ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದಲಿತ ಸಂಘಟನೆಗಳು

ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದಲಿತ ಸಂಘಟನೆಗಳು.

 

ತುಮಕೂರು _ವಾಲ್ಮೀಕಿ ಜಯಂತಿ ಆಚರಣೆ ಸಂದರ್ಭದಲ್ಲಿ ತುಮಕೂರು ಜಿಲ್ಲಾಡಳಿತ ಮೆರವಣಿಗೆಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸುವ ಮೂಲಕ ದಲಿತ ಸಂಘಟನೆಗಳು ತುಮಕೂರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

ದಲಿತರಿಗೆ ಅಂಬೇಡ್ಕರ್ ಜಯಂತಿ,  ವಾಲ್ಮೀಕಿ ಜಯಂತಿ ಹಾಗೂ ಜಗಜೀವನ್ ರಾಮ್ ಜಯಂತಿ ದಲಿತ ವರ್ಗಕ್ಕೆ ಬಹುದೊಡ್ಡ ಹಬ್ಬಗಳು ಆಗಿದ್ದು ಇಂತಹ ಜಯಂತಿಗಳನ್ನು ಆಚರಿಸುವ ಸಂದರ್ಭದಲ್ಲಿ ಜಿಲ್ಲಾಡಳಿತ ಕರೋನ ಹೆಸರಿನಲ್ಲಿ ದಲಿತವರ್ಗದ ಆಚರಣೆಗಳನ್ನು ಮೊಟಕುಗೊಳಿಸುವ ಪ್ರಯತ್ನ ಜಿಲ್ಲಾಡಳಿತದಿಂದ ನಡೆಯುತ್ತಿದೆ ಎಂದು ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.

 

ಇದೇ ಸಂದರ್ಭದಲ್ಲಿ ಮಾತನಾಡಿದ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಬಂಡೆ ಕುಮಾರ್ ಮಾತನಾಡಿ ರಾಜ್ಯದ್ಯಂತ ಸಾಲು ಸಾಲು ಚುನಾವಣೆಗಳನ್ನು ನಡೆಸುವ ಸರ್ಕಾರ, ಅರ್.ಎಸ್.ಎಸ್ ಪಥಸಂಚಲನ ನಡೆಸಲು ಅನುಮತಿ ನೀಡುತ್ತಾರೆ ಆದರೆ ವಾಲ್ಮೀಕಿ ಜಯಂತಿ ಮೆರವಣಿಗೆ ಮಾಡಲು ಜಿಲ್ಲಾಡಳಿತ ಕರೋನ ಸಾಂಕ್ರಾಮಿಕ ರೋಗದ ನೆಪದಲ್ಲಿ ನಿರ್ಬಂಧ ಹೇರಲು ಹೊರಟಿದ್ದಾರೆ ಇಂತಹ ನಿರ್ಧಾರ ದಲಿತ ವಿರೋಧಿಯಾಗಿದೆ ಇದರ ಮೂಲಕ ದಲಿತರ ಹಕ್ಕುಗಳನ್ನು ಕಸಿಯುವ ದೊಡ್ಡ ಹುನ್ನಾರ ನಡೆಯುತ್ತಿದೆ ಹಾಗಾಗಿ ವಾಲ್ಮೀಕಿ ಜಯಂತಿಯಂದು ನಾವು ಮೆರವಣಿಗೆ ಮಾಡಲಿದ್ದೇವೆ ಎಂದು ಬಂಡೆ ಕುಮಾರ್ ತಿಳಿಸಿದರು.

 

ಎರಡು ವರ್ಷದಿಂದ ಅಂಬೇಡ್ಕರ್ ಜಯಂತಿ ವಾಲ್ಮೀಕಿ ಜಯಂತಿಯನ್ನು ಬಾಬು ಜಗಜೀವನ್ ರಾಮ್ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಈಗ ಮೆರವಣಿಗೆಗೆ ನಿರ್ಬಂಧ ಹೇರಿದ್ದು ಇದು ಖಂಡನೀಯ ರಾಜ್ಯದ್ಯಂತ ದಸರಾ ಮೆರವಣಿಗೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಅದ್ದೂರಿಯಾಗಿ ನಡೆಸಲಾಗಿದೆ ಇನ್ನೂ ಚಿತ್ರಮಂದಿರಗಳಲ್ಲಿ ಶೇಕಡ ನೂರರಷ್ಟು ಅನುಮತಿ ನೀಡಿದ ಸರ್ಕಾರ ಈಗ ಉಪಚುನಾವಣೆಗಳನ್ನು ನಡೆಸುತ್ತಿದೆ ಆದರೆ ಇಂತಹ ಸಂದರ್ಭದಲ್ಲಿ ತುಮಕೂರು ಜಿಲ್ಲಾಡಳಿತ ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ಬಂಧ ಹೇರುತ್ತಿದೆ ಎಂದು ವಾಲ್ಮೀಕಿ ಕ್ರಾಂತಿ ಸೇನೆಯ ಕುಪ್ಪೂರು ಶ್ರೀಧರ್ ನಾಯಕ್ ತಿಳಿಸಿದರು.

 

ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಇನ್ನು ಪ್ರತಿಭಟನೆಯಲ್ಲಿ ಮುಖಂಡರಾದ ಬಿಟ್ಟನಕುರಿಕೆ ಜಯಣ್ಣ , ನಾಗೇಶ್ ,ರಂಗನಾಥ್, ಡ್ಯಗೆರಹಳ್ಳಿ ವಿರುಪಾಕ್ಷ, ಯಾದವ ಸಮಾಜದ ಮುಖಂಡರಾದ ಗೋವಿಂದರಾಜು ,ನಾಗಣ್ಣ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version