ತುಮಕೂರು ಮಹಾನಗರ ಪಾಲಿಕೆ ಚುನಾವಣೆ : ಮೇಯರ್ ಆಗಿ ಪ್ರಭಾವತಿ ಸುಧೀಶ್ವರ್, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ ಆಯ್ಕೆ

ತುಮಕೂರು ಮಹಾನಗರ ಪಾಲಿಕೆ ಚುನಾವಣೆ : ಮೇಯರ್ ಆಗಿ ಪ್ರಭಾವತಿ ಸುಧೀಶ್ವರ್, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ ಆಯ್ಕೆ

ತುಮಕೂರು ಮಹಾನಗರ ಪಾಲಿಕೆ ಚುನಾವಣೆಯು ಇಂದು ಮಧ್ಯಾಹ್ನ ಪಾಲಿಕೆಯ ಆವರಣದಲ್ಲಿ ನಡೆದಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ಪ್ರಭಾವತಿ ಸುಧೀಶ್ವರ್ ಮೇಯರ್ ಆಗಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಟಿ.ಕೆ.ನರಸಿಂಹಮೂರ್ತಿ ಉಪ ಮೇಯರ್ ಆಗಿ ಪಾಲಿಕೆಯ ಗದ್ದುಗೆಯನ್ನು ಅಲಂಕರಿಸಿದ್ದಾರೆ.

 

ನಿರೀಕ್ಷೆಯಂತೆ ಬಿಜೆಪಿ ಪಕ್ಷವನ್ನು ವಿರೋಧ ಪಕ್ಷವನ್ನಾಗಿಯೇ ಉಳಿಸಿದ ಈ ಎರಡೂ ಪಕ್ಷಗಳ ಕಾರ್ಯತಂತ್ರಗಾರಿಕೆಯ ಮುಂದೆ ಬಿಜೆಪಿಯ ಯಾವ ತಂತ್ರ, ಕುತಂತ್ರ, ಆಪರೇಷನ್ ನಡೆಯದೇ ಬಿಜೆಪಿಯನ್ನು ಮಂಕಾಗಿ ಮಾಡೀ, ಸೈಡ್‌ಲೈನ್‌ನಲ್ಲೇ ಇರುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಒಗ್ಗಟ್ಟಿನ ಮಂತ್ರ ಜಪಿಸುವ ಮೂಲಕ ನಿರೀಕ್ಷೆಯಂತೆ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಉಳಿದಂತೆ ಎಲ್ಲಾ ಪಕ್ಷದವರು ತಮ್ಮ ತಮ್ಮ ಅಭ್ಯರ್ಥಿಗಳಿಗೆ ಈಗಾಗಲೇ ವಿಪ್ ಜಾರಿಗೊಳಿಸಿದ್ದರೂ ಸಹ, ಕೆಲವೊಂದು ಕಡೆ ತಂತ್ರಗಾರಿಕೆಯನ್ನು ನಡೆಸಲು ಕೆಲ ಪಕ್ಷದ ಮುಖಂಡರು ಮುಂದಾಗಿದ್ದರೂ ಎನ್ನಲಾಗಿದೆ, ಆದರೆ ಕೊನೆ ಕ್ಷಣದಲ್ಲಿ ಯಾವ ತಂತ್ರಗಾರಿಕೆಯೂ ನಡೆದ ಕಾಂಗ್ರೆಸ್‌ಗೆ ಮೇಯರ್ ಪಟ್ಟ, ಜೆಡಿಎಸ್ ಉಪ ಮೇಯರ್ ಪಟ್ಟಗಳನ್ನು ತಂದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

ಮಹಾನಗರ ಪಾಲಿಕೆಯ ಒಟ್ಟು ಸದಸ್ಯರು : 35 ಅದರಲ್ಲಿ (ಬಿಜೆಪಿಯ 12, ಕಾಂಗ್ರೆಸ್ 10, ಜೆಡಿಎಸ್ 10, ಪಕ್ಷೇತರರು 03), ಶಾಸಕ 01, ಸಂಸದರು 02, ವಿಧಾನಪರಿಷತ್ ಸದಸ್ಯರು 01 ಸೇರಿದಂತೆ ಒಟ್ಟು 39 ಮತಗಳು ಇದ್ದವು. ಆದರೂ ಸಹ ತುಮಕೂರಿನಲ್ಲಿ ಶಾಸಕರು, ಸಂಸದರು ಬಿಜೆಪಿಯವರೇ ಆಗಿದ್ದರೂ ಸಹ ಪಾಲಿಕೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಸಫಲವಾಗಿೆಲ್ಲ.

 

ಈ ಹಿಂದೆ ಬಿಜೆಪಿಯ ಬಲದಿಂದ ಮೇಯರ್ ಸ್ಥಾನವನ್ನು ಅಲಂಕರಿಸಿದ್ದ ಬಿ.ಜಿ.ಕೃಷ್ಣಪ್ಪರವರ ಆಡಳಿತಾವಧಿಯಲ್ಲಿದ್ದ ನ್ಯೂನ್ಯತೆಗಳೇ ಬಿಜೆಪಿಗೆ ತನ್ನದೇ ಪಕ್ಷದ ಕೆಲ ಸದಸ್ಯರಿಗೆ ಉಪ ಮೇಯರ್ ಸ್ಥಾನವನ್ನು ತಂದುಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಮೂಲಕ ಉಪ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಪಕ್ಷದ ಸದಸ್ಯರಾದ ಮಲ್ಲಿಕಾರ್ಜುನ್, ನಳಿನ ಇಂದ್ರಕುಮಾರ್, ಗಿರಿಜಾ ಧನಿಯಾಕುಮಾರ್ ಇವರುಗಳನ್ನು ಗೆಲ್ಲಿಸಿಕೊಳ್ಳುವ ತಂತ್ರಗಾರಿಕೆಯನ್ನು ಸರಿಯಾಗಿ ಮಾಡಲು ಆಗಿಲ್ಲ.

 

ಇನ್ನು ಇಂದು ನಡೆದ ಚುನಾವಣೆಗೆ ಮೂರು ಪಕ್ಷದ ಸದಸ್ಯರು ಪಕ್ಷಾತೀತವಾಗಿ ಬೆಂಬಲ ನೀಡಿರುವುದಾಗಿ ಸಂಸದರದ ಜಿ.ಎಸ್ ಬಸವರಾಜು ತಿಳಿಸಿದ್ದಾರೆ.

 

 

ಇದೇ ಸಂದರ್ಭದಲ್ಲಿ ಮಾತನಾಡಿರುವ ನೂತನ ಮೇಯರ್ ಪ್ರಭಾವತಿ ಸುದೀಶ್ವರ ರವರು ಚುನಾವಣೆಗೆ ಸಹಕರಿಸಿದ ಸರ್ವ ಸದಸ್ಯರಿಗೂ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ ಮುಂದಿನ ದಿನದಲ್ಲಿ ತಮ್ಮ ಸ್ಥಾನಕ್ಕೆ ಚುತಿ ಬರದಂತೆ ನಡೆದುಕೊಳ್ಳುವ ಮೂಲಕ ಉತ್ತಮ ಆಡಳಿತ ನೀಡುವ ಭರವಸೆಯನ್ನು ಸಹ ನೀಡಿದ್ದಾರೆ.

 

ಉಪಮೇಯರ್ ನರಸಿಂಹಮೂರ್ತಿ ಮಾತನಾಡಿ ಇಂದು ನಡೆದ ಚುನಾವಣೆಗೆ ಗೆಲ್ಲಲು ಸಹಕರಿಸಿದ ಶಾಸಕರು ಸಂಸದರು ಮುಖಂಡರು ಎಲ್ಲಾ ಸದಸ್ಯರಿಗೂ ಅಭಿನಂದನೆಗಳನ್ನ ಸಲ್ಲಿಸಿದ್ದು ಪಕ್ಷಾತೀತವಾಗಿ ಅವಿರೋಧವಾಗಿ ಎಲ್ಲರೂ ಬೆಂಬಲ ನೀಡಿದ್ದು ನಿಜಕ್ಕೂ ಸಂತಸ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version