ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಸಲ್ಲಿಸಿದ ಯಲಚವಾಡಿ ನಾಗರಾಜ್.
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷದ ವತಿಯಿಂದ ನಾನು ಕೂಡ ಅರ್ಜಿ ಸಲ್ಲಿಸಿರುವುದಾಗಿ ಕಾಂಗ್ರೆಸ್ ಮುಖಂಡ ಹಾಗೂ ಆಡಿಟರ್ ಆದ ಯಲಚವಾಡಿ ನಾಗರಾಜ್ ಇಂದು ತುಮಕೂರಿನಲ್ಲಿ ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಒಟ್ಟು 5500 ಮತಗಳನ್ನು ಹೊಂದಿದ್ದು ಶೇಕಡಾ 50ರಷ್ಟು ಸಾಮಾನ್ಯ ವರ್ಗದ ಮತದಾರರಿದ್ದು, ಶೇಕಡ 18ರಷ್ಟು ಪರಿಶಿಷ್ಟ ಜಾತಿ ,ಶೇಕಡ 7ರಷ್ಟು ಎಸ್ಟಿ ಸಮುದಾಯ ಹಾಗೂ ಶೇಕಡಾ 25ರಷ್ಟು ಅಹಿಂದ ವರ್ಗಗಳ ಮತದಾರರಿದ್ದು.
ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು ತುಮಕೂರು ಜಿಲ್ಲೆ ಬೆಳಗಾಂ ನಂತರ ಅತಿದೊಡ್ಡ ಜಿಲ್ಲೆಯಾಗಿದ್ದು ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ನಮ್ ಆಶಯವಾಗಿದೆ. ಹಾಗಾಗಿ ಈ ಜಿಲ್ಲೆಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಹೋರಾಟ ಮಾಡುವ ಹಾಗೂ ಉತ್ತಮ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗೆ ಈ ಬಾರಿಯ ಮತದಾರರ ಆಶೀರ್ವಾದ ಸಿಗಲಿದೆ ಹಾಗಾಗಿ ಈ ಬಾರಿ ಉತ್ತಮ ವ್ಯಕ್ತಿಯನ್ನು ಗೆಲ್ಲಿಸುವುದು ಮತದಾರರ ಕರ್ತವ್ಯವಾಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ನಮ್ಮ ಪಕ್ಷದ ವತಿಯಿಂದ ನನಗೆ ಕೊಡಬೇಕು ಎಂದು ಹಠಹಿಡಿದಿಲ್ಲ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಾಕಷ್ಟು ಹಿರಿಯ ನಾಯಕರು ಹಾಗೂ ಆಕಾಂಕ್ಷಿಗಳು ಇದ್ದು ಎಲ್ಲರಿಗೂ ಅವಕಾಶ ಲಭ್ಯವಾಗಬೇಕು ಹಾಗಾಗಿ ಒಳ್ಳೆಯ ಅಭ್ಯರ್ಥಿಯಾನ್ನು ಗೆಲ್ಲಿಸುವುದು ಮತದಾರರ ಕರ್ತವ್ಯವಾಗಿದೆ ಎಂದರು.
ಇನ್ನೂ ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಸಹಜ.
ಈ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಯಲಚವಾಡಿ ನಾಗರಾಜುರವರು ರಾಜಕೀಯ ಎಂದ ಮೇಲೆ ಭಿನ್ನಾಭಿಪ್ರಾಯ ಆರೋಪಗಳು ಸಹಜ ಅದರಂತೆ ಕೆಲ ಮುಖಂಡರು ನಮ್ಮ ಮೇಲೆ ಆರೋಪ ಮಾಡಿದ್ದಾರೆ ಆರೋಪ ಮಾಡಿರುವ ಎಲ್ಲಾ ಮುಖಂಡರು ಹಾಗೂ ಹಿರಿಯರು ನನ್ನ ಆತ್ಮೀಯರಾಗಿದ್ದಾರೆ ಅವರು ಯಾರದೋ. …. ಒತ್ತಡದಿಂದ ಅಂತಹ ಆರೋಪಗಳನ್ನು ಮಾಡಿದ್ದಾರೆ ಎಂದರು.
ತುಮಕೂರು ಜಿಲ್ಲೆಯಲ್ಲಿ ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಕೋವಿಡ್ ಸಂದರ್ಭದಲ್ಲಿ ನನಗೆ ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದ್ದು ಆ ಸಮಯದಲ್ಲಿ ತುಮಕೂರು ಜಿಲ್ಲೆಯಲ್ಲಿ ನಾನು ಪಕ್ಷದ ಕಾರ್ಯಕರ್ತರನ್ನು ಬೇರೆಯಲು ಸಾಧ್ಯವಾಗಲಿಲ್ಲ ಆದರೆ ಪಕ್ಷ ನೀಡಿದ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದು ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ನಾಗರಾಜು ತಿಳಿಸಿದ್ದಾರೆ.
ವರದಿ_ ಮಾರುತಿ ಪ್ರಸಾದ್