ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಸರ್ಕಾರದ ತಪ್ಪು ನಿರ್ಧಾರ _ಮಾಜಿ ಶಾಸಕ ರಫೀಕ್ ಅಹ್ಮದ್.
ತುಮಕೂರು_ಸೋಮವಾರ ರಾಜ್ಯಾದ್ಯಂತ ರಾಜ್ಯ ಸರ್ಕಾರ ಹಲವು ಜಿಲ್ಲೆಗಳ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ ಅವರನ್ನು ಸಹ ಬದಲಾವಣೆ ಮಾಡಿ ತುಮಕೂರಿಗೆ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿತ್ತು.
ಈ ಬಗ್ಗೆ ತುಮಕೂರಿನ ಕಾಂಗ್ರೆಸ್ನ ಮಾಜಿ ಶಾಸಕ ಡಾಕ್ಟರ ರಫೀಕ್ ಅಹಮದ್ ಪ್ರತಿಕ್ರಯಿಸಿದ್ದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಅದು ಅವರ ಪಕ್ಷದ ಆಂತರಿಕ ನಿರ್ಧಾರವಾಗಿದ್ದು ಆದರೂ ಸಹ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ ರವರನ್ನು ಯಾವ ಕಾರಣಕ್ಕೆ ಬದಲಾಯಿಸಿದ್ದಾರೆ ಎನ್ನುವುದು ಗೊತ್ತಿಲ್ಲ.
ಆದರೆ ಕರೋನ ಸಂದರ್ಭದಲ್ಲಿ ಉಸ್ತುವಾರಿ ಸಚಿವರ ಬದಲಾವಣೆ ಮಾಡಿರುವುದು ಸರ್ಕಾರದ ತಪ್ಪು ನಿರ್ಧಾರ ಎಂದು ತಿಳಿಸಿದರು .
ಮಾಧುಸ್ವಾಮಿ ರವರು ತುಮಕೂರು ಜಿಲ್ಲೆಯ ಶಾಸಕರಾಗಿದ್ದು ಜಿಲ್ಲೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದರು ಆದರೆ ಕರುನಾ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿರುವುದು ಸರಿಯಾದ ನಿರ್ಧಾರವಲ್ಲ .
ಇನ್ನು ತೀರ್ಥಹಳ್ಳಿ ಶಾಸಕರು ಹಾಗೂ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರನ್ನು ನೇಮಕ ಮಾಡಿದ್ದು ಇನ್ನು ನೂತನವಾಗಿ ನೇಮಕಗೊಂಡಿರುವ ಉಸ್ತುವಾರಿ ಸಚಿವರು ಜಿಲ್ಲೆಯ ಬಗ್ಗೆ ತಿಳಿದುಕೊಳ್ಳಲು ಸುಮಾರು ನಾಲ್ಕೈದು ತಿಂಗಳ ಸಮಯ ಹಿಡಿಯಲಿದೆ ಕರೋನಾ ಸಂದರ್ಭದಲ್ಲಿ ಉಸ್ತುವಾರಿ ಸಚಿವರ ಬದಲಾವಣೆ ಮಾಡಿರುವುದು ಸರಿಯಾದ ಕ್ರಮವಲ್ಲ.
ಇನ್ನು ರಾಜ್ಯದಲ್ಲಿ ಗೃಹ ಸಚಿವರ ಸ್ಥಾನ ಅತಿ ಪ್ರಮುಖವಾಗಿದ್ದು ಇನ್ನೂ ಗೃಹಸಚಿವರಿಗೂ ಸಹ ಹೆಚ್ಚಿನ ಒತ್ತಡ ಇರಲಿದೆ ಆದರೂ ಸಹ ತುಮಕೂರು ಜಿಲ್ಲೆಗೆ ನೇಮಕಮಾಡಿದೆ ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರವಾಗಿದೆ ಎಂದು ತಿಳಿಸಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು