ದೇಸೀಯ ಕ್ರೀಡೆಯ ಕಡೆ ಒಲವು ತೋರಿದ ತುಮಕೂರು ಜಿಲ್ಲಾ ಎಸ್.ಪಿ

ದೇಸೀಯ ಕ್ರೀಡೆಯ ಕಡೆ ಒಲವು ತೋರಿದ ತುಮಕೂರು ಜಿಲ್ಲಾ ಎಸ್.ಪಿ

 

ತುಮಕೂರು – ನಗರದ ಡಿ.ಎ.ಆರ್. ಮೈದಾನದಲ್ಲಿ ನವೆಂಬರ್21ರಿಂದ ಮೂರು ದಿನಗಳ ಕಾಲ ನಡೆಯುವ ತುಮಕೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಒಂದು ವಿಶೇಷವಾದ ಆಕರ್ಷಣೆ ಮತ್ತು ಒಂದು ಮಾನವೀಯ ನೆಲೆಯಿಂದ ಕಡೆಗಣಿಸಲ್ಪಡುವ ಮಂಗಳಮುಖಿಯೊಬ್ಬರಿಂದ ಕ್ರೀಡಾಕೂಟವನ್ನು ಉದ್ಘಾನೆಗೊಳಿಸಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯವನ್ನು ಜನತೆ ಶ್ಲಾಘಿಸಿದ್ದಾರೆ.

 

 

 

ಮೈಸೂರು ಜಿಲ್ಲೆ ಸಾಲಿಗ್ರಾಮ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷರಾದ ಮಂಗಳಮುಖಿ ದೇವಿಕ ಅವರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಪಾರಿವಾಳ ಮತ್ತು ಬಲೂನ್‍ಗಳನ್ನು ಹಾರಿ ಬಿಡುವ ಮೂಲಕ ಚಾಲನೆ ಇಂದು ಚಾಲನೆ ನೀಡಿದರು. ಈ ಮೂಲಕ ಜಿಲ್ಲಾ ಪೊಲೀಸ್ ಇಲಾಖೆಯು ಒಂದು ಹೊಸ ಆಲೋಚನೆಯನ್ನು ಹುಟ್ಟು ಹಾಕಿದ್ದು, ಈ ಕಾರ್ಯ ಮಾಡಿದ್ದಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯನ್ನು ಉನ್ನತಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿಗಳನ್ನು ಅಭಿನಂದಿಸಿದ್ದಾರೆ.

 

 

 

ನಂತರ ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಣದ ಅರ್ಹತೆ ಹೊಂದಿರುವ ಮಂಗಳಮುಖಿಯರಿಗೆ ಪೊಲೀಸ್ ಇಲಾಖೆ ಸೇರಿದಂತೆ ಇತರೆ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗಾವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಮಂಗಳಮುಖಿಯರಲ್ಲಿ ಓದಿದವರು ಇದ್ದಾರೆ. ಅಂತಹವರಿಗೆ ಸರ್ಕಾರಿ ಉದ್ಯೋಗ ನೀಡಿದರೆ ಬದುಕಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.

 

 

 

ಜೊತೆಗೆ ಈ ಭಾರಿಯ ಕ್ರೀಡಾಕೂಟದಲ್ಲಿ ದೇಸೀಯ ಕ್ರೀಡೆಗಳ ಕಡೆ ಒಲವು ತೋರಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಲಗೋರಿ ಆಟವನ್ನು ಆಡುವುದರೊಂದಿಗೆ, ಗ್ರಾಮೀಣ ಹಾಗೂ ದೇಸೀಯ ಆಟಗಳಿಗೂ ಸಹ ಮನ್ನಣೆಯನ್ನು ನೀಡಿ ಮಾದರಿಯಾಗಿದ್ದಾರೆ.

 

 

 

 

ಮುಂದಿನ ದಿನಗಳಲ್ಲಿ ಮಂಗಳಮುಖಿಯರಿಗೆ ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಅಡಿಷನಲ್ ಎಸ್ಪಿ ಟಿ.ಜೆ. ಉದೇಶ್, ತಿಪಟೂರು ಉಪವಿಭಾಗದ ಎಎಸ್ಪಿ ಸಿದ್ದಾರ್ಥ ಸೇರಿದಂತೆ ಜಿಲ್ಲೆಯ ಎಲ್ಲ ಉಪವಿಭಾಗಾಗಳ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!