ಯರಾದ ಕೃಷ್ಣಮೂರ್ತಿ, ಕೃಷ್ಣಪ್ಪ ,ರಮೇಶ್ ,ರವೀಂದ್ರ ,ಮಂಜುನಾಥ್, ನರೇಶ್, ಪದ್ದು ಸೇರಿದಂತೆ ಹಲವರು ಹಾಜರಿದ್ದರು.